ಅಸ್ಸಾಂನ ಚಾರ ಚೋಪರಿ ಪ್ರದೇಶದ ಮುಸಲ್ಮಾನರಲ್ಲಿ ಮುಂದಿನ ೧೦ ವರ್ಷ ಮತ ಕೇಳುವುದಿಲ್ಲ ! – ಹಿಮಂತ ಬಿಸ್ವ ಸರಮಾ

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರ ಘೋಷಣೆ !

ಗೋಹಾಟಿ (ಅಸ್ಸಾಂ) – ನಮ್ಮ ಪಕ್ಷ ಮುಂದಿನ ೧೦ ವರ್ಷ ರಾಜ್ಯದ ಚಾರ ಚೋಪರಿ ಪ್ರದೇಶದಲ್ಲಿ ಮುಸಲ್ಮಾನರ ಬಳಿ ಮತ ಕೇಳುವುದಿಲ್ಲ, ಎಂದು ಭಾಜಪದ ನಾಯಕ ಮತ್ತು ರಾಜ್ಯದ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರು ಒಂದು ಕಾರ್ಯಕ್ರಮದಲ್ಲಿ ಘೋಷಣೆ ಮಾಡಿದರು.

ಮುಖ್ಯಮಂತ್ರಿ ಸರಮಾ ಮಾತು ಮುಂದುವರೆಸುತ್ತಾ,

೧. ಚುನಾವಣೆ ಬಂತೆಂದರೆ, ನಾನು ಸ್ವತಹ ಅವರಿಗೆ, ‘ನಮಗೆ ಮತ ನೀಡಬೇಡಿ, ಯಾವಾಗ ನೀವು ಕುಟುಂಬ ನಿಯೋಜನೆಯ ಪಾಲನೆ ಮಾಡುವಿರಿ, ಬಾಲ್ಯ ವಿವಾಹದಂತಹ ಪದ್ಧತಿಗಳನ್ನು ನಿಲ್ಲಿಸುವಿರಿ ಮತ್ತು ಕಟ್ಟರವಾದಕ್ಕೆ ಕಡಿವಾಣ ಹಾಕುವಿರಿ ಆಗ ನಮಗೆ ಮತ ನೀಡಿ ಎಂದು ವಿನಂತಿಸುತ್ತೇನೆ ಎಂದು ಹೇಳಿದರು ಹಾಗೂ ಇದೆಲ್ಲಾ ಪೂರ್ಣವಾಗಲು ಕನಿಷ್ಠ ೧೦ ವರ್ಷ ಬೇಕಾಗುವುದು. ಆದ್ದರಿಂದ ಈಗೆಲ್ಲ ಮುಂದಿನ ೧೦ ವರ್ಷಗಳ ನಂತರ ಮತ ಕೇಳುವೆವು.

೨. ಭಾಜಪಾಗೆ ಮತ ನೀಡುವ ಮುಸಲ್ಮಾನರಿಗೆ ೨ – ೩ ಕಿಂತಲೂ ಹೆಚ್ಚಿನ ಮಕ್ಕಳು ಇರಬಾರದು. ಅವರ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು. ಕಟ್ಟರವಾದ ಬಿಟ್ಟು ಸೂಫಿ ಧರ್ಮ ಸ್ವೀಕರಿಸಬೇಕು. ಈ ಷರತ್ತುಗಳನ್ನು ಪೂರ್ಣಗೊಳಿಸಿದ ನಂತರ ನಾನು ನಿಮ್ಮ ಬಳಿ ಮತ ಕೇಳಲು ಚಾರ ಚೋಪರಿಗೆ ಬರುವೆನು ಎಂದು ಹೇಳಿದರು.