ಕಾಸರಗೋಡು (ಕೇರಳ) – ಕಾಸರಗೋಡು ಜಿಲ್ಲೆಯ ಕನ್ಹಾನಗಡ್ ನಲ್ಲಿ ಮುಸ್ಲಿಂ ಲೀಗ್ ನಿಂದ ಸಮಾನ ನಾಗರೀಕ ಕಾನೂನಿನ ವಿರುದ್ಧ ನಡೆಸಿರುವ ಪ್ರತಿಭಟನೆಯಲ್ಲಿ ಹಿಂದುಗಳನ್ನು ಕೊಲ್ಲುವ ಘೋಷಣೆ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಈ ವಿಡಿಯೋ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ಆಗುತ್ತಿವೆ. ಇನ್ನೊಂದು ಕಡೆ ಹಿಂದೂ ವಿರೋಧಿ ಘೋಷಣೆ ನೀಡಿರುವ ಪ್ರಕರಣದಲ್ಲಿ ‘ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್’ ವತಿಯಿಂದ ಸಂಬಂಧಪಟ್ಟ ಯುವಕನನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ; ಆದರೆ ಇಲ್ಲಿಯವರೆಗೆ ಅದಕ್ಕೆ ಅನುಮೋದನೆ ಸಿಕ್ಕಿಲ್ಲ. (ಯುವಕನ ಮೇಲೆ ಕ್ರಮ ಕೈಗೊಂಡಿದ್ದರೆ ಈ ರೀತಿಯ ಮಾನಸಿಕತೆ ಅಡಗಿ ಕುಳಿತುಕೊಳ್ಳುವುದಿಲ್ಲ. ಕೇಂದ್ರ ಸರಕಾರದಿಂದ ಇಂತಹ ಸಂಘಟನೆಗಳ ಮೇಲೆ ನಿಷೇಧ ಹೇರಿ ಸಂಬಂಧಪಟ್ಟವರನ್ನು ಜೈಲಿಗೆ ಅಟ್ಟಬೇಕು ! – ಸಂಪಾದಕರು)
(ಸೌಜನ್ಯ – Republic World)
ಭಾಜಪದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ಮುಖ್ಯಸ್ಥ ಅಮಿತ್ ಮಾಲವಿಯ ಇವರು ಈ ವಿಡಿಯೋ ಪ್ರಸಾರ ಮಾಡಿದ್ದಾರೆ. ಅವರು ಟ್ವೀಟ್ ನಲ್ಲಿ, ಕಾಂಗ್ರೆಸ್ ಬೆಂಬಲಿಗ ‘ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನ ಯುವ ಶಾಖೆ ಕೇರಳದ ಕಾಸರಗೋಡುನಲ್ಲಿ ಪ್ರತಿಭಟನೆ ನಡೆಸಿದರು ಮತ್ತು ಹಿಂದೂ ವಿರೋಧಿ ಘೋಷಣೆ ನೀಡಿದರು. ಹಿಂದುಗಳಿಗೆ ಗಲ್ಲು ಶಿಕ್ಷೆ ಮತ್ತು ಜೀವಂತ ಸುಡುವ ಬೆದರಿಕೆ ನೀಡಲಾಗಿದೆ. ಪಿನರಾಯಿ ವಿಜಯನ್ ಸರಕಾರದಿಂದ ಇವರಿಗೆ ಸಹಕಾರ ಇಲ್ಲದೆ ಇದ್ದರೆ ಆಗ ಇಷ್ಟು ಮುಂದುವರೆಯುವ ಧೈರ್ಯ ಆಗುತ್ತಿರಲಿಲ್ಲ. ಕೇರಳದಲ್ಲಿ ಈಗ ಹಿಂದೂ ಮತ್ತು ಕ್ರೈಸ್ತರು ಸುರಕ್ಷಿತವಾಗಿದ್ದಾರೆಯೆ ? ಎಂದು ಕೇಳಿದ್ದಾರೆ.
ಈ ಹಿಂದೆ ಕೂಡ ಹಿಂದೂ ಮತ್ತು ಕ್ರೈಸ್ತರನ್ನು ಕೊಲ್ಲುವ ಘೋಷಣೆ ನೀಡಲಾಗಿತ್ತು !
ಅಮೀತ ಮಲವಿಯ ಇವರು ಈ ವಿಡಿಯೋ ಜೊತೆಗೆ ಹಿಂದಿನ ಒಂದು ಮೋರ್ಚಾದ ಸಂದರ್ಭ ನೀಡುತ್ತಾ, ೭ ವರ್ಷದ ಓರ್ವ ಹುಡುಗ ತಂದೆಯ ಹೆಗಲ ಮೇಲೆ ಕುಳಿತು ಹಿಂದೂ ಮತ್ತು ಕ್ರೈಸ್ತರಿಗೆ ಅವರ ಅಂತ್ಯ ಸಂಸ್ಕಾರಕ್ಕಾಗಿ ಅಕ್ಕಿ, ಹೂವ ಮತ್ತು ಕರ್ಪೂರ ಸಿದ್ದವಾಗಿ ಇರಿಸಿ, ಎಂದು ಘೋಷಣೆ ನೀಡಿದ್ದ. ಈ ಪ್ರಕರಣದ ನಂತರ ಪೊಲೀಸರಿಂದ ಈ ಹುಡುಗನ ಮೇಲೆ ಕ್ರಮ ಕೈಗೊಳ್ಳಲಾಗಿತ್ತು.
Youth wing of the Indian Union Muslim League, an ally of the Congress, held a rally in Kerala’s Kasargode, and raised vile anti-Hindu slogans, threatening to hang them (Hindus) in front of Temples and burn them alive…
They wouldn’t have dared to go this far had the Pinarayi… pic.twitter.com/lFV5caJ18C
— Amit Malviya (@amitmalviya) July 26, 2023
ಸಂಪಾದಕೀಯ ನಿಲುವು
|