ಏಕರೂಪ ನಾಗರಿಕ ಸಂಹಿತೆಯ ವಿರುದ್ಧ ಕಾನೂನು ಆಯೋಗಕ್ಕೆ ಸಂದೇಶ ಕಳುಹಿಸಲು ಮಸೀದಿಯ ಹೊರಗೆ `ಬಾರ ಕೋಡ್’ ಅಳವಡಿಕೆ !

ನವ ದೆಹಲಿ – ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ಕುರಿತು ಕೇಂದ್ರ ಸರಕಾರದ ಕಾನೂನು ಆಯೋಗದಿಂದ ಮಾಹಿತಿಯನ್ನು ಕೇಳಲಾಗಿತ್ತು. ಅದಕ್ಕೆ ಭಾರೀ ಪ್ರತಿಕ್ರಿಯೆ ಸಿಕ್ಕಿದೆ. 60 ಲಕ್ಷಕ್ಕಿಂತಲೂ ಹೆಚ್ಚಿನ ಜನರು ತಮ್ಮ ಅಭಿಪ್ರಾಯವನ್ನು ಕಳುಹಿಸಿದ್ದಾರೆ. ಈ ಕಾನೂನನ್ನು ಮುಸಲ್ಮಾನ ಸಂಘಟನೆಗಳು ವಿರೋಧಿಸುತ್ತಿವೆ. ಈ ಹಿನ್ನೆಲೆಯಲ್ಲಿ ಕೆಲವು ಸ್ಥಳಗಳಲ್ಲಿ ಮಸೀದಿಯ ಹೊರಗೆ ವಿಶೇಷ `ಬಾರ ಕೋಡ’ನ ಫಲಕವನ್ನು ಹಾಕಲಾಗಿದ್ದು, ಈ ಮೂಲಕ ಕಾನೂನು ಆಯೋಗಕ್ಕೆ ವಿರೋಧವನ್ನು ನೊಂದಾಯಿಸಲು ಕರೆ ನೀಡಿರುವುದು ಕಂಡು ಬರುತ್ತಿದೆ. ಉತ್ತರಪ್ರದೇಶದ ಬರೇಲಿ ಹಾಗೆಯೇ ಮುಂಬಯಿಯಂತಹ ನಗರಗಳಲ್ಲಿಯೂ ಇದು ಕಂಡು ಬಂದಿದೆ.

1. ಬರೇಲಿಯಲ್ಲಿ ಜಮಿಯತ ಉಲೆಮಾ-ಎ-ಹಿಂದ ಕಾರ್ಯಕರ್ತನು ಮಸೀದಿಯ ಹೊರಗೆ ಈ `ಬಾರ್ ಕೋಡ’ ಫಲಕ ಹಾಕಿದ್ದಾನೆ. ಮಸೀದಿಯಲ್ಲಿ ನಮಾಜ ಮಾಡಲು ಬರುವ ಮುಸಲ್ಮಾನರು `ಬಾರ್ ಕೋಡ’ ಮೊಬೈಲ್ ನಲ್ಲಿ ಸ್ಕ್ಯಾನ ಮಾಡಿ ನಿಷೇಧದ ಸಂದೇಶವನ್ನು ಕಳುಹಿಸುತ್ತಿದ್ದಾರೆ. ಇಲ್ಲಿಯ ಮುಸಲ್ಮಾನರು, ಏಕರೂಪ ನಾಗರಿಕ ಸಂಹಿತೆಯು ಶರಿಯತ ಕಾನೂನಿನ ವಿರುದ್ಧವಾಗಿದೆ. ಇದರಿಂದ ಮುಸಲ್ಮಾನರು ಅದನ್ನು ಸಹಿಸುವುದಿಲ್ಲ. ಸ್ವಾತಂತ್ರ್ಯದಿಂದಲೇ ಮುಸ್ಲಿಮರಿಗೆ ಕೆಲವು ಅಧಿಕಾರ ಸಿಕ್ಕಿದೆ. ನಾವು ಅದನ್ನು ಅನುಸರಿಸುತ್ತೇವೆ ಎಂದು ಹೇಳುತ್ತಿದ್ದಾರೆ.

2. ಮುಂಬಯಿಯ ಮಲಾಡ್ ನ ಪಠಾಣವಾಡಿಯಲ್ಲಿರುವ ನೂರಾನಿ ಮಸೀದಿಯ ಹೊರಗೆ ಬಾರ್ ಕೋಡ್ ಹಾಕಿ ಈ ಮೂಲಕ ನಿಷೇಧದ ಸಂದೇಶಗಳನ್ನು ಕಳುಹಿಸಲಾಗುತ್ತಿದೆ. ಇದರ ಮಾಹಿತಿ ಸಿಕ್ಕಿದ ನಂತರ ಸ್ಥಳೀಯ ಪೊಲೀಸರು ಮಸೀದಿಯ ವ್ಯವಸ್ಥಾಪಕರನ್ನು ವಿಚಾರಣೆಗೆ ಕರೆಸಿದ್ದರು. ಇಲ್ಲಿನ ಮಾಜಿ ನಗರಸೇವಕ ಅಹ್ಮದ್ ಜಮಾಲ್ ಮಾತನಾಡಿ, ಮುಸ್ಲಿಮರಿಗೆ ಏಕರೂಪ ನಾಗರಿಕ ಸಂಹಿತೆ ಒಪ್ಪಿಗೆಯಿಲ್ಲ ಎಂದು ಹೇಳಿದ್ದಾರೆ.

ಸಂಪಾದಕರ ನಿಲುವು

ಎಷ್ಟು ಹಿಂದೂಗಳು ಮತ್ತು ಅವರ ಸಂಘಟನೆಗಳು ಏಕರೂಪ ನಾಗರಿಕ ಸಂಹಿತೆಯನ್ನು ಬೆಂಬಲಿಸಲು ಇಂತಹ ಪ್ರಯತ್ನಗಳನ್ನು ಮಾಡುತ್ತಿವೆ ?