ರಾಂಚಿ (ಜಾರ್ಖಂಡ್)ಯಲ್ಲಿ ಲವ್ ಜಿಹಾದ್ ಪ್ರಕರಣ !

ರಾಂಚಿ (ಜಾರ್ಖಂಡ್) – ‘ಮಾಡೆಲಿಂಗ್’ ಮಾಡುತ್ತಿದ್ದ ಹಿಂದೂ ಯುವತಿಯನ್ನು ಪ್ರೀತಿಯ ಬಲೆಯಲ್ಲಿ ಸೆಳೆದು, ಅವಳ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ತನ್ವೀರ್ ಅಹ್ಮದ್ ನನ್ನು ಬಂಧಿಸಲಾಗಿದೆ. ಅವನು ಜಾಮೀನಿಗೆ ಅರ್ಜಿ ಸಲ್ಲಿಸಿದ್ದನು. ಆದರೆ ರಾಂಚಿಯ ಸತ್ರ ನ್ಯಾಯಾಲಯ ಅವನಿಗೆ ಜಾಮೀನನ್ನು ನಿರಾಕರಿಸಿದೆ. ನಗರದ ಕಾಂಕೆ ರಸ್ತೆಯ ಪ್ರದೇಶದಲ್ಲಿ ಅಹಮದ್ `ಯಶ್ ಮಾಡೆಲ್ ಏಜೆನ್ಸಿ’ ನಡೆಸುತ್ತಿದ್ದನು. ಅಹಮದನ ವಿರುದ್ಧ ಮುಂಬಯಿಯಲ್ಲಿ ದೂರು ದಾಖಲಿಸಲಾಗಿತ್ತು. ಬಿಹಾರದ ಭಾಗಲಪುರ ಮೂಲದ ಸಂತ್ರಸ್ತೆ, ರಾಂಚಿಯಲ್ಲಿ ಅಹಮದನ ಸಂಪರ್ಕಕ್ಕೆ ಬಂದಿದ್ದಳು. ನಂತರ ಅವಳು ಮುಂಬಯಿಗೆ ಹೋದಳು. ಅಲ್ಲಿನ ವರ್ಸೋವಾ ಠಾಣೆಯಲ್ಲಿ ದಾಖಲಾಗಿದ್ದ ದೂರನ್ನು ನಂತರ ರಾಂಚಿ ನಗರಕ್ಕೆ ವರ್ಗಾಯಿಸಲಾಗಿತ್ತು.
ರೂಪದರ್ಶಿಯಾಗಿರುವ ಸಂತ್ರಸ್ತೆ ತನ್ನ ದೂರಿನಲ್ಲಿ, ‘ನಾನು ಮಾಡೆಲಿಂಗ್ ನಲ್ಲಿ ಭವಿಷ್ಯವನ್ನು ಕಂಡುಕೊಳ್ಳಲು ಅಹಮದನ ಕಂಪನಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ. ಒಂದೂವರೆ ವರ್ಷದವರೆಗೆ ಅಲ್ಲಿ ಕೆಲಸ ಮಾಡುತ್ತಿರುವಾಗ ನನಗೆ ಮಾನಸಿಕವಾಗಿ ಬಹಳ ತೊಂದರೆಯಾಯಿತು. ಈ ಸಮಯದಲ್ಲಿ ಅವನು ನನ್ನ ಮೇಲೆ ಅತ್ಯಾಚಾರ ಎಸಗಿದನು ಹಾಗೆಯೇ ನನ್ನ ಫೋಟೋಗಳನ್ನು ದುರುಪಯೋಗಪಡಿಸಿಕೊಂಡನು. ನಾನು ಮುಂಬಯಿಗೆ ಬಂದ ಮೇಲೆ ಅವನು ನನಗೆ ಬೆದರಿಕೆ ಹಾಕಲು ಪ್ರಾರಂಭಿಸಿದನು. ಮುಂಬಯಿಗೆ ಬಂದು ಅವನು ನನ್ನನ್ನು ಥಳಿಸಿದನು. ಅವನು ನನ್ನನ್ನು ಮದುವೆಯಾಗಿ ಮತಾಂತರಗೊಳಿಸಲು ಬಯಸುತ್ತಾನೆ. ನನ್ನ ಕುಟುಂಬವನ್ನೂ ಕೊಲ್ಲುವುದಾಗಿ ಅವನು ಬೆದರಿಕೆ ಹಾಕಿದ್ದಾನೆ’ ಎಂದು ತಿಳಿಸಿದ್ದಾಳೆ.
ಸನಾತನ ಸಂಸ್ಥೆಯ ಶ್ರೀಸತ್ ಶಕ್ತಿ (ಸೌ.) ಬಿಂದಾ ನೀಲೇಶ್ ಸಿಂಗಬಾಳ ಮತ್ತು ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಮುಕುಲ್ ಗಾಡಗೀಳ ಅವರ ಛತ್ತೀಸಗಢ ರಾಜ್ಯದ ದೈವೀ ಪ್ರವಾಸ!
‘ಝುಕತಿ ಹೆ ದುನಿಯಾ, ಝುಕಾನೆ ವಾಲಾ ಚಾಹಿಯೆ’ (‘ಪ್ರಪಂಚ ಬಗ್ಗುತ್ತದೆ, ಬಗ್ಗಿಸುವವನು ಬೇಕು ಅಷ್ಟೇ!’) – ಅಭಿಜಿತ್ ದೀಪಕೆ
ಪೋಷಕರು ಮತ್ತು ಹಿರಿಯರು ಇಂದಿನ ಯುವ ಪೀಳಿಗೆಯೊಂದಿಗೆ ಸಂವಾದ ನಡೆಸಬೇಕು! – ಪ.ಪೂ. ಸರಸಂಘಚಾಲಕ ಡಾ. ಮೋಹನ್ ಜಿ ಭಾಗವತ್
ಸರಕಾರದೊಂದಿಗೆ ರಾಜಿ ಮಾಡಿಕೊಳ್ಳಬೇಕಿದ್ದರೆ, ೨೬ ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸುವ ಅಗತ್ಯವಿರಲಿಲ್ಲ! – Sonam Wangchuk
ನ್ಯಾಯಾಲಯವೆಂದರೆ ೨೪ ಗಂಟೆಗಳ ಕಾಲ ನಡೆಯುವ ಮನರಂಜನಾ ವಾಹಿನಿಯಲ್ಲ ! – Supreme Court
ಮುಖ್ಯ ಆರೋಪಿ ಬ್ರಿಜೇಂದ್ರ ಗುಪ್ತನನ್ನು ಬಿಹಾರದಿಂದ ಬಂಧಿಸಿದ ಪೊಲೀಸರು!