ಪ್ರಯಾಗರಾಜ (ಉತ್ತರಪ್ರದೇಶ) – ಮಥುರಾದಲ್ಲಿನ ಬಾಂಕೆ ಬಿಹಾರಿ ಮಹಾರಾಜ ದೇವಸ್ಥಾನದ ಭೂಮಿಯಲ್ಲಿ ಮುಸಲ್ಮಾನರು ಸ್ಮಶಾನ ಮಾಡಿದ್ದಾರೆ. ಈ ಭೂಮಿಯನ್ನು ಪುನಃ ದೇವಸ್ಥಾನದ ಹೆಸರಿಗೆ ಮಾಡಬೇಕು ಎಂದು ಪ್ರಯಾಗರಾಜ ಉಚ್ಚ ನ್ಯಾಯಾಲಯದ ಮಥುರಾ ವಿಭಾಗೀಯ ಪೀಠವು ಛಾತಾ ತಾಲೂಕಿನ ಸರಕಾರಿ ಅಧಿಕಾರಿಗಳಿಗೆ ಆದೇಶಿಸಿದೆ.
‘Restore graveyard land in name of Banke Bihari Ji Maharaj temple’: Allahabad HC directs Mathura admin to correct land recordshttps://t.co/qI8nagAjh3
— OpIndia.com (@OpIndia_com) September 17, 2023
೧. ’ಶ್ರೀ ಬಿಹಾರಿಜಿ ಸೇವಾ ಟ್ರಸ್ಟ’ನಿಂದ ಈ ಸಂದರ್ಭದಲ್ಲಿ ಅರ್ಜಿ ದಾಖಲಿಸಲಾಗಿತ್ತು. ಇದರಲ್ಲಿ ೨೦೦೪ರಲ್ಲಿ ಆದಾಯ ಇಲಾಖೆಯ ಕಾಗದಪತ್ರಗಳಲ್ಲಿ ಮೋಸ ಮಾಡಿ ಸದರ ಭೂಮಿಯು ಕಬ್ರಸ್ತಾನವಿದೆ ಎಂಬುದನ್ನು ತೋರಿಸಲಾಗಿತ್ತು. ಈ ಸಂದರ್ಭದಲ್ಲಿ ಆಗಸ್ಟ ೧೧, ೨೦೨೩ ರಲ್ಲಿ ಉಚ್ಚ ನ್ಯಾಯಾಲಯವು ಇದರ ಮಾಹಿತಿಯನ್ನು ಸಾದರಪಡಿಸಲು ಆದೇಶಿಸಿತ್ತು, ಹಾಗೆಯೇ ೨೦೦೪ರಲ್ಲಿ ಭೂಮಿಯ ಮಾಲಿಕತ್ವದ ಅಧಿಕಾರ ಏಕೆ ಮತ್ತು ಹೇಗೆ ಬದಲಾಯಿತು ? ಕಾಗದಪತ್ರದಲ್ಲಿ ಮೋಸ ಹೇಗೆ ನಡೆಯಿತು ? ಎಂಬ ವಿಚಾರಣೆ ಮಾಡಿತ್ತು.
೨. ಈ ಪ್ರಕರಣದಲ್ಲಿ ಧರ್ಮರಕ್ಷಾ ಸಂಘದ ಶ್ರೀ. ರಾಮಅವತಾರ ಗುರ್ಜರರವರು ಮಾತನಾಡುತ್ತ, ಭೋಲಾ ಪಠಾಣನು ಅಧಿಕಾರಿಗಳೊಂದಿಗೆ ಸೇರಿ ಭೂಮಿಯನ್ನು ಕಬಳಿಸಿದ್ದನು. ಪಠಾಣನು ಸಮಾಜವಾದಿ ಪಕ್ಷದ ಮಾಜಿ ಅಧ್ಯಕ್ಷನಾಗಿದ್ದನು. ಮುಸಲ್ಮಾನರು ಈ ಭೂಮಿಯಲ್ಲಿನ ಐತಿಹಾಸಿಕ ಬಾಂಕೆಬಿಹಾರಿಯವರ ಸಿಂಹಾಸನವನ್ನು ಒಡೆದು ಮಜಾರ (ಮುಸಲ್ಮಾನರ ಗೊರಿ) ನಿರ್ಮಿಸಿದ್ದರು, ಎಂದು ಹೇಳಿದರು.
ಸಂಪಾದಕೀಯ ನಿಲುವುಇಂತಹ ಆದೇಶವನ್ನು ಏಕೆ ನೀಡಬೇಕಾಗುತ್ತದೆ ? ಆಡಳಿತವು ಸ್ವತಃ ಈ ಭೂಮಿಯನ್ನು ತನ್ನ ಕೈಗೆ ಏಕೆ ತೆಗೆದುಕೊಳ್ಳುತ್ತಿಲ್ಲ ? |