ಜಮ್ಮು ಕಾಶ್ಮೀರದ ಜನರು ಈಗ ಮುಕ್ತವಾಗಿ ಬದುಕುತ್ತಿದ್ದಾರೆ ! – ಉಪರಾಜ್ಯಪಾಲ ಮನೋಜ ಸಿಂಹ

370 ನೇ ವಿಧಿ ರದ್ದಾಗಿ 4 ವರ್ಷ ಪೂರ್ಣ ಆಗಿರುವ ಸಂದರ್ಭದಲ್ಲಿ ಉಪರಾಜ್ಯಪಾಲ ಮನೋಜ ಸಿಂಹ ರ ಹೇಳಿಕೆ

ಶ್ರೀ ನಗರ – ಜಮ್ಮು ಕಾಶ್ಮೀರದ ಜನರು ಈಗ ಅವರ ಇಚ್ಛೆ ಗನುಸಾರವಾಗಿ ಮುಕ್ತ ಜೀವನ ನಡೆಸುತ್ತಿದ್ದಾರೆ. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ, 370 ನೇ ವಿಧಿಯನ್ನು ರದ್ದು ಮಾಡಿದ ಪರಿಣಾಮ ಇದಾಗಿದೆ, ಎಂದು ಜಮ್ಮು ಕಾಶ್ಮೀರದ ಉಪರಾಜ್ಯಪಾಲ ಮನೊಜ ಸಿಂಹ ಸುದ್ದಿಗಾರರೊಂದಿಗೆ ಮಾತನಾಡುವಾಗ ಹೇಳಿದರು.

ಆಗಸ್ಟ್ 5, 2019 ರಂದು ಕೇಂದ್ರ ಸರಕಾರವು ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಕಲಂ 370 ಅನ್ನು ರದ್ದು ಪಡಿಸುವ ನಿರ್ಧಾರ ಕೈಗೊಂಡಿತ್ತು. ಇದಕ್ಕೆ ಆಗಸ್ಟ 5, 2023 ರಂದು 4 ವರ್ಷ ಪೂರ್ಣವಾಗಿದೆ. ಈ ಹಿನ್ನಲೆಯಲ್ಲಿ ಸಿನ್ಹಾ ಇವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಕೇಂದ್ರ ಸರಕಾರ ಕಲಂ 370 ರದ್ದುಗೊಳಿಸಿದನಂತರ ಜಮ್ಮು ಕಾಶ್ಮೀರ ಮತ್ತು ಲಡಾಖ್ ರಾಜ್ಯವನ್ನು ಜಮ್ಮು ಕಾಶ್ಮೀರ ಮತ್ತು ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿತು.

ಸಿನ್ಹಾ ಇವರು ತಮ್ಮ ಮಾತನ್ನು ಮುಂದುವರೆಸುತ್ತಸ, ”ಈ ಹಿಂದೆ ಜಮ್ಮು-ಕಾಶ್ಮೀರದಲ್ಲಿ ಪಾಕಿಸ್ತಾನ ಬೆಂಬಲಿತ ಪ್ರತ್ತೇಕವಾದಿಗಳು ಮತ್ತು ಭಯೋತ್ಪಾದಕರು ಕರೆ ನೀಡಿದ ಮುಷ್ಕರದಿಂದಾಗಿ ಒಂದು ವರ್ಷ ಕಾಲ ಸುಮಾರು 150 ಶಾಲಾ ಕಾಲೇಜುಗಳು ಹಾಗೂ ವ್ಯವಹಾರಗಳನ್ನು ಮುಚ್ಚಲಾಗಿತ್ತು ಆ ಕಾಲ ಈಗ ಹೋಗಿದೆ. ಕಲಂ 370 ನೇ ವಿಧಿ ರದ್ದಾದ ನಂತರ ಜಮ್ಮು ಕಾಶ್ಮೀರದಲ್ಲಿ ಎಲ್ಲಾ ಸಾಮಾನ್ಯ ಜನರು ತಮ್ಮ ಇಚ್ಚೆಗನುಸಾರ ಬದುಕುತ್ತಿದ್ದಾರೆ. ರಸ್ತೆಯಲ್ಲಿ ಹಿಂಸಾಚಾರ ಮುಗಿದಿದೆ. ಕಾಶ್ಮೀರದಲ್ಲಿಯ ಯುವಕರು ಈಗ ತಡ ರಾತ್ರಿ ತಿರುಗಾಡುವ ಆನಂದವನ್ನು ಅನುಭವಿಸುತ್ತಿದ್ದಾರೆ. ‘ಸ್ಮಾರ್ಟ್ ಸಿಟಿ’ ಯೋಜನೆಯ ಅಡಿ ಇತ್ತೀಚೆಗೆ ನವೀಕರಿಸಿದ ‘ಜೆಲಂ ರಿವರ್ ಬ್ಯಾಂಕ್’ ಮತ್ತು ‘ಪೋಲೊ ವ್ಯೂ’ ಮಾರುಕಟ್ಟೆಯಲ್ಲಿ ಜನರು ಭಯ ಮುಕ್ತ ವಾತಾವರಣದಲ್ಲಿ ನಡೆಯಬಹುದು ಕಾಶ್ಮೀರಿ ಯುವಕರ ಕನಸಿಗೆ ರೆಕ್ಕೆ ಬಂದಿದ್ದು ರಾಷ್ಟ್ರ ನಿರ್ಮಾಣಕ್ಕೆ ಅವರ ಕೊಡುಗೆ ಕಡಿಮೆ ಏನಿಲ್ಲ. ಕಳೆದ ವರ್ಷ ಜಮ್ಮು ಕಾಶ್ಮೀರದ ಆಡಳಿತವು ಆಗಸ್ಟ್ 5 ಅನ್ನು ‘ಭ್ರಷ್ಟಾಚಾರ ಮುಕ್ತ ದಿನ ‘ಎಂದು ಆಚರಿಸಲು ಪ್ರಾರಂಭಿಸಿತು. ಭಷ್ಟಾಚಾರದ ಈ ಕ್ಯಾನ್ಸರ್ ಗೆ ಚಿಕಿತ್ಸೆ ನೀಡುವುದು ಬಹಳ ಮುಖ್ಯ ಎಂದು ನನಗಿಂತ ಸಾರ್ವಜನಿಕರಿಗೆ ಚೆನ್ನಾಗಿ ತಿಳಿದಿದೆ’, ಎಂದು ಉಪರಾಜ್ಯಪಾಲ ಸಿಂಹ ಹೇಳಿದರು.