ಬೇರೆ ವ್ಯಕ್ತಿಯೊಬ್ಬ ಮೇಕಪ್ ಮಾಡಿಸಿ ನೇಪಾಳ ಗಡಿಯಿಂದ ಸೀಮಾ ಮತ್ತು ಅವಳ ಮಕ್ಕಳನ್ನು ಭಾರತಕ್ಕೆ ನುಗ್ಗಿಸಿದನು !

ಲಕ್ಷ್ಮಣಪುರಿ (ಉತ್ತರಪ್ರದೇಶ) – ಭಾರತಕ್ಕೆ ಬಂದಿರುವ ಪಾಕಿಸ್ತಾನಿ ಮಹಿಳೆ ಸೀಮಾ ಹೈದರಳನ್ನು ಉತ್ತರಪ್ರದೇಶ ಉಗ್ರ ನಿಗ್ರಹ ದಳದಿಂದ ವಿಚಾರಣೆ ನಡೆಯುತ್ತಿದೆ. ಹಾಗೆಯೇ ಗುಪ್ತಚರ ಇಲಾಖೆಯೂ ತನಿಖೆ ನಡೆಸುತ್ತಿದೆ. ಅವರ ತನಿಖೆಯಿಂದ ಸೀಮಾ ಹೈದರ್ ನೇಪಾಳದಿಂದ ಭಾರತವನ್ನು ತಲುಪಲು ಮೂರನೇ ವ್ಯಕ್ತಿ ಸಹಾಯ ಮಾಡಿರುವ ಮಾಹಿತಿ ಸಿಕ್ಕಿದೆ. ಈ ವ್ಯಕ್ತಿಯ ಸಹಾಯದಿಂದ ಅವಳು ಪೂರ್ಣ ಸಿದ್ಧತೆಯೊಂದಿಗೆ ಅಂತರರಾಷ್ಟ್ರೀಯ ಗಡಿಯನ್ನು ದಾಟಿದಳು. ಸೀಮಾ ಹೈದರ್ ಗ್ರಾಮೀಣ ಭಾರತದ ಮಹಿಳೆಯಂತೆ ಕಾಣುವಂತೆ ಅವಳಿಗೆ ಮೇಕಪ್ ಮಾಡಲಾಗಿತ್ತು. ಅದಕ್ಕಾಗಿ ವೃತ್ತಿಪರ ಮೇಕಪ್ ಮಾಡುವವನೊಬ್ಬನ ನೆರವು ಪಡೆದಿರುವುದಾಗಿ ವರದಿಯಾಗಿದೆ. ಭಾರತ-ನೇಪಾಳ ಗಡಿಯಲ್ಲಿ ಭದ್ರತಾ ಪಡೆಗಳ ಕಣ್ಣುತಪ್ಪಿಸಲು ಮಕ್ಕಳ ವೇಷಭೂಷಣಗಳನ್ನು ಕೂಡ ಬದಲಾಯಿಸಿದ್ದಳು. `ಮಕ್ಕಳೂ ಭಾರತೀಯರಂತೆಕಾಣಬೇಕು’, ಎಂದು ಜಾಗ್ರತೆ ವಹಿಸಿದ್ದಳು.
Seema Haider sought the help of professionals in the make-up, intelligence sources told India Today.#SeemaHaider (@aajtakjitendra) https://t.co/78rm5PjTVT
— IndiaToday (@IndiaToday) July 19, 2023
1. ಸೀಮಾ ಶುದ್ಧ ಹಿಂದಿ ಮಾತನಾಡುತ್ತಾಳೆ. ಇದರಿಂದ ಆಕೆಗೆ ನೇಪಾಳದಲ್ಲಿ ಪಾಕಿಸ್ತಾನಿ ವ್ಯಕ್ತಿಗಳೂ ತರಬೇತಿ ನೀಡಿದ್ದಾರೆ ಎಂಬ ಸಂಶಯ ವ್ಯಕ್ತವಾಗಿದೆ. ಪಾಕಿಸ್ತಾನಿ ವ್ಯಕ್ತಿ ನೇಪಾಳದಲ್ಲಿ ಮಹಿಳೆಯರಿಗೆ ತರಬೇತಿ ನೀಡಿ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸಲು ಭಾರತಕ್ಕೆ ಕಳುಹಿಸಿರುತ್ತಾರೆ.
2. ಸೀಮಾ ಮೇ 13 ರಂದು ಭಾರತ-ನೇಪಾಳ ಗಡಿಯನ್ನು ದಾಟಿರುವುದಾಗಿ ಹೇಳಿಕೊಂಡಿದ್ದಾಳೆ. ಭಾರತ-ನೇಪಾಳ ಗಡಿಯಲ್ಲಿರುವ ಸುನೊಲಿ ಸೆಕ್ಟರ ಮತ್ತು ಸೀತಾಮಡಿ ಸೆಕ್ಟರನಿಂದ ಸೀಮಾ ಭಾರತವನ್ನು ಪ್ರವೇಶಿಸಿರುವ ಬಗ್ಗೆ ಯಾವುದೇ ದಾಖಲೆಗಳು ಇನ್ನೂ ಕಂಡು ಬಂದಿಲ್ಲ. ಈ ಪ್ರದೇಶದಿಂದ ಮೂರನೇ ದೇಶದ ನಾಗರಿಕ ಗಡಿ ದಾಟಿರುವ ಯಾವುದೇ ದಾಖಲೆಯಿಲ್ಲ. ಹೀಗಾಗಿ ಇದೀಗ ತನಿಖಾ ಸಂಸ್ಥೆಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.
ನೈಸರ್ಗಿಕ ವಿಕೋಪದಿಂದ ೧ ಸಾವಿರ ಕೋಟಿ ರೂಪಾಯಿ ಹಾನಿ : Himachal Pradesh Natural Disasters
ಅಮೆರಿಕದಿಂದ ಭಾರತದ ಮೇಲೆ ಶೇ. ೧೦ ರಷ್ಟು ಹೆಚ್ಚುವರಿ ಆಮದು ಸುಂಕ : Import Duty on India
ಮೊಬೈಲ್ ಫೋನ್ ಪೋಷಕರ ಜಾಗವನ್ನು ಆಕ್ರಮಿಸಿಕೊಳ್ಳುತ್ತಿರುವುದು ಕಳವಳಕಾರಿ ! : Supreme Court on Mobile phone
ಸೋನಮ್ ವಾಂಗ್ಚುಕ್ ಅವರು ಉಪವಾಸ ಮುಕ್ತಾಯ !
ಶಿಕ್ಷಣ ಸಚಿವರ ಸ್ಥಳಾಂತರ: ಹೊಸ ಕಾನೂನು ಸಹ ರೂಪಿಸಲಾಗುವುದು! – ಪ್ರಧಾನಿ ನರೇಂದ್ರ ಮೋದಿ
ಖೋಪೋಲಿಯ ಶ್ರೀ ಭಗವಾನ ವೀರೇಶ್ವರ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ನಾಲ್ವರ ಬಂಧನ!