|
ಮುಂಬಯಿ – ‘ದೈನಿಕ ಲೋಕಸತ್ತಾ’ ದಿನಪತ್ರಿಕೆಯು ಅಕ್ಟೋಬರ್ 7 ರಂದು, ತನ್ನ ಅಧಿಕೃತ ಸಂಕೇತಸ್ಥಳವಾದ ‘www.loksatta.com’ ನಲ್ಲಿ ‘ಸನಾತನ ಸಂಸ್ಥೆಯ ನಿರೂಪಿತ ಸದಸ್ಯನ ಮನೆ-ಗೋದಾಮಿನಿಂದ 20 ಬಾಂಬ್ ಜಪ್ತು, ಉಚ್ಚನ್ಯಾಯಾಲಯದಿಂದ ಜಾಮೀನು ಮಂಜೂರು’ ಎಂಬ ಸುದ್ದಿ ಪ್ರಕಟಿಸಿದೆ. ಈ ಪ್ರಕರಣದಲ್ಲಿನ ಶ್ರೀ. ವೈಭವ ರಾವುತ ರವರಿಗೆ ಜಾಮೀನು ಸಿಕ್ಕಿರುವ ವಿಷಯದ ಕುರಿತಾದ ಈ ಸುದ್ದಿಯಲ್ಲಿ ಅವರ ಭಾವಚಿತ್ರದ ಬದಲಾಗಿ ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ ರಾಜಹಂಸರವರ ಛಾಯಾಚಿತ್ರವನ್ನು ಪ್ರಕಟಿಸಲಾಗಿದೆ. ವಾರ್ತೆಯಲ್ಲಿ ಯಾವುದೇ ಸಂದರ್ಭವಿಲ್ಲದಿದ್ದರೂ ಶ್ರೀ. ಚೇತನ ರಾಜಹಂಸರ ಛಾಯಾಚಿತ್ರವನ್ನು ಪ್ರಕಟಿಸಿ ಈ ಸುದ್ದಿಯಲ್ಲಿ ಚೇತನ ರಾಜಹಂಸ ಆರೋಪಿಯಾಗಿದ್ದಾರೆ ಎಂದು ತೋರಿಸಲಾಗಿದೆ. ಒಂದು ದಿನದ ನಂತರ ಶ್ರೀ. ರಾಜಹಂಸ ಇವರ ಚಿತ್ರ ಜಾಲತಾಣದಿಂದ ತೆಗೆದಿರುವುದು ಗಮನಕ್ಕೆ ಬಂದಿದೆ. ಈ ಸುದ್ದಿಯಿಂದಾಗಿ ಸಮಾಜದಲ್ಲಿ ತಮ್ಮ ಅಪಖ್ಯಾತಿಯಾಗಿದೆ ಎಂದು ಶ್ರೀ. ಚೇತನ ರಾಜಹಂಸರವರು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ವರದಿಯಲ್ಲಿ ಎಲ್ಲಿಯೂ ಶ್ರೀ. ಚೇತನ ರಾಜಹಂಸ ರವರ ಪ್ರತಿಕ್ರಿಯೆ ಅಥವಾ ಅವರ ಹೆಸರಿನ ಉಲ್ಲೇಖವಿಲ್ಲ. ಅವರ ಛಾಯಾಚಿತ್ರವನ್ನು ಈ ಸುದ್ದಿಯಲ್ಲಿ ಪ್ರಕಟಿಸಲಾಗಿರುವುದರಿಂದ ಸುದ್ದಿಯನ್ನು ಓದುವವರಿಗೆ ಈ ಛಾಯಾಚಿತ್ರವು ಶ್ರೀ. ವೈಭವ ರಾವುತರದ್ದಾಗಿದೆ ಎಂದು ತೋರುತ್ತದೆ. ಇದರಿಂದಾಗಿ ಈ ಸುದ್ದಿಯಿಂದ ಶ್ರೀ. ಚೇತನ ರಾಜಹಂಸರವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ ಎಂದು ಅನಿಸುತ್ತದೆ. ಈ ಪ್ರಕರಣದಲ್ಲಿ ಜಾಮೀನು ಪಡೆದಿರುವ ಶ್ರೀ. ವೈಭವ ರಾವುತರವರು ‘ಹಿಂದೂ ಗೋವಂಶ ರಕ್ಷಾ ಸಮಿತಿ’ಯ ಕಾರ್ಯಕರ್ತರಾಗಿದ್ದಾರೆ. ಹೀಗಿರುವಾಗಲೂ ಲೋಕಸತ್ತಾದ ಸುದ್ದಿಯಲ್ಲಿ ಶ್ರೀ. ವೈಭವ ರಾವುತರನ್ನು ‘ಸನಾತನ ಸಂಸ್ಥೆಯ ನಿರೂಪಿತ ಸದಸ್ಯ’ ಎಂದು ಉಲ್ಲೇಖಿಸಲಾಗಿದೆ. ಈ ಮೂಲಕ ಸನಾತನ ಸಂಸ್ಥೆಯನ್ನೂ ಅವಮಾನ ಮಾಡಲಾಗಿದೆ.