ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರಿಂದ ಕಾಂಗ್ರೆಸ್ ಗೆ ಎಚ್ಚರಿಕೆ !
ಜೋಧಪುರ (ರಾಜಸ್ಥಾನ) – ಕಾಂಗ್ರೆಸ್ ಗೆ ಭಾರತದಲ್ಲಿ ರಾಜಕಾರಣ ಮಾಡುವುದಿದ್ದರೆ, ಅದು ಹಿಂದುಗಳನ್ನು ಗೌರವಿಸಲೇ ಬೇಕು. ಇಲ್ಲದಿದ್ದರೆ ನಾವು ಅದರ ಲೆಕ್ಕ ಚುಕ್ತಾ ಮಾಡುತ್ತೇವೆ. ದೇಶದ ಮೂಲೆ ಮೂಲೆಗಳಲ್ಲಿ ಇದರ ಲೆಕ್ಕ ಮಾಡುವ ಸಮಯ ಬಂದಿದೆ ಮತ್ತು ನಮಗೆ ಅದನ್ನು ಚುನಾವಣೆಯಲ್ಲಿ ಮಾಡಬೇಕಿದೆ. ರಾಜಸ್ಥಾನವು ವೀರರ ಭೂಮಿಯಾಗಿದೆ. ಆದ್ದರಿಂದ ಸನಾತನ ಹಿಂದುಗಳನ್ನು ಅದರಿಂದ ಬೇರೆ ಮಾಡಲು ಸಾಧ್ಯವಿಲ್ಲ, ಎಂದು ಅಸ್ಸಾಂನ ಮುಖ್ಯಮಂತ್ರಿ ಹಿಮಂತ್ ಬಿಸ್ವ ಸರಮಾ ಇವರು ಇಲ್ಲಿ ಭಾಜಪದ ಪರಿವರ್ತನಾ ಯಾತ್ರೆಯ ಸಮಯದಲ್ಲಿ ನಡೆದ ಸಭೆಯಲ್ಲಿ ಹೇಳಿಕೆ ನೀಡಿದರು. ‘ಮುಸಲ್ಮಾನರ ಬಗ್ಗೆ ಯಾರಾದರೂ ಮಾತನಾಡಿದರೆ, ಕಾಂಗ್ರೆಸ್ ತಕ್ಷಣ ಸ್ಪಷ್ಟೀಕರಣ ನೀಡುತ್ತದೆ. ಕ್ರೈಸ್ತರ ಬಗ್ಗೆ ಯಾರಾದರೂ ಮಾತನಾಡಿದರೆ ಸಂಬಂಧ ಪಟ್ಟವರಿಗೆ ಬುದ್ಧಿ ಹೇಳುಲಾಗುತ್ತದೆ; ಆದರೆ ಯಾವಾಗ ಹಿಂದುಗಳ ಬಗ್ಗೆ ಮಾತನಾಡಲಾಗುತ್ತದೆ ಆಗ ಕಾಂಗ್ರೆಸ್ ಮೌನವಾಗಿರುತ್ತಾರೆ’, ಎಂದು ಕೂಡ ಮುಖ್ಯಮಂತ್ರಿ ಸರಮಾ ಇವರು ಹೇಳಿದರು.
असम के मुख्यमंत्री हिमंत बिस्वा सरमा ने कांग्रेस पर निशाना साधते हुए कहा कि भारत में राजनीति करनी है तो हिंदू का सम्मान करना सीखो, नहीं तो हम हिसाब बराबर कर देंगे, ये बात पक्की है-@abp_karan की रिपोर्ट #CMHimantaBiswaSarma #Congress #BJP #India https://t.co/tush9TM6t0
— ABP News (@ABPNews) September 22, 2023
ಗೆಹಲೋಟ, ಹಿಂದುತ್ವ ತಡೆಯುವವರು ನೀವ್ಯಾರು ?
ಹಿಂದುತ್ವದ ಅಂಶಗಳ ಬಗ್ಗೆ ಮುಖ್ಯಮಂತ್ರಿ ಸರಮಾ ಇವರು, ರಾಜಸ್ಥಾನದಲ್ಲಿ ಬಂದ ನಂತರ ಗೆಹಲೋಟ (ರಾಜಸ್ಥಾನದ ಮುಖ್ಯಮಂತ್ರಿ) ಇವರು, ‘ಇಲ್ಲಿ ಹಿಂದುತ್ವದ ಬಗ್ಗೆ ರಾಜಕಾರಣ ನಡೆಯುವುದಿಲ್ಲ,’ ಎಂದು ಹೇಳಿದ್ದರು. ಈಗ ನಾನು ಹೇಳುತ್ತೇನೆ, ‘ಗೆಹಲೋಟ, ಹಿಂದುತ್ವವನ್ನು ತಡೆಯುವವರು ನೀವ್ಯಾರು ? ೫೦೦೦ ವರ್ಷಗಳ ಹಿಂದಿನ ಭಾರತ ಹಿಂದೂ ಆಗಿತ್ತು. ಈಗಲೂ ಹಿಂದೂ ಆಗಿದೆ ಮತ್ತು ಮುಂದೆಯೂ ಹಿಂದೂವೇ ಆಗಿರುವುದು. ನೀವು ಏನೂ ಮಾಡಲು ಸಾಧ್ಯವಿಲ್ಲ. ಯಾರು ಹಿಂದುಗಳನ್ನು ತಡೆಯುವ ಪ್ರಯತ್ನ ಮಾಡಿದ್ದಾರೆ ಅವರ ಜೊತೆಗೆ ಹೋರಾಡಬೇಕಾಗುವುದು. ‘ಭಾರತದಲ್ಲಿ ಹಿಂದುಗಳ ಮೇಲೆ ಅನ್ಯಾಯ ಮಾಡಿ ನೀವು ಬದುಕಲು ಸಾಧ್ಯವಿಲ್ಲ, ಇದನ್ನು ತಿಳಿದುಕೊಳ್ಳಿ.’ ಎಂದು ಹೇಳಿದರು.
ಕನ್ನಯ್ಯಲಾಲ ಇವರ ಹತ್ಯೆ ಯಂತೆ ಅಸ್ಸಾಂನಲ್ಲಿ ಘಟಿಸಿದ್ದರೆ, ಐದು ನಿಮಿಷದಲ್ಲಿ ಲೆಕ್ಕ ಚುಕ್ತಾ ಮಾಡುತಿದ್ದೆವು !
ಮುಖ್ಯಮಂತ್ರಿ ಸರಮಾ ಇವರು, ಉದಯಪುರದಲ್ಲಿ ಕನಯ್ಯಲಾಲ ಇವರ ಶಿರಚ್ಚೆದದಂತಹ ಘಟನೆ ಅಸ್ಸಾಂ ನಲ್ಲಿ ನಡೆದಿದ್ದರೆ ನಾವು ೫ ನಿಮಿಷದಲ್ಲಿ ಲೆಕ್ಕ ಚುಕ್ತಾ ಮಾಡುತ್ತಿದ್ದೆವು; ಆದರೆ ರಾಜಸ್ಥಾನದಲ್ಲಿ ಸಂತ್ರಸ್ತ ಹಿಂದು ಕುಟುಂಬಗಳ ಕಾಳಜಿ ವಹಿಸಲಾಗುತ್ತಿಲ್ಲ ಎಂದು ಹೇಳಿದರು.
ಗಾಂಧಿ ಕುಟುಂಬದವರಿಗೆ ಚಂದ್ರನ ಮೇಲೆ ಕಳಿಸಿ, ಎಲ್ಲಾ ಸಮಸ್ಯೆಗಳ ಮುಕ್ತಾಯ !
ಗಾಂಧಿ ಕುಟುಂಬದ ಬಗ್ಗೆ ಟೀಕಿಸುವಾಗ ಮುಖ್ಯಮಂತ್ರಿ ಸರಮಾ ಇವರು, ನರೇಂದ್ರ ಮೋದಿ ಕೇಂದ್ರದಲ್ಲಿ ಬರುವವರೆಗೆ ಬಾಬರ್ ಅಯೋಧ್ಯೆಯಲ್ಲಿ ಜೀವಿತವಾಗಿದ್ದನು, ಮೋದಿ ಬಂದರೂ ಮತ್ತು ಬಾಬರ್ ನಾಶವಾದನು. ಅಸ್ಸಾಂ ಮತ್ತು ಉತ್ತರಪ್ರದೇಶ ರಾಜ್ಯದಲ್ಲಿ ಭಾಜಪದ ಸರಕಾರ ಬಂದ ನಂತರದಿಂದ ಬಾಬರ್ ಮತ್ತು ಔರಂಗಜೇಬ್ ಇವರನ್ನು ಒಂದು ಸ್ಥಾನದಲ್ಲಿ ಇರಿಸಿದ್ದೇವೆ ಮತ್ತು ಒಂದು ಇಂಚು ಕೂಡ ಅಲಗಾಡಲು ಬಿಟ್ಟಿಲ್ಲ. (ಈ ರಾಜ್ಯಗಳಲ್ಲಿ ಹಿಂದೂ ವಿರೋಧಿ ಕಾರ್ಯ ಚಟುವಟಿಕೆ ನಿಂತು ಹೋಗಿವೆ, ಹೀಗೆ ಸರಮಾ ಇವರಿಗೆ ಹೇಳುವುದಿದೆ.) ಕೆಲವೊಮ್ಮೆ ನಾನು, ಮೋದಿಯವರಿಗೆ, ಒಂದು ದೊಡ್ಡ ಚಂದ್ರಯಾನ ತಯಾರಿಸಿ ಗಾಂದಿ ಕುಟುಂಬದವರನ್ನು ಚಂದ್ರನ ಮೇಲೆ ಕಳುಹಿಸಿ. ಇದರಿಂದ ನಮ್ಮ ದೇಶದಲ್ಲಿನ ಎಲ್ಲಾ ಸಮಸ್ಯೆಗಳು ಒಂದೇ ಸಲಕ್ಕೆ ಮುಗಿಯುತ್ತವೆ ಎಂದು ಹೇಳಬೇಕು ಎಂದು ನನಗೆ ಅನಿಸುತ್ತದೆ ಎಂದು ಹೇಳಿದರು.