7 ಜನರಿಗೆ ಗಾಯ 8 ಮತಾಂಧ ಮುಸಲ್ಮಾನರ ಬಂಧನ
ಗಾಂಧಿನಗರ(ಗುಜರಾತ್) – ಇಲ್ಲಿಯ ಪಾಟಣನ ಬಾಲಿಸಾನಾ ಗ್ರಾಮದಲ್ಲಿ ಮುಸಲ್ಮಾನರಿಗೆ ಸಂಬಂಧಿತ ಆಕ್ಷೇಪಾರ್ಹ ಧಾರ್ಮಿಕ ಮಾಹಿತಿಯನ್ನು ಪ್ರಸಾರ ಮಾಡಿದ್ದರಿಂದ ನಡೆದ ಹಿಂಸಾಚಾರದಲ್ಲಿ 7 ಜನರು ಗಾಯಗೊಂಡಿದ್ದಾರೆ. ಅವರಿಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದ 12 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡು 8 ಮತಾಂಧ ಮುಸಲ್ಮಾನರನ್ನು ಮಸೀದಿಯ ಚೌಕ್ ಪರಿಸರದಿಂದ ಬಂಧಿಸಿದ್ದಾರೆ.ಈ ಮಾಹಿತಿ ಪ್ರಸಾರವಾದ ನಂತರ ಗ್ರಾಮದಲ್ಲಿ ಉದ್ವಿಗ್ನತೆ ಉಂಟಾಗಿತ್ತು. ಈ ಪ್ರಕರಣದ ವಿಚಾರವಾಗಿ ಮಸೀದಿಯ ಬಳಿ ಎರಡು ಗುಂಪುಗಳ ನಡುವೆ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ವಾಗ್ವಾದ ನಡೆದು ಹಿಂಸಾಚಾರ ನಡೆಯಿತು. ಇದರ ಮಾಹಿತಿ ಸಿಗುತ್ತಲೇ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಈ ಗ್ರಾಮದ ಒಂದು ಸಾಮಾಜಿಕ ಗುಂಪಿನಲ್ಲಿ ಈ ಮಾಹಿತಿಯನ್ನು ಪ್ರಸಾರ ಮಾಡಲಾಗಿತ್ತು. ಇದರಿಂದ ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿ ಉದ್ವಿಗ್ನತೆ ಉಂಟಾಯಿತು.
गुजरात में विवादित धार्मिक पोस्ट की वजह से 2 पक्षों के बीच हिंसा हुई है। इस हिंसा में घायल हुए करीब 7 लोगों को हॉस्पिटल में एडमिट करवाया गया है। #Gujarat https://t.co/IJbuHXxz7a
— India TV (@indiatvnews) July 17, 2023