ಕೇಂದ್ರ ಸಚಿವರಿಗೆ ಅಶ್ಲೀಲ ʼವಿಡಿಯೋ ಕರೆʼ ಮಾಡಿ ಸುಲಿಗೆಗೆ ಯತ್ನಿಸಿದ ಮತಾಂಧರ ಬಂಧನ!

ನವದೆಹಲಿ – ಕೇಂದ್ರ ಸಚಿವ ಪ್ರಲ್ಲಾದ್‌ ಪಟೇಲ್ ಗೆ ಅಶ್ಲೀಲ ʼವಿಡಿಯೋ ಕರೆʼ ಮಾಡಿ ಅವರಿಂದ ಸುಲಿಗೆಗೆ ಯತ್ನಿಸಿದ ಮೊಹಮ್ಮದ್‌ ವಕೀಲ್‌ ಮತ್ತು ಮೊಹಮ್ಮದ್‌ ಸಾಹಿಬ್‌ ಎಂಬ ಇಬ್ಬರು ವ್ಯಕ್ತಿಗಳನ್ನು ದೆಹಲಿ ಪೊಲೀಸರ ಅಪರಾಧ ವಿಭಾಗ ಬಂಧಿಸಿದೆ. ಜೂನ್‌ ೭ ರಂದು ಪ್ರಲ್ಲಾದ್‌ ಪಟೇಲ್‌ ವಾಟ್ಸಾಪ್ ನಲ್ಲಿ ವೀಡಿಯೊ ಕರೆ ಸ್ವೀಕರಿಸಿದ್ದರು. ಅವರು ಅದನ್ನು ಒಪ್ಪಿಕೊಂಡಾಗ, ಅದರಲ್ಲಿ ಅಶ್ಲೀಲ ವೀಡಿಯೊ ಕಾಣಿಸಿಕೊಂಡಿತು. ಆದ್ದರಿಂದ ಅವರು ಅದನ್ನು ಕಟ್‌ ಮಾಡಿದರು. ಸ್ವಲ್ಪ ಹೊತ್ತಿನ ನಂತರ ಮತ್ತೆ ಅದೇ ಕರೆ ಬಂದಿದ್ದು, ನಂತರವೂ ಅಶ್ಲೀಲ ವಿಡಿಯೋ ಪ್ಲೇ ಆಗಿದೆ. ಈ ವೇಳೆ ಕರೆ ಮಾಡಿದವರು ಪಟೇಲ್‌ ಅವರು ಅಶ್ಲೀಲ ವೀಡಿಯೊಗಳನ್ನು ವೀಕ್ಷಿಸುತ್ತಿರುವ ವೀಡಿಯೊವನ್ನು ಪ್ರಸಾರ ಮಾಡುವ ಮೂಲಕ ಪಟೇಲ್‌ ಅವರನ್ನು ಮಾನನಷ್ಟಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಇಂತಹ ಅಪಕೀರ್ತಿಯನ್ನು ತಡೆಯಲು ಪಟೇಲರಿಂದ ಲಕ್ಷಗಟ್ಠಲೆ ರೂಪಾಯಿಗಳ ಸುಲಿಗೆಗೆ ಬೇಡಿಕೆಯಿಟ್ಟರು. ಈ ವಿಷಯವಾಗಿ ಪಟೇಲ್‌ ಪೊಲೀಸರಿಗೆ ದೂರು ನೀಡಿದ ನಂತರ ಪೊಲೀಸರು ಮೇಲಿನ ಇಬ್ಬರನ್ನು ಬಂಧಿಸಿದ್ದಾರೆ. ಈ ಪ್ರಕರಣದ ಹಿಂದಿನ ಮಾಸ್ಟರ್‌ ಮೈಂಡ್‌ ಮೊಹಮ್ಮದ್‌ ಸಬೀರ್‌ ಆಗಿದ್ದಾನೆ. ಪೊಲೀಸರು ಆತನನ್ನು ಹುಡುಕುತ್ತಿದ್ದಾರೆ. ಈ ಮೂಲಕ ಜನರನ್ನು ಸಂಪರ್ಕಿಸಿ ಹಣ ವಸೂಲಿ ಮಾಡುವ ತಂಡವೊಂದು ಕೆಲಸ ಮಾಡುತ್ತಿರುವ ಬಗ್ಗೆ ಪೊಲಿಸರಿಗೆ ಮಾಹಿತಿ ಸಿಕ್ಕಿದೆ.