‘ವೇದ ಎಜುಕೇಶನ್’ ಸಂಸ್ಥೆಯಿಂದ ಸನಾತನ ಶಾಸ್ತ್ರಗಳ ಆಧಾರಿತ ಆನ್ಲೈನ್ ಗ್ರಂಥಾಲಯದ ನಿರ್ಮಾಣಕ್ಕಾಗಿ ಪ್ರಯತ್ನ ! – ಶ್ರೀ. ಪ್ರತೀಕ ಪ್ರಜಾಪತಿ

ಜಗತ್ತಿನಲ್ಲಿನ ಎಲ್ಲಕ್ಕಿಂತ ಬೃಹತ್ ಗ್ರಂಥಾಲಯ ನಿರ್ಮಾಣದ ಪ್ರಯತ್ನ !

ಶ್ರೀ. ಪ್ರತೀಕ ಪ್ರಜಾಪತಿ

ಮುಂಬಯಿ – ಗುಜರಾತ್ ನ ‘ವೇದ ಎಜುಕೇಶನ್’ ಹೆಸರಿನ ಸಂಸ್ಥೆಯಿಂದ ಸನಾತನ ಶಾಸ್ತ್ರಗಳ ಜಗತ್ತಿನಲ್ಲಿಯೇ ಎಲ್ಲಕ್ಕಿಂತ ಬೃಹತ್ ಆನ್ಲೈನ್ ಗ್ರಂಥಾಲಯದ ನಿರ್ಮಾಣಕ್ಕಾಗಿ ಪ್ರಯತ್ನ ಮಾಡುತ್ತಿದೆ. ಸಂಸ್ಥೆಯ ಮುಖ್ಯಸ್ಥ ಶ್ರೀ. ಪ್ರತೀಕ ಪ್ರಜಾಪತಿ ಇವರು ಸನಾತನ ಪ್ರಭಾತದ ಪ್ರತಿನಿಧಿಗಳ ಜೊತೆ ನಡೆಸಿರುವ ಸಂಭಾಷಣೆಯಲ್ಲಿ, ಇಂದು ಇಂಟರ್ನೆಟ್ ನಲ್ಲಿ ಸಾವಿರಾರು ಪ್ರಕಾರಗಳ ಶಾಸ್ತ್ರಗಳು ಲಭ್ಯವಿದೆ. ಪುಸ್ತಕದ ಅಂಗಡಿಗೆ ಹೋದರೆ, ಅಲ್ಲಿ ಕೂಡ ಭಗವದ್ಗೀತೆ, ರಾಮಾಯಣ, ಮಹಾಭಾರತ ಮುಂತಾದವುಗಳ ಆಧಾರಿತ ನೂರಾರು ಪುಸ್ತಕಗಳು ಇರುತ್ತವೆ. ಪ್ರತಿಯೊಬ್ಬರೂ ತಮ್ಮ ಆವೃತ್ತಿಯನ್ನು ಪ್ರಕಟಿಸುತ್ತಾರೆ; ಆದರೆ ಅದರಲ್ಲಿನ ಯೋಗ್ಯ ಪುಸ್ತಕ ಯಾವುದು ? ಇದು ನಮಗೆ ತಿಳಿಯುವುದಿಲ್ಲ. ನಾವು ಕುರಿತು ‘ವೇದ ಎಜುಕೇಶನ್ ಲೈಬ್ರರಿ ಆ್ಯಪ್’ ಈ ಆ್ಯಪ್ ಸಿದ್ಧಪಡಿಸುತ್ತಿದ್ದೇವೆ.

ಧರ್ಮಪ್ರಸಾರಕ್ಕಾಗಿ ಪ್ರಸ್ತುತ ಯುರೋಪಿನ ಪ್ರವಾಸದಲ್ಲಿರುವ ಪ್ರಜಾಪತಿ ಮಾತು ಮುಂದುವರೆಸಿ, ನಾನು ಕಳೆದ ೮ ತಿಂಗಳಿಂದ ಈ ಆ್ಯಪ್ ಗಾಗಿ ಅವಿರತವಾಗಿ ಪ್ರಯತ್ನಿಸುತ್ತಿದ್ದೇನೆ. ನಾವು ನಿರ್ಮಾಣ ಮಾಡುತ್ತಿರುವ ಆ್ಯಪ್ ಇದು ಜಗತ್ತಿನಲ್ಲಿ ಎಲ್ಲಕ್ಕಿಂತ ವಿಸ್ತೃತ ಮತ್ತು ಸುಸಂಘಟಿತ ಆನ್ಲೈನ್ ಸನಾತನ ಲೈಬ್ರರಿ (ಗ್ರಂಥಾಲಯ) ಇರಲಿದೆ. ಈ ಆ್ಯಪ್ ನಲ್ಲಿ ಸನಾತನ ಧರ್ಮದಲ್ಲಿನ ೪ ವೇದ, ಗೀತೆ, ರಾಮಾಯಣ, ಪುರಾಣಗಳು, ಉಪ ಪುರಾಣಗಳು, ಉಪನಿಷದ್ ಗಳು, ಸ್ಮೃತಿ, ನೀತಿ, ಸಂಹಿತೆ, ಸೂತ್ರ, ಆಗಮ, ನಿಗಮ, ಆಯುರ್ವೇದ, ಜ್ಯೋತಿಷ್ಯ, ವಾಸ್ತು, ಯೋಗ, ಇತ್ಯಾದಿಗಳ ಸಮಾವೇಶ ಇರಲಿದೆ.

‘ಈ ಆ್ಯಪ್ ನ ನಿರ್ಮಾಣಕ್ಕಾಗಿ ನನಗೆ ಹಣದ ಅವಶ್ಯಕತೆ ಇದೆ ಅದಕ್ಕಾಗಿ ಹಿಂದುಗಳಿಗೆ ಅವರ ಕ್ಷಮತೆಗನುಸಾರ ದಾನ ನೀಡಬಹುದು, ಎಂದು ಪ್ರಜಾಪತಿ ಇವರು ಕರೆ ನೀಡಿದರು. ಜೊತೆಗೆ ‘ನನ್ನ ಕಾರ್ಯದ ಮಾಹಿತಿ ತಿಳಿದುಕೊಳ್ಳುವುದಕ್ಕಾಗಿ, veducation.world/links’ ಈ ಜಾಲತಾಣಕ್ಕೆ ಭೇಟಿ ನೀಡಿ ಅಥವಾ 8690933769 ಈ ಸಂಖ್ಯೆಗೆ ಸಂಪರ್ಕಿಸಿ’, ಎಂದು ಅವರು ಕರೆ ನೀಡಿದರು.

ಪ್ರತೀಕ ಪ್ರಜಾಪತಿ ಇವರ ಸಂಕ್ಷಿಪ್ತ ಪರಿಚಯ !

ಶ್ರೀ. ಪ್ರತೀಕ ಪ್ರಜಾಪತಿ ಇವರು ಕಳೆದ ೮ ವರ್ಷಗಳಿಂದ ಸನಾತನ ಶಾಸ್ತ್ರದ ಅಧ್ಯಯನ ಮತ್ತು ಅದರ ಮೇಲೆ ಸಂಶೋಧನೆ ನಡೆಸುತ್ತಿದ್ದಾರೆ. ಅವರು ಯುವಕರಿಗೆ ಸನಾತನ ಧರ್ಮದ ಜ್ಞಾನ ನೀಡಿ ಆಧ್ಯಾತ್ಮದ ಸಹಾಯದಿಂದ ಜೀವನದಲ್ಲಿ ಯಾವ ರೀತಿ ಬದಲಾವಣೆ ಮಾಡಿಕೊಳ್ಳಬಹುದು.? ಈ ಕುರಿತು ಮಾರ್ಗದರ್ಶನ ಮಾಡುತ್ತಾರೆ. ಅವರ ‘ಸನಾತನ ಸಂಸ್ಕೃತಿಯ ಮೂಲಜ್ಞಾನ’ ಮತ್ತು ‘ವೈದಿಕ ದಿನಚರ್ಯೆ’ ಹೆಸರಿನ ಎರಡು ಪುಸ್ತಕಗಳು ಪ್ರಕಾಶಿತಗೊಂಡಿವೆ. ಅಮೆಜಾನ್ ನಲ್ಲಿ ಅವು ಯುವಕರಲ್ಲಿ ಬಹಳ ಜನಪ್ರಿಯವಾಗಿವೆ. ‘ಬ್ರಹ್ಮಚಾರ್ಯೆ’ ಹೆಸರಿನ ಪುಸ್ತಕ ಮುಂದಿನ ತಿಂಗಳಲ್ಲಿ ಪ್ರಕಾಶನಗೊಳ್ಳುವುದು. ಅದರಲ್ಲಿ ಯುವಕರಿಂದ ಹಸ್ತ ಮೈಥುನ, ಅಶ್ಲೀಲ ವಿಡಿಯೋ ನೋಡುವುದು, ಮಾದಕ ಪದಾರ್ಥಗಳ ಸೇವನೆ, ಜೂಜು ಇದರಂತಹ ಕೆಟ್ಟ ಚಟಗಳನ್ನು ಹೇಗೆ ದೂರಗೊಳಿಸುವುದು ? ಹಾಗೂ ಖಿನ್ನತೆ ಯಂತಹ ಸಮಸ್ಯೆಗಳ ಬಗ್ಗೆ ಉಪಾಯ ಹೇಳುವವರಿದ್ದಾರೆ.