ನುಹ್ (ಹರಿಯಾಣ)ನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸರಕಾರದಿಂದ ಕಾರ್ಯಾಚರಣೆ !
ನವ ದೆಹಲಿ – ಹರ್ಯಾಣದ ನೂಹ್‌ನಲ್ಲಿ ಮತಾಂಧ ಮುಸಲ್ಮಾನರು ನಡೆಸಿದ ಹಿಂಸಾಚಾರದ ವಿರುದ್ಧ ಸರಕಾರ ದೊಡ್ಡ ಪ್ರಮಾಣದಲ್ಲಿ ಕ್ರಮ ಕೈಗೊಂಡಿದೆ. ಇದರಡಿಯಲ್ಲಿ, ಆಗಸ್ಟ್ 5 ರಂದು, ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಲ್ಲಿ ಸರಕಾರಿ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಕನಿಷ್ಠ 24 ಅಂಗಡಿಗಳನ್ನು ಬುಲ್ಡೋಜರ್‌ಗಳ ಮೂಲಕ ನೆಲಸಮಗೊಳಿಸಲಾಯಿತು. ಇವುಗಳಲ್ಲಿ ಮುಖ್ಯವಾಗಿ ಔಷಧಿ ಅಂಗಡಿಗಳು ಸೇರಿವೆ. ಇಂತಹ 50 ರಿಂದ 60 ಕಟ್ಟಡಗಳ ವಿರುದ್ಧ ಈವರೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಆಡಳಿತ ಮಾಹಿತಿ ನೀಡಿದೆ.
Nuh Violence: Bulldozer action in Haryana, illegal encroachments demolishedhttps://t.co/oxsEdg5YU5#haryananuhclash #haryanamewatclashbetweentwogroup
— Oneindia News (@Oneindia) August 5, 2023
ನೂಹ್‌ನ ನಲ್ಹಾರ್‌ನಲ್ಲಿರುವ ‘ಶಹೀದ್ ಹಸನ್ ಖಾನ್ ಮೇವಾಟಿ ಸರಕಾರಿ ವೈದ್ಯಕೀಯ ಕಾಲೇಜು’ ಪ್ರದೇಶದಲ್ಲಿ ಈ ಅಂಗಡಿಗಳನ್ನು ನಿರ್ಮಿಸಲಾಗಿತ್ತು. ಅಂಗಡಿಗಳನ್ನು ಧ್ವಂಸ ಮಾಡುವಾಗ ಬಿಗಿ ಪೊಲೀಸ್ ಬಂದೋಬಸ್ತು ಮಾಡಲಾಗಿತ್ತು. ಹಲವು ವರ್ಷಗಳಿಂದ ಈ ಅಂಗಡಿಗಳು ಇಲ್ಲಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
‘ಸರಕಾರದ ಮೇಲಿನ ಬಡ ಜನರ ನಂಬಿಕೆಗೆ ಧಕ್ಕೆ!'(ಅಂತೆ) – ಸ್ಥಳೀಯ ಕಾಂಗ್ರೆಸ್ ಮುಸ್ಲಿಂ ಶಾಸಕ ಅಫ್ತಾಬ್ ಅಹಮದ್
ಸ್ಥಳೀಯ ಕಾಂಗ್ರೆಸ್ ಮುಸ್ಲಿಂ ಶಾಸಕ ಅಫ್ತಾಬ್ ಅಹಮದ್ ಚೀರಾಟ
ಮುಸ್ಲಿಂ ಬಹುಸಮಖ್ಯಾತ ನೂಹ್‌ನಲ್ಲಿ ಹಿಂದೂಗಳ ನಂಬಿಕೆ ಕಳೆದ ಹಲವು ವರ್ಷಗಳಿಂದ ಅಲ್ಲಿನ ಧರ್ಮಾಂಧ ಮುಸ್ಲಿಂ ಸಮುದಾಯ ಪದೇ ಪದೇ ಮುರಿದು ಹಾಕಿದೆ. ಈ ವಾಸ್ತವದ ಬಗ್ಗೆ ಅಹಮದ್ ಮಹಾಶಯರು ಏಕೆ ಮೌನವಾಗಿದ್ದಾರೆ ?
ಸ್ಥಳೀಯ ಆಡಳಿತದ ಈ ಕ್ರಮದ ವಿರುದ್ಧ ಸ್ಥಳೀಯ ಕಾಂಗ್ರೆಸ್ ಶಾಸಕ ಅಫ್ತಾಬ್ ಅಹ್ಮದ್ ನಿಷೇಧಿಸಿದ್ದಾರೆ. ಅವರು, ನೂಹ್ ನಲ್ಲಿ ಬಡವರ ಮನೆಗಳನ್ನು ಮಾತ್ರ ಕೆಡವಿದ್ದರಿಂದ ಸರಕಾರದ ಮೇಲಿನ ನಂಬಿಕೆಗೆ ಧಕ್ಕೆಯಾಗಿದೆ ಎಂದರು. ಇಂದು ಈ ಬಗ್ಗೆ ನೋಟಿಸ್ ನೀಡಲಾಗಿದ್ದು, ಕೂಡಲೇ ಮನೆ, ಅಂಗಡಿಗಳನ್ನು ನೆಲಸಮಗೊಳಿಸಲಾಗಿದೆ ಎಂದು ಗ್ರಾಮಸ್ಥರು ನನಗೆ ತಿಳಿಸಿದ್ದಾರೆ.
ಇಲ್ಲಿಯವರೆಗೆ 202 ಜನರ ಬಂಧನ ! – ಹರಿಯಾಣದ ಗೃಹ ಸಚಿವ ಅನಿಲ್ ವಿಜ್
ಹರ್ಯಾಣದ ಗೃಹ ಸಚಿವ ಅನಿಲ್ ವಿಜ್ ಇವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ನೂಹ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದುವರೆಗೆ 202 ಜನರನ್ನು ಬಂಧಿಸಲಾಗಿದೆ ಮತ್ತು 80 ಜನರ ವಿರುದ್ಧ ತಡೆಗಟ್ಟುವಾ ಕ್ರಮವಾಗಿ ವಶಕ್ಕೆ ಪಡೆಯಲಾಗಿದೆ. ಗುಡ್ಡಗಳು ಮತ್ತು ಮನೆಗಳ ಮೇಲ್ಛಾವಣಿಗಳಿಂದ ಕಲ್ಲು ತೂರಾಟ ಮತ್ತು ಗುಂಡಿನ ದಾಳಿಯನ್ನು ಗಮನಿಸಿದರೆ ಈ ಹಿಂಸಾಚಾರ ಪೂರ್ವಯೋಜಿತವಾಗಿತ್ತು ಎನ್ನುವುದು ಸ್ಪಷ್ಟವಾಗುತ್ತಿದೆ. ಇಲ್ಲಿಯವರೆಗೆ ಒಟ್ಟು 102 ಅಪರಾಧಗಳನ್ನು ದಾಖಲಿಸಲಾಗಿದೆ. ಎಂದು ಹೇಳಿದರು.
ಸಂಪಾದಕೀಯ ನಿಲುವುಈ ರೀತಿ ದೇಶದ ವಿವಿಧ ರಾಜ್ಯಗಳಲ್ಲಿ ಮತಾಂಧ ಮುಸ್ಲಿಮರು ಹಿಂಸಾಚಾರದ ನಡೆಸಿದ ಬಳಿಕ ಅವರ ಅಕ್ರಮ ಕಟ್ಟಡಗಳ ಮೇಲೆ ಕ್ರಮ ಕೈಗೊಳ್ಳುವ ಬದಲು ಸುಗ್ರೀವಾಜ್ಞೆ ಮೂಲಕ ಎಲ್ಲಾ ಅಕ್ರಮ ಕಟ್ಟಡಗಳ ಮೇಲೆ ಕ್ರಮ ಕೈಗೊಳ್ಳಲು ದೇಶದಲ್ಲಿರುವ ವಿವಿಧ ಭಾಜಪ ಸರಕಾರಗಳು ಪ್ರಯತ್ನಿಸಿದರೆ, ಮತಾಂಧರ ಕುಕೃತ್ಯಗಳನ್ನು ಸ್ವಲ್ಪ ಮಟ್ಟಿಗಾದರೂ ನಿಗ್ರಹಿಸಬಹುದು ! |