ಮೇಘಾಲಯ ಮುಖ್ಯಮಂತ್ರಿಯವರ ಕಚೇರಿಯ ಮೇಲೆ ಸಮೂಹದಿಂದ ದಾಳಿ : 5 ಭದ್ರತಾ ಸಿಬ್ಬಂದಿಗೆ ಗಾಯ

ತುರಾ (ಮೇಘಾಲಯ) – ಮೇಘಾಲಯ ಮುಖ್ಯಮಂತ್ರಿ ಕೊನರಾಡ ಸಂಗಮಾ ಇವರ ಕಚೇರಿಯ ಮೇಲೆ ಗುಂಪೊಂದು ನಡೆಸಿದ ದಾಳಿಯಲ್ಲಿ 5 ಭದ್ರತಾ ಸಿಬ್ಬಂದಿಗಳು ಗಾಯಗೊಂಡಿದ್ದಾರೆ. ಇಲ್ಲಿ ಈಗ ನಿಷೆಧಾಜ್ಞೆ ಜಾರಿಗೊಳಿಸಲಾಗಿದೆ. ದಾಳಿಯ ಸಂದರ್ಭದಲ್ಲಿ ಮುಖ್ಯಮಂತ್ರಿ ಸಂಗಮಾ ನಿಯೋಗದೊಂದಿಗೆ ಚರ್ಚಿಸುತ್ತಿದ್ದರು. ಚರ್ಚೆ ಮುಗಿದಾಗ ಕಾರ್ಯಾಲಯದ ಹೊರಗೆ ಅಕಸ್ಮಿಕವಾಗಿ ಗುಂಪೊಂದು ಬಂದು, ಕಲ್ಲು ತೂರಾಟ ನಡೆಸಲು ಪ್ರಾರಂಭಿಸಿತು. ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು. ಈ ಗುಂಪು ಮುಖ್ಯಮಂತ್ರಿ ಕಚೇರಿಯ ಪ್ರವೇಶದ್ವಾರವನ್ನು ಮುರಿಯಲು ಪ್ರಯತ್ನಿಸಿತು.

(ಸೌಜನ್ಯ – Zee News English)

ಮುಖ್ಯಮಂತ್ರಿ ಸಂಗಮಾ ಇವರು ಮಾತನಾಡುತ್ತಾ, ಕಚೇರಿಯ ಮೇಲೆ ನಡೆದ ದಾಳಿ ಅತ್ಯಂತ ದುರದೃಷ್ಟಕರವಾಗಿದೆ. ನಾವು `ಅಚಿಕ್ ಕಾನ್ಷಿಯಸ್ ಹೊಲಿಸ್ಟಿಕಲಿ ಇಂಟಿಗ್ರೇಟೆಡ್ ಕ್ರಿಮಾ’ ಮತ್ತು `ಗಾರೊ ಹಿಲ್ಸ ಸ್ಟೇಟ ಮೂವಮೆಂಟ್ ಕಮಿಟಿ’ ಪ್ರತಿನಿಧಿಗಳೊಂದಿಗೆ ಚರ್ಚಿಸುತ್ತಿದ್ದೇವೆ. ಅವರ ಕೆಲವು ಬೇಡಿಕೆಗಳಿವೆ. ದಾಳಿ ನಡೆಸಿದವರು ಯಾರು ಎಂಬುದು ಈ ಸಂಘಟನೆಗಳ ಪ್ರತಿನಿಧಿಗಳಿಗೂಗೊತ್ತಿಲ್ಲ. ಅವರು ಹೊರಗಿನವರಾಗಿದ್ದರು. ಅವರನ್ನು ಹುಡುಕಲಾಗುತ್ತಿದೆ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಮುಖ್ಯಮಂತ್ರಿ ಕಚೇರಿಯೇ ಸುರಕ್ಷಿತವಾಗಿಲ್ಲದಿದ್ದಲ್ಲಿ ಸಾರ್ವಜನಿಕರು ಹೇಗೆ ಸುರಕ್ಷಿತವಾಗಿರುವರು ?