ಪಾಟಲಿಪುತ್ರ (ಬಿಹಾರ) ದ ಖಾಸಗಿ ಆಸ್ಪತ್ರೆಯಲ್ಲಿ ಕೊರೋನಾ ಪೀಡಿತನ ಮುಂದೆಯೇ ಆತನ ಪತ್ನಿಯೊಂದಿಗೆ ಅನುಚಿತ ವರ್ತನೆ

ಇಲ್ಲಿಯ ಖಾಸಗಿ ಆಸ್ಪತ್ರೆಯಲ್ಲಿ ಓರ್ವ ಮಹಿಳೆಯು ತನ್ನ ಪತಿಯನ್ನು ಕೊರೊನಾ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಆಮ್ಲಜನಕದ ಕೊರತೆಯಿಂದ ಅದರ ಕಾಳಸಂತೆ ನಡೆಯುತ್ತಿತ್ತು. ಈ ಮಹಿಳೆ ಆಮ್ಲಜನಕವನ್ನು ಖರೀದಿಸಲು ಹೆಚ್ಚು ಹಣವನ್ನು ಪಾವತಿಸಿದಳು; ಆದರೆ ಅವಳಿಗೆ ತನ್ನ ಪತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಸಾಧಕರಿಗೆ ಪರಾತ್ಪರ ಗುರು ಡಾ. ಆಠವಲೆಯವರ ಶ್ರೀವಿಷ್ಣುರೂಪ ದರ್ಶನ ಮಾಡಿಸುವ ಪರ್ವವಾದ ‘ಆನ್‌ಲೈನ್ ಭಾವ ಸಮಾರಂಭ

ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆಯವರ ಜನ್ಮೋತ್ಸವವೆಂದರೆ ಸಾಧಕರಿಗೆ ಚೈತನ್ಯ ಹಾಗೂ ಆನಂದದ ಸುರಿಮಳೆಯನ್ನೇ ಸುರಿಸುವ ಮಹೋತ್ಸವದ ದಿನ ! ಪ್ರೀತಿ ಸ್ವರೂಪ, ಕೃಪಾವತ್ಸಲ, ಕರುಣಾಕರ ಇಂತಹ ಶ್ರೀಗುರುಗಳ ಕೇವಲ ದರ್ಶನದಿಂದಲೇ ಭಯಮುಕ್ತ, ಚಿಂತಾಮುಕ್ತರಾಗಿ ಸಂಕಟಗಳ ಭವಸಾಗರದಿಂದ ಪಾರಾಗುತ್ತಾರೆ.

ಬನಾಸಕಾಂಠಾ (ಗುಜರಾತ) ನ ಹಳ್ಳಿಯಲ್ಲಿನ ಗೋಶಾಲೆಯಲ್ಲಿ ಕೋವಿಡ್ ಸೆಂಟರ !

ಇಲ್ಲಿಯ ತೆತೊಡಾ ಗ್ರಾಮದಲ್ಲಿ ಒಂದು ಗೋಶಾಲೆಯನ್ನು ಕೋವಿಡ್ ಸೆಂಟರ್‌ನ್ನಾಗಿ ಪರಿವರ್ತಿಸಲಾಗಿದೆ. ಇಲ್ಲಿನ ರೋಗಿಗಳಿಗೆ ಹಸುವಿನ ಹಾಲು ಮತ್ತು ಗೋಮೂತ್ರದಿಂದ ತಯಾರಿಸಿದ ಔಷಧಿಗಳ ಸಹಾಯದಿಂದ ಚಿಕಿತ್ಸೆ ನೀಡಲಾಗುತ್ತಿದೆ.

ಆಕ್ಸಿಜನ್ ಟ್ಯಾಂಕರ್‌ನ ಚಾಲಕನಿಗೆ ರಸ್ತೆ ತಿಳಿಯದ ಪರಿಣಾಮ ೭ ಕೊರೋನಾ ರೋಗಿಗಳು ಆಮ್ಲಜನಕದ ಕೊರತೆಯಿಂದ ಮೃತ್ಯು

ಇಲ್ಲಿಯ ಆಮ್ಲಜನಕ ಟ್ಯಾಂಕರ್‌ಗೆ ದಾರಿ ತಪ್ಪಿದ ಕಾರಣದಿಂದ ೭ ಕೊರೋನಾ ಪೀಡಿತರಿಗೆ ಆಮ್ಲಜನಕವನ್ನು ತಲುಪಿಸಲು ವಿಳಂಬವಾಯಿತು. ಆದ್ದರಿಂದ ಅವರು ತಮ್ಮ ಪ್ರಾಣವನ್ನು ಕಳೆದುಕೊಳ್ಳಬೇಕಾಯಿತು. ಕೊರೋನಾ ರೋಗಿಗಳಿಗೆ ಇಲ್ಲಿನ ಕಿಂಗ್ ಕೋಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರಲ್ಲಿ ೭ ಮಂದಿ ಗಂಭೀರ ಸ್ಥಿತಿಯಲ್ಲಿದ್ದರು.

ಕೊರೊನಾಗ್ರಸ್ತ ಶವಗಳಿಂದ ಬಟ್ಟೆಗಳನ್ನು ಕದ್ದು ಅವುಗಳ ಮೇಲೆ ‘ಬ್ರಾಂಡೆಡ್’ ಸಂಸ್ಥೆಗಳ ಲೋಗೊಗಳನ್ನು ತಗಲಿಸಿ ಮಾರಾಟ ಮಾಡುತ್ತಿದ್ದ ಗ್ಯಾಂಗ್‌ನ ಬಂಧನ.

ಸ್ಮಶಾನ ಭೂಮಿಯಲ್ಲಿ ಕೊರೊನಾ ಪೀಡಿತ ಮೃತಪಟ್ಟ ವ್ಯಕ್ತಿಗಳ ದೇಹಗಳ ಮೇಲೆ ಬಟ್ಟೆಯ ಮೇಲೆ ‘ಬ್ರಾಂಡೆಡ್’ ಸಂಸ್ಥೆಗಳ ಲೋಗೊಗಳನ್ನು ಹಾಕಿ ಅವುಗಳನ್ನು ಮಾರಾಟ ಮಾಡುತ್ತಿದ್ದ ಏಳು ಜನರ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ.

ಕೊರೊನಾದ ನಿಯಮಗಳನ್ನು ಉಲ್ಲಂಘಿಸಿ ಮಸೀದಿಗಳಲ್ಲಿ ಸಾಮೂಹಿಕ ನಮಾಜ ಪಠಣ !

ಕೊರೊನಾದ ಹೆಚ್ಚುತ್ತಿರುವ ಬಿಕ್ಕಟ್ಟಿನಿಂದ ರಾಜ್ಯದಲ್ಲಿ ಕರ್ಫ್ಯೂ(ಸಂಚಾರ ನಿರ್ಬಂಧ) ಹೇರಲಾಗಿದೆ. ಎಲ್ಲ ರೀತಿಯ ಕಾರ್ಯಕ್ರಮಗಳ ಮೇಲೆ ನಿಷೇಧ ಹೇರಲಾಗಿದೆ. ಹೀಗಿರುವಾಗಲೂ, ಛತರಪುರದ ನೌಗಾವಾದಲ್ಲಿರುವ ಜಾಮಾ ಮಸೀದಿ ಮತ್ತು ಪಲಟನ ಮಸೀದಿಯಲ್ಲಿ ಸಾಮೂಹಿಕ ನಮಾಜು ಪಠಣ ಮಾಡಲಾಯಿತು. ಆದ್ದರಿಂದ ಪೊಲೀಸರು ೨ ಮೌಲ್ವಿ ಸಹಿತ ೨೦೦ ಜನರ ವಿರುದ್ಧ ಅಪರಾಧವನ್ನು ದಾಖಲಿಸಿದ್ದಾರೆ.

ಯಾವುದೇ ಧಾರ್ಮಿಕ ಸಮೂಹದಿಂದ ಯಾವುದೇ ರೀತಿಯ ಅಸಹಿಷ್ಣುತನವನ್ನು ತಡೆಗಟ್ಟಬೇಕು !

ಕೇವಲ ಒಂದು ಪ್ರದೇಶದಲ್ಲಿ ಒಂದು ನಿರ್ದಿಷ್ಠ ಧರ್ಮದ ಬಹುಸಂಖ್ಯಾತ ಜನರು ಮಾತ್ರ ವಾಸಿಸುತ್ತಿದ್ದಾರೆ; ಎಂಬ ಕಾರಣದಿಂದ ಇತರ ಧರ್ಮಗಳ ಹಬ್ಬಗಳ ಆಚರಣೆ ಅಥವಾ ರಸ್ತೆಯಲ್ಲಿ ಮೆರವಣಿಗೆಗಳನ್ನು ನಡೆಸುವುದನ್ನು ತಡೆಗಟ್ಟಲು ಆಗುವುದಿಲ್ಲ ಎಂದು ಮದ್ರಾಸ ಉಚ್ಚ ನ್ಯಾಯಾಲಯವು ಒಂದು ಅರ್ಜಿಯ ವಿಚಾರಣೆಯ ಸಮಯದಲ್ಲಿ ತೀರ್ಪು ನೀಡಿದೆ.

‘ಡಿ.ಆರ್.ಡಿ.ಒ.’ನ ‘೨ ಡಿಯೋಕ್ಸಿ-ಡಿ-ಗ್ಲೂಕೋಸ್ (೨-ಡಿಜಿ) ಈ ಕೊರೋನಾ ಪ್ರತಿರೋಧಕ ಔಷಧಿಗೆ ಒಪ್ಪಿಗೆ

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (‘ಡಿ.ಆರ್.ಡಿ.ಒ.’ವು) ಅಭಿವೃದ್ಧಿಪಡಿಸಿದ ಕೊರೊನಾ ಪ್ರತಿರೋಧಕ ‘೨ ಡಿಯೋಕ್ಸಿ-ಡಿ-ಗ್ಲೂಕೋಸ್’ (೨-ಡಿಜಿ) ಅನ್ನು ಈ ಔಷಧಿಯನ್ನು ಔಷಧ ಮಹಾನಿಯಂತ್ರಕರು ತುರ್ತು ಬಳಕೆಗಾಗಿ ಅನುಮೋದಿಸಿದ್ದಾರೆ.

ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಅವಳ ಮೇಲೆ ಮಾತೃತ್ವವನ್ನು ಹೇರಿದ ಪಾದ್ರಿಯ ಬಂಧನ !

ಪಟ್ಟಣದ ಸಮೀಪದಲ್ಲಿರುವ ‘ಲುಥರನ್ ಮಹಿಳಾ ಸಮಿತಿ’ ಈ ಮಕ್ಕಳ ಶ್ರುಶ್ರೂಷೆ ಗೃಹ ಮತ್ತು ವೃದ್ಧಾಶ್ರಮದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಆಕೆಯ ಮೇಲೆ ಮಾತೃತ್ವವನ್ನು ಹೇರಿದ ಪ್ರಕರಣದಲ್ಲಿ ಕುಂಜ್‌ಬಿಹಾರಿ ದಾಸ ಎಂಬ ೬೦ ವರ್ಷದ ಪಾದ್ರಿಯನ್ನು ಬಂಧಿಸಲಾಗಿದೆ.

ಪ.ಪೂ. ಆಸಾರಾಮಜಿ ಬಾಪೂ ಅವರಿಗೆ ಜಾಮೀನು ನೀಡುವಂತೆ ಹಿಂದೂ ಜನಜಾಗೃತಿ ಸಮಿತಿಯ ಒತ್ತಾಯ

ಪೂ. ಆಸಾರಾಮಜಿ ಬಾಪೂರವರಿಗೆ ಜೈಲಿನಲ್ಲಿ ಕೊರೋನಾ ಸೋಂಕು ತಗಲಿದ ಮೇಲೆ ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ಸಿಗದೇ ಇದ್ದರಿಂದ ಅವರನ್ನು ಜೋಧಪುರದ ಮಹಾತ್ಮ ಗಾಂಧಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಇದರಿಂದ ರಾಜಸ್ಥಾನ ಸರಕಾರದ ದುರ್ಲಕ್ಷತನ ಕಂಡುಬರುತ್ತದೆ.