ಮಣಿಪುರದ ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಮಾತನಾಡುವ ಶಾಸಕರಿಗೆ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಸಲಹೆ ನೀಡಿದ ಕಾಂಗ್ರೆಸ್ ಸಚಿವ ಪಕ್ಷದಿಂದಲೇ ಅಮಾನತು !

ಸಚಿವ ರಾಜೇಂದ್ರ ಗೂಢ

ಜೈಪುರ (ರಾಜಸ್ಥಾನ) – ರಾಜಸ್ಥಾನದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಿವೆ. ಮಹಿಳೆಯರಿಗೆ ರಕ್ಷಣೆ ನೀಡುವಲ್ಲಿ ನಮ್ಮ ಸರಕಾರ ವಿಫಲವಾಗಿದೆ. ಮಣಿಪುರದಲ್ಲಿ ೨ ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಮಾತನಾಡುವ ಬದಲು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ತುಂಬಿದ ವಿಧಾನಸಭೆಯಲ್ಲಿ ತಮ್ಮದೇ ಸರಕಾರಕ್ಕೆ ಕಿವಿಹಿಂಡಿದ ಕಾಂಗ್ರೆಸ್‌ನ ಪಂಚಾಯತ ರಾಜ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ರಾಜೇಂದ್ರ ಗೂಢ ಅವರನ್ನು ೨೪ ಗಂಟೆಗಳಲ್ಲಿ ಹುದ್ದೆಯಿಂದ ವಜಾಗೊಳಿಸಲಾಗಿದೆ,

ಜುಲೈ ೨೧ ರಂದು ರಾಜಸ್ಥಾನದ ವಿಧಾನಪರಿಷತ್ತಿನಲ್ಲಿ ರಾಜಸ್ಥಾನ ಕನಿಷ್ಠ ಆದಾಯ ಖಾತರಿ ಮಸೂದೆ ೨೦೨೩ರ ಕುರಿತು ಚರ್ಚೆ ನಡೆಯುತಿತ್ತು. ಈ ವೇಳೆ ಕಾಂಗ್ರೆಸ್ ನ ಶಾಸಕರು ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಗೊಳಿಸಿ ಸಾಮೂಹಿಕ ಅತ್ಯಾಚಾರ ಮಾಡಿದ ಬಗ್ಗೆ ಪ್ರಶ್ನೆ ಎತ್ತಿದರು. ಆ ವೇಳೆ ರಾಜೇಂದ್ರ ಗುಢಾ ಅವರು ತಮ್ಮದೇ ಪಕ್ಷದ ಶಾಸಕರಿಗೆ ಮೇಲಿನಂತೆ ಹೇಳಿಕೆ ನೀಡುತ್ತಾ ಕಿವಿ ಹಿಂಡಿದರು.

ನನ್ನನ್ನು ತೆಗೆದು ಹಾಕುವ ಬದಲು ಮಹಿಳೆಯರ ರಕ್ಷಣೆಗಾಗಿ ಕೆಲಸ ಮಾಡಿ ! – ರಾಜೇಂದ್ರ ಗುಢಾ

ನನ್ನನ್ನು ಹುದ್ದೆಯಿಂದ ತೆಗೆದು ಏನು ಪ್ರಯೋಜನ ? ಅದರ ಬದಲು ಮಹಿಳೆಯರ ರಕ್ಷಣೆಯ ಕೆಲಸ ಮಾಡಬೇಕು. ನಾನು ಈ ಬಗ್ಗೆ ವಿಧಾನ ಸಭೆಯಲ್ಲಿ ಎಲ್ಲರನ್ನೂ ಕೇಳಲಿದ್ದೇನೆ, ಎಂದು ರಾಜೇಂದ್ರ ಗುಢಾ ಅವರು ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

‘ಇದು ಪಕ್ಷದ ಆಂತರಿಕ ಪ್ರಶ್ನೆ !’ಅಂತೆ – ಮುಖ್ಯಮಂತ್ರಿ ಅಶೋಕ ಗೆಹಲೋತ

ಮುಖ್ಯಮಂತ್ರಿ ಅಶೋಕ ಗೆಹಲೋತ

ರಾಜೇಂದ್ರ ಗುಢಾ ಅವರನ್ನು ಹುದ್ದೆಯಿಂದ ವಜಾಗೊಳಿಸಿರುವ ಕುರಿತು ಕಾರ್ಯಕ್ರಮವೊಂದರಲ್ಲಿ ಸುದ್ದಿಗಾರರು ರಾಜ್ಯದ ಮುಖ್ಯಮಂತ್ರಿ ಅಶೋಕ ಗೆಹಲೋತ ಅವರಿಗೆ ಪ್ರಶ್ನಿಸಿದಾಗ, ಇದು ನಮ್ಮ ಪಕ್ಷದ ಆಂತರಿಕ ಪ್ರಶ್ನೆಯಾಗಿದೆ. ನಾವು ಇದರ ಬಗ್ಗೆ ಚರ್ಚಿಸುತ್ತೇವೆ, ಈಗ ಇಲ್ಲಿ ಆಯೋಜಿಸಿರುವ ಕಾರ್ಯಕ್ರಮದ ಬಗ್ಗೆ ನೀವು ಪ್ರಶ್ನಿಸಿ ಎಂದು ಹೇಳಿದರು. (ಇದರಿಂದ ಮಹಿಳಾ ಸುರಕ್ಷತೆಯ ಬಗ್ಗೆ ಮುಖ್ಯಮಂತ್ರಿಗಳಿಗೆ ಎಷ್ಟು ಕಾಳಜಿ ಇದೆ ಎಂಬುದು ತಿಳಿಯುತ್ತದೆ !- ಸಂಪಾದಕರು)

ಸಂಪಾದಕರ ನಿಲುವು

* ಇದು ಕಾಂಗ್ರೆಸ್ಸಿನ ನಿಜವಾದ ಮಾನಸಿಕತೆ ! ಇಂತಹ ಕಾಂಗ್ರೆಸ್ ಗೆ ಮಹಿಳೆಯರ ಸುರಕ್ಷತೆ ಬಗ್ಗೆ ಮಾತನಾಡುವ ನೈತಿಕ ಹಕ್ಕಿದೆಯೇ ? ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ವಾಡ್ರಾ ಈ ಕುರಿತು ಏಕೆ ಮಾತನಾಡುವುದಿಲ್ಲ ?