ಶ್ರೀರಾಮ ದೇವಸ್ಥಾನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಆಸಕ್ತಿ ತೋರಿಸಿದ ದಕ್ಷಿಣ ಕೊರಿಯಾ !

ನವ ದೆಹಲಿ – ದಕ್ಷಿಣ ಕೊರಿಯಾಗೆ ಅಯೋಧ್ಯೆಯ ಐತಿಹಾಸಿಕ ಮತ್ತು ಸಾಂಸ್ಕೃತಿಕವಾಗಿಯೂ ಅತ್ಯಂತ ಮಹತ್ವದ್ದಾಗಿದೆ. ಭಾರತ ಸರಕಾರವು ದಕ್ಷಿಣ ಕೊರಿಯಾಗೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆಗೆ ಆಹ್ವಾನಿಸಿದರೆ ಭಾಗವಹಿಸಲಿದೆ ಎಂದು ದಕ್ಷಿಣ ಕೊರಿಯಾದ ಭಾರತದಲ್ಲಿರುವ ರಾಯಭಾರಿ ಚಾಂಗ್ ಜೇ-ಬೊಕ್ ಇವರು ಅಯೋಧ್ಯೆಯ ಶ್ರೀರಾಮಮಂದಿರದ ಉದ್ಘಾಟನೆಯ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾರೆ. ಚಾಂಗ ಜೆ-ಬೊಕ ಮಾತು ಮುಂದುವರೆಸಿ, “ಕೊರಿಯನ್ ಪುರಾಣ ಕಥೆಯನುಸಾರ ಅಯೋಧ್ಯೆಯ ರಾಜ್ಯದ ಓರ್ವ ಭಾರತೀಯ ರಾಜಕನ್ಯೆ ತನ್ನ ರಾಜಕುಮಾರನೊಂದಿಗೆ ವಿವಾಹವಾಗಲು ಕೊರಿಯಾಕ್ಕೆ ಹೋಗಿದ್ದಳು. ಅವರು ಆ ಸಂದರ್ಭದಲ್ಲಿ ಅಯೋಧ್ಯೆಯನ್ನು ಕೊರಿಯಾದಲ್ಲಿ `ಅಯುಧಾ’ ಎನ್ನುತ್ತಾರೆ ಎಂದು ಹೇಳಿದರು. ಭಾರತ ಮತ್ತು ಕೊರಿಯಾ ಸಂಬಂಧವು 2 ಸಾವಿರ ವರ್ಷಗಳಿಗಿಂತಲೂ ಹಳೆಯದಾಗಿದೆ’. ಎಂದು ಹೇಳಿದರು.

ದಕ್ಷಿಣ ಕೊರಿಯಾ ರಾಷ್ಟ್ರಾಧ್ಯಕ್ಷರ ಪತ್ನಿಯು 2018ರಲ್ಲಿ ಅಯೋಧ್ಯೆಗೆ ಭೇಟಿ ನೀಡಿದ್ದರು !

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ 2018 ರಲ್ಲಿ ದಕ್ಷಿಣ ಕೊರಿಯಾ ರಾಷ್ಟ್ರಾಧ್ಯಕ್ಷರ ಪತ್ನಿ ಕಿಮ್ ಜಂಗ-ಸುಕ ಅಯೋಧ್ಯೆಗೆ ಭೇಟಿ ನೀಡಿದ್ದರು. ಆ ವರ್ಷ ನವೆಂಬರ್ 6 ರಂದು ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅವರು ಅಯೋಧ್ಯೆಯಲ್ಲಿ ರಾಣಿ ಸುರರತ್ನ ಅವರ ಹೊಸ ಸ್ಮಾರಕದ ಭೂಮಿಪೂಜೆಯನ್ನು ಮಾಡಿದ್ದರು. ಇವಳೇ ಕೊರಿಯಾದ ರಾಜನನ್ನು ಮದುವೆಯಾದ ರಾಣಿ ಸುರರತ್ನಾ ಆಗಿದ್ದಾಳೆ. ರಾಜನನ್ನು ಮದುವೆಯಾದ ನಂತರ, ಅವಳು ರಾಣಿ ಹು ಹವಾಂಗ-ಓಕೆ ಎಂದು ಗುರುತಿಸಲ್ಪಟ್ಟಳು.