ನೂಹ (ಹರಿಯಾಣ) – ನೂಹದಲ್ಲಿ ಹಿಂಸಾಚಾರದ ನಂತರ, ಹರಿಯಾಣದ ಇತರ ಜಿಲ್ಲೆಗಳಲ್ಲಿ ಹಿಂಸಾಚಾರದ ಘಟನೆಗಳು ಮುಂದುವರೆದಿದೆ. ಆಗಸ್ಟ್ 2 ರ ರಾತ್ರಿ, ನೂಹ ಜಿಲ್ಲೆಯ ತಾವಡು ಎಂಬಲ್ಲಿ 2 ಮಸೀದಿಗಳಿಗೆ ಬೆಂಕಿ ಹಚ್ಚಲಾಯಿತು. ಈ ಘಟನೆಯ ನಂತರ ಇಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಬಂದೋಬದ್ತು ಮಾಡಲಾಗಿದೆ.
हरियाणा के नूंह में दो मस्जिदों पर पेट्रोल बम फेंके गएhttps://t.co/L7dHe38iOR
— NewsClick (@newsclickin) August 3, 2023
ಬೈಕ್ ನಲ್ಲಿ ಬಂದ ದಾಳಿಕೋರರು ಮಸೀದಿಗಳ ಮೇಲೆ ಪೆಟ್ರೋಲ್ ಬಾಂಬ್ ನಿಂದ ದಾಳಿ ನಡೆಸಿದ್ದಾರೆ. ಇದರಿಂದ ಇಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಈ ಮಸೀದಿಗಳಿಗೆ ಸ್ವಲ್ಪ ಹಾನಿಯಾಗಿದೆ. ಇದರೊಂದಿಗೆ ದಾಳಿಕೋರರು ಪಲವಲ ಜಿಲ್ಲೆಯ ಮಿನಾರ್ ಗೇಟ್ ಬಜಾರ್‌ನಲ್ಲಿರುವ ಬಳೆ ಅಂಗಡಿಗೆ ಬೆಂಕಿ ಹಚ್ಚಿದ್ದಾರೆ.
ಸಂಪಾದಕೀಯ ನಿಲುವು‘ಮತಾಂಧ ಮುಸ್ಲಿಮರೇ ಇಂತಹ ಘಟನೆಗಳನ್ನು ಮಾಡಿ ಹಿಂದೂಗಳಿಗೆ ಅಪಕೀರ್ತಿ ತರಲು ಯತ್ನಿಸುತ್ತಿದ್ದಾರೆಯೇ ?’, ಈ ಬಗ್ಗೆ ಪೊಲೀಸರು ತನಿಖೆ ನಡೆಸಬೇಕು ! |