ಸನಾತನದ ಆಶ್ರಮ ಮತ್ತು ಸೇವಾಕೇಂದ್ರಗಳಲ್ಲಿ ವಾಸಿಸುವ ಸಾಧಕರು, ಹಾಗೆಯೇ ಪ್ರಸಾರದ ಸೇವೆಯನ್ನು ಮಾಡುವ ಸಾಧಕರು ಹಾಗೂ ಅವರ ಕುಟುಂಬದವರಿಗೆ ಆಪತ್ಕಾಲದಲ್ಲಿ ತುರ್ತಾಗಿ ವೈದ್ಯಕೀಯ ಸೌಲಭ್ಯ ದೊರಕಲು ೩ ತುರ್ತುರೋಗಿವಾಹಕ (ಅಂಬ್ಯುಲನ್ಸ್)ಗಳ ಆವಶ್ಯಕತೆ ಇದೆ!

ತುರ್ತುರೋಗಿವಾಹಕಗಳ ಖರೀದಿಗಾಗಿ ಧನರೂಪದಲ್ಲಿ ಸಹಾಯ ಮಾಡಲು ಇಚ್ಛಿಸುವ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು, ಮುಂದಿನ ಕ್ರಮಾಂಕಕ್ಕೆ ಸಂಪರ್ಕಿಸಬೇಕು.

ಸಾಪ್ತಾಹಿಕ ಮತ್ತು ಪಾಕ್ಷಿಕ ‘ಸನಾತನ ಪ್ರಭಾತ’ಗಳಲ್ಲಿ ಮುದ್ರಿತ ಲೇಖನಗಳನ್ನು ಈಗ ಜಾಲತಾಣದ ಒಂದೇ `ಲಿಂಕ್’ನಲ್ಲಿ ವೀಕ್ಷಿಸುವ ಸೌಲಭ್ಯ ಲಭ್ಯ !

ಈ ಪೋಸ್ಟ್ ಗಳು ಕನ್ನಡ ಸಾಪ್ತಾಹಿಕದ ಲಿಂಕ್‍ನಲ್ಲಿ ಒಂದು ವಾರದ ವರೆಗೆ ಮತ್ತು ಹಿಂದಿ ಮತ್ತು ಆಂಗ್ಲ ಪಾಕ್ಷಿಕದ ಲಿಂಕ್‍ನಲ್ಲಿ ಪೂರ್ಣ ಹದಿನೈದು ದಿನಗಳ ವರೆಗೆ, ಹಾಗೂ ಮರಾಠಿ ಲಿಂಕ್‍ನಲ್ಲಿ ಆಯಾ ದಿನದ ಪೋಸ್ಟ್ ಗಳು ಕಾಣಿಸಿಕೊಳ್ಳುತ್ತವೆ.

ರಾಷ್ಟ್ರ, ಧರ್ಮ ಮತ್ತು ಅಧ್ಯಾತ್ಮ ಇವುಗಳ ವಿಷಯದಲ್ಲಿ ಮಾರ್ಗದರ್ಶಕವಾಗಿರುವ ‘ಸನಾತನ ಪಂಚಾಂಗ ೨೦೨೨ರ ಬೇಡಿಕೆಯನ್ನು ನೋಂದಾಯಿಸಿ !

ಚೈತನ್ಯದ ಸ್ರೋತವಾಗಿರುವ ಈ ಪಂಚಾಂಗವು ಬ್ರಾಹ್ಮತೇಜ ಮತ್ತು ಕ್ಷಾತ್ರತೇಜ ಇವುಗಳ ಅದ್ಭುತವಾದ ಸಂಗಮವೇ ಆಗಿದೆ.

ಸನಾತನದ ಗ್ರಂಥಗಳನ್ನು ಅನುವಾದ ಮಾಡಲು ಸಹಾಯ ಮಾಡಬೇಕಾಗಿ ವಿನಂತಿ

ಮರಾಠಿ, ಹಿಂದಿ ಅಥವಾ ಆಂಗ್ಲ ಭಾಷೆಯಿಂದ ಕನ್ನಡ ಭಾಷೆಗೆ ಅನುವಾದ ಮಾಡುವ ಸೇವೆ, ಅದೇ ರೀತಿ ಕನ್ನಡದಿಂದ ಇತರ ಭಾರತೀಯ ಭಾಷೆಗಳಾದ ತಮಿಳು, ತೆಲುಗು, ಮಲಯಾಳಂ ಮುಂತಾದ ಭಾಷೆಗಳಿಗೆ ಅನುವಾದ ಮಾಡುವ ಸೇವೆ ಲಭ್ಯವಿದೆ.

ಸನಾತನದ ರಾಮನಾಥಿ ಆಶ್ರಮ, ಹಾಗೆಯೇ ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಲ್ಲಿ ತೋಟಗಾರಿಕೆ ಸೇವೆಯನ್ನು ಮಾಡಲು ಮನುಷ್ಯಬಲದ ಅವಶ್ಯಕತೆ !

ಕೃಷಿ ಕೆಲಸವನ್ನು ಮಾಡಲು ಇಚ್ಛಿಸುವ, ಶಾರೀರಿಕ ಸೇವೆಯನ್ನು ಮಾಡಬಹುದಾದ, ಕೃಷಿಯನ್ನು ಮಾಡುವ ಅನುಭವವಿರುವ ಮತ್ತು ಅನುಭವವಿರದಿದ್ದರೂ ಈ ರೀತಿಯ ಸೇವೆಯನ್ನು ಕಲಿಯಲು ಇಚ್ಛಿಸುವ ಸಾಧಕರು ಈ ಸೇವೆಯಲ್ಲಿ ಪಾಲ್ಗೊಳ್ಳಬಹುದು.

ತಮ್ಮ ಮೃತ್ಯುಪತ್ರವನ್ನು (ಇಚ್ಛಾಪತ್ರವನ್ನು) ಸಿದ್ಧಪಡಿಸಿರಿ ಮತ್ತು ಅದರಿಂದಾಗುವ ಲಾಭವನ್ನು ಗಮನದಲ್ಲಿರಿಸಿ ಸಂಭಾವ್ಯ ಅಡಚಣೆಗಳನ್ನು ತಡೆಗಟ್ಟಿರಿ !

ತಮ್ಮ ವಾರಸುದಾರರು ಇದ್ದರೆ ಅಥವಾ ಇಲ್ಲದಿದ್ದರೆ ‘ಯಾವುದೇ ಕಾರಣದಿಂದ ಎಲ್ಲ ಸಂಬಂಧವನ್ನು ಮುರಿದಿರುವಂತಹ ಸಂಬಂಧಿಕರೂ ಮರಣದ ನಂತರ ಸಂಪತ್ತನ್ನು ಕಬಳಿಸುವ ಅಪಾಯವನ್ನು ಇಚ್ಛಾಪತ್ರವನ್ನು ಮಾಡಿ ಇಡುವುದರಿಂದ ತಪ್ಪಿಸಬಹುದು.

ಗುರುಕಾರ್ಯಕ್ಕಾಗಿ ಅರ್ಪಣೆ ರೂಪದಲ್ಲಿ ದೊರೆತ ಧನವನ್ನು ಅಪವ್ಯಯ ಮಾಡುವವರ ಮಾಹಿತಿ ತಿಳಿಸಿ

ಅನೇಕ ಹಿತಚಿಂತಕರು ಸನಾತನದ ರಾಷ್ಟ್ರ ಮತ್ತು ಧರ್ಮ ಇವುಗಳ ಕಾರ್ಯಕ್ಕಾಗಿ ಆಯಾ ಸಮಯದಲ್ಲಿ ಧನ ಅಥವಾ ವಸ್ತು ಸ್ವರೂಪದಲ್ಲಿ ಅರ್ಪಣೆ ನೀಡುತ್ತಿರುತ್ತಾರೆ. ಈ ಅರ್ಪಣೆಯನ್ನು ಯೋಗ್ಯ ಸ್ಥಳಕ್ಕೆ ತಲುಪಿಸುವುದು ಪ್ರತಿಯೊಬ್ಬ ಸಾಧಕನ ಕರ್ತವ್ಯವಾಗಿರುತ್ತದೆ. ಒಂದೆಡೆ ಮಾತ್ರ ಈ ಅರ್ಪಣೆಯ ಅಪವ್ಯಯವಾಗಿರುವುದು ಗಮನಕ್ಕೆ ಬಂದಿದೆ.

ಸನಾತನದ ಸಾಧಕರು, ಹಿತಚಿಂತಕರು ಹಾಗೂ ಧರ್ಮಪ್ರೇಮಿಗಳ ಭಾವ ಮತ್ತು ಆತ್ಮೀಯತೆಯನ್ನು ದುರುಪಯೋಗಿಸಿಕೊಂಡು ಹಣ ಸಂಗ್ರಹಿಸುವ ತಥಾಕಥಿತ ಸ್ವಾಮಿಗಳಿಂದ ಜಾಗರೂಕರಾಗಿರಿ !

ಓರ್ವ  ಹಿತಚಿಂತಕರಿಗೆ  ‘ನೀವು ಬಾಡಿಗೆ ಮನೆಯಲ್ಲಿ ಎಷ್ಟು ಸಮಯ ಇರುತ್ತೀರಿ. ನೀವೇ ಮನೆ ಮಾಡಬಹುದಲ್ಲ ಎಂದು ಹೇಳುವುದು, ಓರ್ವ ಸಾಧಕರ ಮನೆಯಲ್ಲಿ ಅವರ ಅಡಚಣೆಗೆ ಉಪಾಯವೆಂದು ಮನೆಯಲ್ಲಿ ತೆಂಗಿನಕಾಯಿಯ ದೃಷ್ಟಿ  ನಿವಾಳಿಸಿ ಅದನ್ನು ಮನೆಯೊಳಗೆ ಒಡೆಯುವುದು ಇಂತಹವುಗಳನ್ನು ಮಾಡುತ್ತಿದ್ದಾರೆ.

ಸನಾತನ ಸಂಸ್ಥೆಗಾಗಿ ಅರ್ಪಣೆ ನೀಡುವಾಗ ಅವರು ಸಂಸ್ಥೆಯ ಅಧಿಕೃತ ಟ್ರಸ್ಟ್‌ಗಾಗಿ ನೀಡುತ್ತಿದ್ದೇವಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ !

ಸನಾತನ ಸಂಸ್ಥೆಯ ಆಧ್ಯಾತ್ಮಿಕ ಕಾರ್ಯಕ್ಕಾಗಿ ಅಥವಾ ಆಶ್ರಮಕ್ಕಾಗಿ ಅರ್ಪಣೆ ನೀಡಲಿಕ್ಕಿದ್ದರೆ ‘ಸಂಸ್ಥೆಯ ಅಧಿಕೃತ ಟ್ರಸ್ಟ್‌ಗಾಗಿ ನೀಡುತ್ತಿದ್ದೇವೆಯಲ್ಲ ಎಂದು ಖಚಿತಪಡಿಸಿಕೊಳ್ಳಬೇಕು. ತಾವು ಪಾವತಿಪುಸ್ತಕದಲ್ಲಿರುವ ಹೆಸರನ್ನು ನೋಡಿ ಅಥವಾ ಸ್ಥಳೀಯ ಜವಾಬ್ದಾರ ಸಾಧಕರೊಂದಿಗೆ ಮಾತನಾಡಿ ಇದನ್ನು ಖಚಿತಪಡಿಸಿಕೊಳ್ಳಬಹುದು.

ಗುರುಪೂರ್ಣಿಮೆ ನಿಮಿತ್ತ ಗುರುಕಾರ್ಯ ಅಂದರೆ ಧರ್ಮಕಾರ್ಯಕ್ಕಾಗಿ ಧನವನ್ನು ಅರ್ಪಿಸಿ !

ಹಿಂದೂಜನಜಾಗೃತಿ ಸಮಿತಿಯು ಸಮಾಜ, ರಾಷ್ಟ್ರ ಮತ್ತು ಧರ್ಮದ ಕಲ್ಯಾಣ ಕ್ಕಾಗಿ ನಿರಂತರ ಕಾರ್ಯವನ್ನು ಮಾಡುತ್ತಿದೆ. ಅದರ ಅಂತರ್ಗತ ವ್ಯಕ್ತಿತ್ವ ವಿಕಸನ, ಅಧ್ಯಾತ್ಮ ಮತ್ತು ಧರ್ಮಶಿಕ್ಷಣ ಇತ್ಯಾದಿಗಳ ಕುರಿತು ವ್ಯಾಖ್ಯಾನಗಳನ್ನು ನೀಡುವುದು ಇತ್ಯಾದಿ ಮಾಡುತ್ತಿದೆ. ಆದ್ದರಿಂದ, ಅರ್ಪಣೆದಾರರು ಹಿಂದೂ ಜನಜಾಗೃತಿ ಸಮಿತಿಗೆ ಮಾಡಿದ ಅರ್ಪಣೆಯನ್ನು ಖಂಡಿತವಾಗಿ ಧರ್ಮ ಕಾರ್ಯಕ್ಕಾಗಿ ವಿನಿಯೋಗಿಸಲಿದೆ.