ಮುಂಬಯಿಯಲ್ಲಿ ಖಿನ್ನತೆ ಮತ್ತು ಅನಾರೋಗ್ಯಕ್ಕೆ ಬೇಸತ್ತು ಪತಿಯಿಂದ ಪತ್ನಿಯ ಮೇಲೆ ಚಾಕುವಿನಿಂದ ಹಲ್ಲೆ !

ಮುಂಬಯಿ – ಕಾಂದಿವಲಿ (ಪೂರ್ವ) ಪ್ರದೇಶದಲ್ಲಿ, 79 ವರ್ಷದ ವಿಷ್ಣುಕಾಂತ್ ಬಲೂರ್ ಅವರು ಖಿನ್ನತೆ ಮತ್ತು ಅನಾರೋಗ್ಯದಿಂದ ಬೇಸತ್ತು ತಮ್ಮ 76 ವರ್ಷದ ಪತ್ನಿ ಶಕುಂತಲಾ ಬಲೂರ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಪತ್ನಿಯ ಮೇಲೆ ಮೊದಲು ಚಾಕುವಿನಿಂದ ತಲೆಯ ಮೇಲೆ ಹಲ್ಲೆ ನಡೆಸಿ ನಂತರ ಕತ್ತು ಕೊಯ್ಯಲು ಪ್ರಯತ್ನಿಸಿದ್ದಾನೆ. ತದನಂತರ ಅವನು ತನ್ನ ಮೇಲೆಯೂ ದಾಳಿ ಮಾಡಿಕೊಂಡನು; ಆದರೆ, ಪೊಲೀಸರು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರ ಸ್ಥಿತಿಯೂ ಈಗ ಸ್ಥಿರವಾಗಿದೆ.

ಸಂಪಾದಕೀಯ ನಿಲುವು

ಖಿನ್ನತೆಯನ್ನು ಎದುರಿಸಲು ಮತ್ತು ವೃದ್ಧಾಪ್ಯದಲ್ಲಿ ಸಂತೋಷದಿಂದ ಬದುಕಲು ಸಾಧನೆ ಮಾಡುವುದು ಅತ್ಯಗತ್ಯ !