ಕಮಲಾಪುರದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಬುರ್ಖಾ ಧರಿಸಿಲ್ಲ ಎಂದು ಬಸ್ ಹತ್ತಲು ಬಿಡದ ಚಾಲಕ !

ಕಮಲಾಪುರ – ಮುಸಲ್ಮಾನ ವಿದ್ಯಾರ್ಥಿನಿಯರು ಬುರ್ಖಾ ಧರಿಸದೇ ಇದ್ದರಿಂದ ಬಸ್ ಚಾಲಕನೊಬ್ಬ ಬಸ್ ಹತ್ತಿಕೊಳ್ಳಲು ನಿರಾಕರಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದೆ. ಅದರಲ್ಲಿ ಚಾಲಕನು, `ವಿದ್ಯಾರ್ಥಿನಿಯರು ಬುರ್ಖಾ ಹಾಕಿಕೊಂಡರೆ ಮಾತ್ರ ಬಸ್‌ನಲ್ಲಿ ಹತ್ತಿಸಿಕೊಳ್ಳಲಾಗುವುದು’ ಎಂದು ಹೇಳುತ್ತಿದ್ದಾನೆ. ಇದರಿಂದ ಈ ವಿದ್ಯಾರ್ಥಿನಿಯರಿಗೆ ಬಸ್ ಹತ್ತಲು ಸಾಧ್ಯವಾಗಲಿಲ್ಲ. ಈ ವಿದ್ಯಾರ್ಥಿನಿಯರು ಹಿಜಾಬ್ (ಮುಸ್ಲಿಂ ಮಹಿಳೆಯರ ತಲೆ ಮತ್ತು ಕುತ್ತಿಗೆ ಮುಚ್ಚುವ ವಸ್ತ್ರ) ಧರಿಸಿದ್ದರೂ ಚಾಲಕ ಅವರನ್ನು ಬಸ್ ಹತ್ತಲು ಬಿಡಲಿಲ್ಲ. ಚಾಲಕನು ಈ ಮುಸ್ಲಿಂ ವಿದ್ಯಾರ್ಥಿನಿಯರಿಗೆ `ನೀವು ಮುಸಲ್ಮಾನರಾಗಿರುವುದರಿಂದ ಹಿಜಾಬ್ ಅಲ್ಲ, ಬುರ್ಖಾ ಧರಿಸಬೇಕು ಎಂದು ಹೇಳಿದ್ದಾನೆ.

1. ಸ್ಥಳೀಯರು ಈ ಬಗ್ಗೆ ಚಾಲಕನನ್ನು ಪ್ರಶ್ನಿಸಿದಾಗ ಬಸ್ ಕೆಟ್ಟಿತ್ತು. ಇದರಿಂದ ವಿದ್ಯಾರ್ಥಿಗಳು ಗಲಾಟೆ ಮಾಡುತ್ತಿದ್ದರು. ಬಸ್ಸು ಕೆಟ್ಟಿದೆ ಎಂದು ಹೇಳಿದರೂ ಅವರು ಬಸ್ಸು ಹತ್ತಿದ್ದರು ಎಂದು ಹೇಳಿದನು.

2. ಈ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಈ ಪ್ರಕರಣದ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಚಾಲಕ ನಡೆದುಕೊಂಡಿರುವುದು ಬಹಳ ತಪ್ಪಾಗಿದೆ. ಯಾವ ರೀತಿಯ ಉಡುಗೆ ಧರಿಸಬೇಕು ಎನ್ನುವುದು ಆ ವಿದ್ಯಾರ್ಥಿನಿಯರ ಹಕ್ಕು ಎಂದೂ ರೆಡ್ಡಿಯವರು ಹೇಳಿದ್ದಾರೆ.