ಸೀಮಾ ಹೈದರ್ ನಂತಹ ಮತ್ತೊಂದು ಪ್ರಕರಣ ಬಹಿರಂಗ
ನವದೆಹಲಿ – `ಪಬ್ಜಿ’ ಆಟದ ಮಾಧ್ಯಮದಿಂದ ಸಚಿನ್ ಹೆಸರಿನ ಭಾರತೀಯ ಯುವಕನನ್ನು ಪ್ರೀತಿಸಿ ಪಾಕಿಸ್ತಾನದ ಸೀಮಾ ಹೈದರ್ ಪ್ರಕರಣ ಇನ್ನೂ ಮಾಸುವ ಮುನ್ನವೇ `ಇನ್ ಸ್ಟಾಗ್ರಾಮ್’ ಮೂಲಕ ಝಾರಖಂಡನ ವ್ಯಕ್ತಿಯನ್ನು ಪ್ರೀತಿಸಿದ ಮಹಿಳೆಯು ಪೋಲೆಂಡನಿಂದ ಭಾರತಕ್ಕೆ ಬಂದಿದ್ದಾಳೆ. 2021 ರಲ್ಲಿ `ಇನ್ ಸ್ಟಾಗ್ರಾಮ್’ ಮೂಲಕ ಝಾರಖಂಡನ ಹಜಾರಿಬಾಗನ ಶಾದಾಬ ಆಲಂ ಗೆ `ಬಾರ್ಬರಾ’ ಎಂಬ 49 ವರ್ಷದ ಪೊಲಿಶ್ ಮಹಿಳೆಯ ಪರಿಚಯವಾಯಿತು. ನಂತರ ಇವರಿಬ್ಬರೂ ಪ್ರೀತಿಸುತ್ತಿದ್ದರು ಮತ್ತು ಈಗ ಬಾರ್ಬರಾ ತನ್ನ ಮೊದಲ ಗಂಡನ ಮಗಳು ಅನನ್ಯಾ(ವಯಸ್ಸು 6 ವರ್ಷಗಳು)ಳೊಂದಿಗೆ ಭಾರತಕ್ಕೆ ಬಂದಿದ್ದಾಳೆ. ಅವಳು ಪ್ರವಾಸಿ ವೀಸಾದಡಿಯಲ್ಲಿ 5 ವರ್ಷಗಳ ವರೆಗೆ ಭಾರತದಲ್ಲಿ ವಾಸಿಸಬಹುದಾಗಿದೆ. ಅವಳು ತನ್ನ ಮೊದಲ ಪತಿಗೆ ವಿಚ್ಛೇದನ ನೀಡಿದ್ದಾಳೆ. ಅವಳು ಹಜಾರಿಬಾಗನ ಬರತುವಾ ಗ್ರಾಮದಲ್ಲಿ ಶಾದಾಬನೊಂದಿಗೆ ವಾಸಿಸುತ್ತಿದ್ದು, ಶೀಘ್ರದಲ್ಲಿಯೇ ಅವರಿಬ್ಬರೂ ಮದುವೆಯಾಲಿದ್ದಾರೆ.
A 49-year-old woman from #Poland flew to India to live with her Indian lover in #Jharkhand‘s Hazaribag, whom she had befriended on Instagram https://t.co/pHVsoX5U54
— Hindustan Times (@htTweets) July 19, 2023
ಸಂಪಾದಕರ ನಿಲುವು* ಪ್ರೀತಿಯ ಹೆಸರಿನಲ್ಲಿ ಇಂತಹ ವಿದೇಶಿ ಮಹಿಳೆಯರ ಯಾವುದೇ ದುರುದ್ದೇಶವಿಲ್ಲವಲ್ಲ ? ಎನ್ನುವುದನ್ನು ಭಾರತೀಯ ಭದ್ರತಾ ಪಡೆ ಪರಿಶೀಲಿಸುವ ಆವಶ್ಯಕತೆಯಿದೆ ! |