ಲೋಗೋದ ಅನಾವರಣ ಕಾರ್ಯಕ್ರಮ ಕೊನೇಕ್ಷಣದಲ್ಲಿ ರದ್ದು !
ಮುಂಬಯಿ – ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮುಂಬಯಿಯಲ್ಲಿ ನಡೆಯುತ್ತಿರುವ ‘ಇಂಡಿಯಾ’ ಮೈತ್ರಿಕೂಟದ ಸಭೆಯಲ್ಲಿ ಸೆಪ್ಟೆಂಬರ್ ಒಂದರಂದು ಸಮನ್ವಯಕ್ಕಾಗಿ ೧೩ ಜನರ ಸಮಿತಿ ಸ್ಥಾಪನೆ ಮಾಡಲಾಯಿತು. ಇದರ ಜೊತೆಗೆ ‘ಇಂಡಿಯಾ’ ಮೈತ್ರಿಕೂಟದ ಲೋಗೋ ಅನಾವರಣದ ಆಯೋಜನೆ ಕಾರ್ಯಕ್ರಮದಲ್ಲಿ ಮಾತ್ರ ಕೊನೇ ಕ್ಷಣದಲ್ಲಿ ರದ್ದುಪಡಿಸಲಾಯಿತು. ಸಮನ್ವಯ ಸಮಿತಿಯಲ್ಲಿ ರಾಷ್ಟ್ರವಾದಿ ಕಾಂಗ್ರೆಸ್ಸಿನ ಅಧ್ಯಕ್ಷ ಶರದ ಪವಾರ, ಠಾಕರೆ ಗುಂಪಿನ ಶಾಸಕ ಸಂಜಯ ರಾವುತ, ತೇಜಸ್ವಿ ಯಾದವ, ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್, ಅಭಿಷೇಕ್ ಬ್ಯಾನರ್ಜಿ, ಓಮರ್ ಅಬ್ದುಲ್ಲ, ಹೇಮಂತ ಸೋರೆನ, ಕೆ.ಸಿ. ವೇಣುಗೋಪಾಲ, ಮೆಹೆಬುಬ ಮುಫ್ತಿ, ಡಿ. ರಾಜಾ, ಲಲನ ಸಿಂಗ, ರಾಘವ ಚಡ್ಡ ಮತ್ತು ಜಾವೇದ್ ಖಾನ್ ನಾಯಕರ ಸಮಾವೇಶವಿದೆ. ಮೈತ್ರಿಕೂಟದ ‘ಜಿತೆಗಾ ಭಾರತ್, ಜೀತೆಗಾ ಇಂಡಿಯಾ’, ಈ ಘೋಷವಾಕ್ಯ ಈ ಸಮಯದಲ್ಲಿ ನಿರ್ಧರಿಸಲಾಯಿತು. ಈ ಸಬೆಯಲ್ಲಿ ಲೋಕಸಭೆಯ ಚುನಾವಣೆಯ ಹಿನ್ನೆಲೆಯಲ್ಲಿ ಒಟ್ಟಾಗಿ ಸಭೆ ನಡೆಸುವುದು, ಒಟ್ಟಾಗಿ ರ್ಯಾಲಿ ನಡೆಸುವುದು, ಭಾಜಪದ ವಿರುದ್ಧ ಒಬ್ಬ ಅಭ್ಯರ್ಥಿ ಸ್ಪರ್ಧಿಸುವುದು ಮುಂತಾದ ನಿರ್ಣಯ ತೆಗೆದುಕೊಳ್ಳಲಾಯಿತು.