ನಿಯಂತ್ರಣ ಅಥವಾ ಅಂಜಿಕೆ ಬೇಕೇಬೇಕು !

ಸೌಂದರ್ಯ ವರ್ಧನಾಲಯಕ್ಕೆ ಬರುವ ಮಹಿಳೆಯರನ್ನು ಇಂಜೆಕ್ಷನ್‌ನಿಂದ ಮೂರ್ಛೆ ತಪ್ಪಿಸಿ ಬಲಾತ್ಕಾರಿಸಿದ ಮೂವರನ್ನು ಇರಾನ ಸರಕಾರವು ಗಲ್ಲಿಗೇರಿಸಿದೆ. ಇದರಲ್ಲಿ ಒಬ್ಬ ಆಧುನಿಕ ವೈದ್ಯ (ಡಾಕ್ಟರ್) ಹಾಗೂ ಅವನ ಇಬ್ಬರು ಸಹಾಯಕರಿದ್ದಾರೆ. ಈ ಅಪರಾಧಿಗಳು ಬಲಾತ್ಕಾರದ ಘಟನೆಯ ಛಾಯಾಚಿತ್ರ ಹಾಗೂ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಿ ಸಂತ್ರಸ್ತ ಮಹಿಳೆಯರನ್ನು ‘ಬ್ಲ್ಯಾಕ್ ಮೈಲ್ ಮಾಡುತ್ತಿದ್ದರು. ನವೆಂಬರ ೨೦೨೧ ರಲ್ಲಿ ಅವರನ್ನು ಬಂಧಿಸಲಾಯಿತು ಹಾಗೂ ೨೦ ತಿಂಗಳಲ್ಲಿ ಅವರನ್ನು ಗಲ್ಲಿಗೇರಿಸಲಾಯಿತು. ನ್ಯಾಯಾಲಯವು ಅವರಿಗೆ ಬಲಾತ್ಕಾರದ ೭ ಪ್ರಕರಣಗಳಲ್ಲಿ ದೋಷಿಗಳೆಂದು ನಿರ್ಧರಿಸಿತ್ತು. ಅವರ ಹಾಗೆ ಕೃತ್ಯ ಮಾಡುವವರಿಗೆ ಈ ಶಿಕ್ಷೆಯಿಂದ ಭಯವಾಗುವುದು ಖಚಿತ ! ಸೌದಿ ಅರೇಬಿಯಾ ಇತ್ತೀಚೆಗೆ ೫ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಿತ್ತು. ಇದು ಈ ವರ್ಷ ನೀಡಲಾದ ಅತಿದೊಡ್ಡ ಸಾಮೂಹಿಕ ಗಲ್ಲು ಶಿಕ್ಷೆಯಾಗಿದೆ. ಈ ಎಲ್ಲ ಆರೋಪಿಗಳು ಧಾರ್ಮಿಕ ಸ್ಥಳಗಳ ಮೇಲಿನ ಮಾರಣಾಂತಿಕ ಆಕ್ರಮಣದಲ್ಲಿ ತೊಡಗಿದ್ದರು. ಸೌದಿ ಅರೇಬಿಯಾ ಈ ವರ್ಷ ಒಟ್ಟು ೬೮ ಜನರನ್ನು ಗಲ್ಲಿಗೇರಿಸಿತ್ತು. ಕಳೆದ ವರ್ಷ ಒಟ್ಟು ೧೪೭ ಜನರನ್ನು ಮತ್ತು ೨೦೨೧ ರಲ್ಲಿ ೬೯ ಜನರನ್ನು ಗಲ್ಲಿಗೇರಿಸಿತ್ತು

ಭಾರತದಲ್ಲಿ ಹೆಚ್ಚುತ್ತಿರುವ ಬಲಾತ್ಕಾರದ ಸಂಖ್ಯೆಗಳು !

ಭಾರತದಲ್ಲಿ ಬಲಾತ್ಕಾರದ ಪ್ರಕರಣಗಳಲ್ಲಿ ಕೆಲವರಿಗೆ ಗಲ್ಲುಶಿಕ್ಷೆ ಘೋಷಿಸಲಾಗುತ್ತದೆ; ಆದರೆ ಅದನ್ನು ಜಾರಿಗೊಳಿಸುವುದಿಲ್ಲ, ಕೆಲವೊಮ್ಮೆ ಗಲ್ಲುಶಿಕ್ಷೆಗೆ ಪರ್ಯಾಯವನ್ನು ಹುಡುಕಲಾಗುತ್ತದೆ. ಭಾರತದಲ್ಲಿ ಹಸುಗೂಸಿನಿಂದ ಹಿಡಿದು ೮೦ ವರ್ಷದ ವೃದ್ಧ ಮಹಿಳೆಯರ ಮೇಲೆ ಬಲಾತ್ಕಾರ ಆಗಿರುವ ಘಟನೆಗಳಿವೆ. ಬಲಾತ್ಕಾರ ಮಾಡುವ ವಿಧವೂ ಅತ್ಯಂತ ಲಾಂಛನಾಸ್ಪದ ಹಾಗೂ ವಿಕೃತವಾಗಿರುತ್ತದೆ. ಆದ್ದರಿಂದ ಸಂತ್ರಸ್ತಳ ಮಾನಸಿಕ

ಸ್ಥಿತಿಯ ಕಲ್ಪನೆ ಮಾಡಬಹುದು. ಆ ಯುವತಿಯು ಬದುಕಿದ್ದರೂ ಸತ್ತ ಹಾಗೆಯೇ ಜೀವಿಸುತ್ತಿರುತ್ತಾಳೆ. ಕೆಲವು ಘಟನೆಗಳಲ್ಲಿ ಬಲಾತ್ಕಾರ ಮಾಡಿ ಯುವತಿಯನ್ನು ಹತ್ಯೆ ಮಾಡುವಂತಹ ಭೀಕರ ಕೃತ್ಯವನ್ನೂ ಮಾಡಲಾಗುತ್ತದೆ. ಕೆಲವು ಆರೋಪಿಗಳು ಪಲಾಯನಗೈಯುತ್ತಾರೆ. ಕೆಲವು ಆರೋಪಿಗಳು ಜಾಮೀನು ಪಡೆದು ಹೊರಗೆ ಬರುತ್ತಾರೆ ಹಾಗೂ ಪುನಃ ಬಲಾತ್ಕಾರ ಮಾಡಲು ಮುಕ್ತರಾಗುತ್ತಾರೆ. ಅಪರಾಧಗಳ ಈ ದುಷ್ಟಚಕ್ರವನ್ನು ನಾವು ಇನ್ನೆಷ್ಟು ಕಾಲ ಮುಂದುವರಿಸಲಿದ್ದೇವೆ ? ಅಪರಾಧವನ್ನು ಒಪ್ಪಿಕೊಳ್ಳುವುದು, ಖೇದ ಅಥವಾ ಪಶ್ಚಾತ್ತಾಪಗೊಳ್ಳುವುದಂತೂ ಇಲ್ಲವೇ ಇಲ್ಲ. ಶಿಕ್ಷೆಯ ಭಯವಿದ್ದರೆ ಮಾತ್ರ ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಬಹುದು. ಆದರೆ ಆ ಭಯವೇ ಅಪರಾಧಿಗಳಿಗೆ ಇಲ್ಲದಿದ್ದರೆ, ಅವರು ಮುಕ್ತರಾಗಿ ಪದೇ ಪದೇ ಅದೇ ಕುಕೃತ್ಯಗಳನ್ನು ಮಾಡುವರು.

ಅಪರಾಧ ಮತ್ತು ವಿಕಾಸ ಅಸಾಧ್ಯ !

ಇರಾನನಲ್ಲಿ ೨೦೨೩ ರಲ್ಲಿ ಇಷ್ಟರವರೆಗೆ ವಿವಿಧ ಅಪರಾಧ ಗಳಿಗಾಗಿ ೩೫೪ ಜನರನ್ನು ಗಲ್ಲಿಗೇರಿಸಲಾಯಿತು. ಭಾರತದಲ್ಲಿ ಈ ಪ್ರಮಾಣ ಅತ್ಯಲ್ಪ ಇರಬಹುದು. ಅದರಲ್ಲಿಯೂ ಯಾರಿಗಾದರೂ ಗಲ್ಲು ಶಿಕ್ಷೆ ಘೋಷಣೆಯಾದರೆ ಎಲ್ಲ ಮಾನವಾಧಿಕಾರವಾದಿಗಳು, ಜಾತ್ಯತೀತವಾದಿಗಳು, ಪ್ರಗತಿ (ಅಧೋಗತಿ)ಪರರು ಶಿಕ್ಷೆಯ ವಿರುದ್ಧ ಒಗ್ಗಟ್ಟಾಗುತ್ತಾರೆ; ಏಕೆಂದರೆ ಅವರ ದೃಷ್ಟಿಯಲ್ಲಿ ಯಾರಿಗಾದರೂ ಗಲ್ಲು ಶಿಕ್ಷೆ ನೀಡುವುದೆಂದರೆ ಇದು ಮಾನವತೆಯ ವಿರುದ್ಧವಾಗಿದೆ. ಇಲ್ಲಿ

ಅವನ ಅಪರಾಧದ ತೀವ್ರತೆಯ ಬಗ್ಗೆ ಯಾರೂ ವಿಚಾರ ಮಾಡುವುದಿಲ್ಲ. ತದ್ವಿರುದ್ಧ ಅಪರಾಧಿ ವೃತ್ತಿಯನ್ನೇ ನಿರಂತರ ಬೆಂಬಲಿಸಲಾಗುತ್ತದೆ. ಅಪರಾಧದ ವಿಷಯದಲ್ಲಿ ಮಾನವತೆ, ಕಳವಳವೆನಿಸುತ್ತದೆ, ಅವರ ವಿಷಯದಲ್ಲಿ ಪ್ರೀತಿ ಉಕ್ಕಿ ಬರುತ್ತದೆ, ಆಮೇಲೆ ಇದೇ ಸಂವೇದನಾಶೀಲತೆ ಸಂತ್ರಸ್ತರ ಬಗ್ಗೆ ಏಕೆ ಇರುವುದಿಲ್ಲ? ಮಾನವಾಧಿಕಾರದವರು ಅನೇಕ ಬಾರಿ ಆರೋಪಿಯ ಪಕ್ಷ ವಹಿಸಿರುವುದು ನಮಗೆ ಕಾಣಿಸುತ್ತದೆ; ಆದರೆ ಸಂತ್ರಸ್ತ ವ್ಯಕ್ತಿಯ ಪಕ್ಷದಲ್ಲಿ ಮಾನವಾಧಿಕಾರದವರು ನಿಂತಿರುವ ಹಾಗೂ ಅವರು ಸಂತ್ರಸ್ತ ವ್ಯಕ್ತಿಗೆ ನ್ಯಾಯ ದೊರಕಿಸಿಕೊಟ್ಟಿರುವ ಘಟನೆಯ ಪ್ರಮಾಣ ಅತ್ಯಲ್ಪವಾಗಿದೆ. ಇದು ನಿಜವಾಗಿಯೂ ಶೋಚನೀಯ ಹಾಗೂ ಅಷ್ಟೇ ವಿನಾಶ ಕಾರಿಯೂ ಆಗಿದೆ. ಅಮಲು ಪದಾರ್ಥಗಳ ಕಳ್ಳಸಾಗಾಟ ಮಾಡಿದರೆ ಇರಾನ್, ಸೌದಿ ಅರೇಬಿಯಾ, ಚೀನಾ, ವಿಯೇಟ್ನಾಮ್, ಮಲೇಷ್ಯಾ, ಸಿಂಗಾಪುರ ಸಹಿತ ಬಹಳಷ್ಟು ದೇಶಗಳಲ್ಲಿ ಗಲ್ಲುಶಿಕ್ಷೆ ನೀಡಲಾಗುತ್ತದೆ. ಭಾರತದಲ್ಲಿ ಅಮಲು ಪದಾರ್ಥಗಳ ಕಳ್ಳಸಾಗಾಟದ ಜಾಲ ಹರಡಿದೆ ಹಾಗೂ ಅದು ದಿನ ಕಳೆದಂತೆ ಹೆಚ್ಚುತ್ತಾ ಇದೆ. ಅದನ್ನು ಯಾರು ಹಾಗೂ ಯಾವಾಗ ನಿಯಂತ್ರಿಸುವರು ? ಇತರ ದೇಶಗಳಿಗೆ ಸಾಧ್ಯವಾಗುವ ವಿಷಯ ಶಕ್ತಿಶಾಲಿ ಆಗಲು ಪ್ರಯತ್ನಿಸುತ್ತಿರುವ ಭಾರತಕ್ಕೆ ಏಕೆ ಸಾಧ್ಯವಾಗುವುದಿಲ್ಲ ? ಅಪರಾಧಗಳ ಅಡಿ ಪಾಯದಲ್ಲಿ ವಿಕಾಸದ ಅರಮನೆ ಯಾವತ್ತೂ ನಿಲ್ಲಲು ಸಾಧ್ಯವಿಲ್ಲ, ಎಂಬುದನ್ನು ಭಾರತ ಸರಕಾರ ತಿಳಿದುಕೊಳ್ಳಬೇಕು ಹಾಗೂ ಈ ಆಘಾತಕಾರಿ ಮಾನಸಿಕತೆಯನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳಿಗೆ ಅವರ ಅಪರಾಧಕ್ಕನುಸಾರ ಶೀಘ್ರಾತಿಶೀಘ್ರ ಕಠೋರ ಹಾಗೂ ಪ್ರಸಂಗಾನುಸಾರ ಗಲ್ಲು ಶಿಕ್ಷೆ ನೀಡಲು ಪ್ರಯತ್ನಿಸಬೇಕು. ನೀತಿವಂತ ಹಾಗೂ ಸದ್ಗುಣಿ ಸಮಾಜವೇ ರಾಷ್ಟ್ರವನ್ನು ರೂಪಿಸುತ್ತದೆ. ಆದ್ದರಿಂದ ಇಂತಹ ಸಮಾಜವನ್ನು ರೂಪಿಸುವ ಹೊಣೆ ಆಡಳಿತದವರದ್ದೇ ಆಗಿದೆ. ಇಂತಹ ಸಮಾಜ ಬೇಕಾದರೆ ಸಮಾಜದಲ್ಲಿ ಅಪರಾಧಿ ವೃತ್ತಿಗೆ ಆಶ್ರಯವಿರಬಾರದು. ಅದಕ್ಕಾಗಿ ಕಠಿಣಶಿಕ್ಷೆಯನ್ನು ವಿಧಿಸುವುದು ಹಾಗೂ ಅದನ್ನು ಅನುಷ್ಠಾನಗೊಳಿಸುವುದರ ಕಡೆಗೆ ಸರಕಾರ ಗಮನಹರಿಸುವ ಅವಶ್ಯಕತೆಯಿದೆ.

ಅಪರಾಧಮುಕ್ತ ದೇಶ ಹಾಗೂ ನಾಗರಿಕರ ಹೊಣೆ !

ಛತ್ರಪತಿ ಶಿವಾಜಿ ಮಹಾರಾಜರ ಭಾರತೀಯ ಇತಿಹಾಸ ಪ್ರೇರಣಾದಾಯಕ, ಜ್ವಲಂತ ಹಾಗೂ ವೈಭವಶಾಲಿ ಹೇಗಾಯಿತು ? ಏಕೆಂದರೆ ಆ ಕಾಲದಲ್ಲಿ ನೈತಿಕತೆಯಿತ್ತು, ಅರಾಜಕತೆ ಎಲ್ಲಿಯೂ ಇರಲಿಲ್ಲ. ಯಾರಿಂದಾದರೂ ತಪ್ಪಾದರೆ, ಅವನು ಪ್ರಾಯಶ್ಚಿತ್ತವನ್ನು ಅನುಭವಿಸಬೇಕಾಗುತ್ತಿತ್ತು ಅಥವಾ ದಂಡ ವನ್ನೂ ನೀಡಬೇಕಾಗುತ್ತಿತ್ತು. ಅಪರಾಧದ ತೀವ್ರತೆಗನುಸಾರ ಕಠೋರ ಶಿಕ್ಷೆಯೂ ಆಗುತ್ತಿತ್ತು. ಇದರಿಂದಾಗಿ ಪ್ರತಿಯೊಬ್ಬರೂ ಶಿಕ್ಷೆಯ ಭಯದಲ್ಲಿರುತ್ತಿದ್ದರು. ಆದ್ದರಿಂದಲೆ ಸಜ್ಜನರ ಪಾಲನೆ ಪೋಷಣೆ ಹಾಗೂ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡುವ ಛತ್ರಪತಿ ಶಿವಾಜಿ ಮಹಾರಾಜರು ‘ಆದರ್ಶ ಆಡಳಿತಗಾರರು ಎಂದು ಗುರುತಿಸಲ್ಪಡುತ್ತಾರೆ. ಇಂತಹ ಭಯ, ಅಂಜಿಕೆ ಅಥವಾ ಗೌರವಯುಕ್ತಭೀತಿ ಇಂದು ಯಾರಲ್ಲಿಯೂ ಉಳಿದಿಲ್ಲ. ಆದ್ದರಿಂದ ಎಲ್ಲೆಡೆ ಸ್ವೇಚ್ಛಾಚಾರ ಹೆಚ್ಚಾಗಿ ಅರಾಜಕತೆ ಹಬ್ಬುತ್ತಿದೆ. ಪ್ರಸಾರ ಮತ್ತು ಪ್ರಸಿದ್ಧಿ ಮಾಧ್ಯಮಗಳು ಕೂಡ ಇದರಲ್ಲಿ ಮಹತ್ವದ ಪಾತ್ರವನ್ನು ವಹಿಸುವ ಆವಶ್ಯಕತೆಯಿದೆ. ಸಮಾಜಕ್ಕೆ ಏನು ಇಷ್ಟವಾಗುತ್ತದೆ, ಎನ್ನುವುದಕ್ಕಿಂತ ಸಮಾಜಕ್ಕೆ ಏನು ಆವಶ್ಯಕವಿದೆ, ಅದನ್ನು ನೀಡುವ ಹೊಣೆ ಈ ಮಾಧ್ಯಮಗಳದ್ದಾಗಿದೆ; ಆದರೆ ಆಗುವುದು ಮಾತ್ರ ಬೇರೆಯೆ ! ಆದ್ದರಿಂದ ಮಾಧ್ಯಮಗಳನ್ನು ಕೂಡ ಅವಲಂಬಿಸಿರಲು ಸಾಧ್ಯ ವಿಲ್ಲ. ಜನರು ಪ್ರಜ್ಞಾವಂತರಾಗಿದ್ದಾರೆ. ಅವರಿಗೆ ಯೋಗ್ಯ-ಅಯೋಗ್ಯದ ಅರಿವು ಇದೆ. ಜನರೇ ಮುಂದಾಳತ್ವ ವಹಿಸಬೇಕು. ಅಪರಾಧಿಗಳ ಮಾನಸಿಕತೆಯನ್ನು ಬದಲಾಯಿಸುವುದು ಅಸಾಧ್ಯವಾಗಿದೆ. ಆದ್ದರಿಂದ ನಾಗರಿಕರೇ ಈಗ ಆರೋಪಿಗಳಿಗೆ ಕಠೋರವಾದ ಶಿಕ್ಷೆಯಾಗುವಂತೆ ಸರಕಾರವನ್ನು ಬೆಂಬೆತ್ತಬೇಕು. ಹಾಗೆ ಮಾಡಿದರೆ ಒಂದಲ್ಲ ಒಂದು ದಿನ ದೇಶ ಅಪರಾಧಮುಕ್ತ ವಾಗುವುದು ಖಚಿತ. ಇತರ ದೇಶಗಳ ಉದಾಹರಣೆಯಿಂದ ಪಾಠ ಕಲಿತು ಭಾರತ ಅಪರಾಧಮುಕ್ತ ಭಾರತವನ್ನು ನಿರ್ಮಾಣ ಮಾಡಿ ವಿಶ್ವಗುರುವಿನ ಪಟ್ಟಕ್ಕೆ ಏರಬೇಕು !