‘ಡಿ.ಆರ್.ಡಿ.ಒ.’ನ ‘೨ ಡಿಯೋಕ್ಸಿ-ಡಿ-ಗ್ಲೂಕೋಸ್ (೨-ಡಿಜಿ) ಈ ಕೊರೋನಾ ಪ್ರತಿರೋಧಕ ಔಷಧಿಗೆ ಒಪ್ಪಿಗೆ

ಆಮ್ಲಜನಕದ ಅವಲಂಬನೆಯನ್ನು ಕಡಿಮೆಗೊಳಿಸುತ್ತದೆ !

ನವ ದೆಹಲಿ – ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (‘ಡಿ.ಆರ್.ಡಿ.ಒ.’ವು) ಅಭಿವೃದ್ಧಿಪಡಿಸಿದ ಕೊರೊನಾ ಪ್ರತಿರೋಧಕ ‘೨ ಡಿಯೋಕ್ಸಿ-ಡಿ-ಗ್ಲೂಕೋಸ್’ (೨-ಡಿಜಿ) ಅನ್ನು ಈ ಔಷಧಿಯನ್ನು ಔಷಧ ಮಹಾನಿಯಂತ್ರಕರು ತುರ್ತು ಬಳಕೆಗಾಗಿ ಅನುಮೋದಿಸಿದ್ದಾರೆ. ಈ ಔಷಧಿಯನ್ನು ಕೊರೊನಾದ ಸೌಮ್ಯದಿಂದ ತೀವ್ರವಾದ ರೋಗಲಕ್ಷಣಗಳಲ್ಲಿರುವ ರೋಗಿಗಳಲ್ಲಿ ‘ಸಹಾಯಕ ಚಿಕಿತ್ಸಾ ವಿಧಾನ’ ವಾಗಿ ಬಳಸಲಾಗುತ್ತದೆ. ೨-ಡಿಜಿ ಈ ಔಷಧಿಯು ಪುಡಿಯ ರೂಪದಲ್ಲಿ ಬರುತ್ತದೆ. ಇದನ್ನು ನೀರಿನೊಂದಿಗೆ ಬೆರೆಸಿ ಸೇವಿಸಲಾಗುತ್ತದೆ.

೧. ರಕ್ಷಣಾ ಸಚಿವಾಲಯದ ಪ್ರಕಾರ, ‘೨-ಡಿಜಿ’ ಔಷಧವು ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಹೆಚ್ಚುವರಿ ಆಮ್ಲಜನಕದ ಪೂರೈಕೆಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಎಂದು ಪರೀಕ್ಷಣೆಯಲ್ಲಿ ಕಂಡುಬಂದಿದೆ.

ಕೊರೊನಾದ ಎರಡನೇ ಅಲೆಯಲ್ಲಿ, ಹೆಚ್ಚಿನ ಸಂಖ್ಯೆಯ ರೋಗಿಗಳು ಆಮ್ಲಜನಕವನ್ನು ಅವಲಂಬಿಸಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಬೇಕಾಗುತ್ತದೆ. ಸೋಂಕಿತ ಕೋಶಗಳಲ್ಲಿ ಈ ಔಷಧವು ಯಾವರೀತಿ ಕಾರ್ಯನಿರ್ವಹಿಸುತ್ತದೆ ಎಂದರೆ ಇದರಿಂದ ಜೀವಗಳನ್ನು ಉಳಿಸಬಹುದು ಎಂದು ನಿರೀಕ್ಷಿಸಲಾಗಿದೆ. ಈ ಔಷಧವು ಕೊರೋನಾ ರೋಗಿಗಳ ಆಸ್ಪತ್ರೆಯ ವಾಸ್ತವ್ಯವನ್ನು ಕಡಿಮೆ ಮಾಡುತ್ತದೆ. ಈ ಔಷಧವನ್ನು ಸುಲಭವಾಗಿ ತಯಾರಿಸಬಹುದು ಮತ್ತು ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗಿಸಬಹುದು ಎಂದು ರಕ್ಷಣಾ ಸಚಿವಾಲಯವು ಸ್ಪಷ್ಟ ಪಡಿಸಿದೆ.

೨. ೨-ಡಿಜಿ’ ಔಷಧವು ಸೋಂಕಿತರ ಕೋಶಗಳಲ್ಲಿ ಸಂಗ್ರಹವಾಗುತ್ತದೆ ಮತ್ತು ರೋಗಾಣುಗಳ ಬೆಳವಣಿಗೆಯನ್ನು ತಡೆಯುತ್ತದೆ. ರೋಗಾಣುವಿನ ಸೊಂಕು ತಗಲಿದ ಕೋಶದಲ್ಲಿ ಸಂಗ್ರಹವಾಗುವುದು ಇದು ಈ ಔಷಧಿಯ ವೈಶಿಷ್ಟ್ಯವಾಗಿದೆ.