ಹರಿಯಾಣದ ಗೃಹ ಸಚಿವ ಅನಿಲ್ ವಿಜ ಇವರ ಹೇಳಿಕೆ !
ಕಾಂಗ್ರೆಸ್ ಶಾಸಕ ಮಮ್ಮನ್ ಖಾನ್ ವಿರುದ್ಧ ಸಾಕ್ಷ್ಯ ಸಿಕ್ಕಿರುವ ದಾವೆ !
ಚಂಡೀಗಢ – ನೂಹದಲ್ಲಿ ನಡೆದ ಹಿಂಸಾಚಾರದ ಪ್ರಕರಣದ ಈವರೆಗಿನ ತನಿಖೆಯ ನಿಷ್ಕರ್ಷದಿಂದ, ಈ ಹಿಂಸಾಚಾರಕ್ಕೆ ಕಾಂಗ್ರೆಸ್ ಕಾರಣವಾಗಿದೆ ಎಂಬುದು ಗಮನಕ್ಕೆ ಬಂದಿದೆ. ಫಿರೋಜಪುರ ಝಿರಕಾದ ಕಾಂಗ್ರೆಸ್ ಶಾಸಕ ಮಮ್ಮನ್ ಖಾನ್ ವಿರುದ್ಧ ಸಾಕ್ಷ್ಯಾಧಾರಗಳು ಪತ್ತೆಯಾಗಿವೆ. ಬಂಧಿತ ಆರೋಪಿಗಳ ತನಿಖೆ ಮುಂದುವರಿದಿದ್ದು, ಈ ಹಿಂಸಾಚಾರದಲ್ಲಿ ಕಾಂಗ್ರೆಸ್ ಕೈವಾಡವಿರುವುದು ಸ್ಪಷ್ಟವಾಗಿದೆ, ಎಂದು ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಇವರು ಮಾಹಿತಿ ನೀಡಿದ್ದಾರೆ. ಪೊಲೀಸರು ಮಮ್ಮನ ಖಾನ್ ಗೆ ವಿಚಾರಣೆಗಾಗಿ ಹಾಜರಾಗುವಂತೆ ನೋಟಿಸ್ ಕೂಡ ಕಳುಹಿಸಿದ್ದಾರೆ. ಈ ಹಿಂಸಾಚಾರದಲ್ಲಿ 7 ಮಂದಿ ಸಾವನ್ನಪ್ಪಿದ್ದರು. ಈ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದುವರೆಗೆ 500 ಜನರನ್ನು ಬಂಧಿಸಲಾಗಿದೆ.
ಅನಿಲ್ ವಿಜ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಕಾಂಗ್ರೆಸ ಪಕ್ಷವು ವಿಧಾನಸಭೆಯಲ್ಲಿ ಗದ್ದಲ ಎಬ್ಬಿಸಿತು. ಪ್ರತಿಪಕ್ಷ ನಾಯಕ ಭೂಪಿಂದರ್ ಸಿಂಗ್ ಹೂಡಾ ಹಿಂಸಾಚಾರದ ಬಗ್ಗೆ ನ್ಯಾಯಾಂಗ ತನಿಖೆಗೆ ಒತ್ತಾಯಿಸಿದರು.
‘Congress behind #Nuh violence’, alleges #Haryana home minister Anil Vijhttps://t.co/9PE1Uf3yAK pic.twitter.com/A5BGFaBiQh
— Hindustan Times (@htTweets) August 29, 2023
ಸಂಪಾದಕರ ನಿಲುವು* ಭಾರತ ವಿಭಜನೆಯಾದಾಗಿನಿಂದ ದೇಶದಲ್ಲಿ ನಡೆದ ಗಲಭೆಗಳಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕಾಂಗ್ರೆಸ್ ಹೊಣೆಯಾಗಿರುವುದು ಕಂಡು ಬಂದಿದೆ. ಇಂತಹ ಕಾಂಗ್ರೆಸ್ಸಿಗೆ ಹಿಂದೂಗಳು ರಾಜಕೀಯ ಪಾಠ ಕಲಿಸಿದರೂ ಅದಿನ್ನೂ ಎಚ್ಚೆತ್ತುಕೊಂಡಿಲ್ಲ. ಕಾಂಗ್ರೆಸ್ಸಿನ ರಾಜಕೀಯ ವಿನಾಶವು ಮುಸಲ್ಮಾನರಿಂದಲೇ ನಡೆದರೆ ಆಶ್ಚರ್ಯಪಡಬಾರದು ! |