ಸಿಂಗಾಪುರ – ಇಲ್ಲಿಯ ಭಾರತೀಯ ಮೂಲದ ಹಿರಿಯ ಸಚಿವ ಥರಮನ ಷಣ್ಮುಗರತ್ನಂ ಇವರು ರಾಷ್ಟ್ರಪತಿ ಸ್ಥಾನಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸುವರು. ಈ ಚುನಾವಣೆಯಲ್ಲಿ ಸ್ಪರ್ಧಿಸಲು ಅವರು ಎಲ್ಲಾ ಅಧಿಕೃತ ಮತ್ತು ರಾಜಕೀಯ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ೬೬ ವರ್ಷದ ಥರಮನ ಷಣ್ಮುಗರತ್ನಂ ಇವರು ಸಿಂಗಾಪುರ ಸರಕಾರದಲ್ಲಿ ಸಾಮಾಜಿಕ ನೀತಿ ಸಮನ್ವಯಕ ಸಚಿವರಾಗಿದ್ದರು. ಥರಮನ ಇವರು ೨೦೦೧ ರಲ್ಲಿ ಸಂಸದ ಸದಸ್ಯರೇಂದು ರಾಜಕಾರಣಕ್ಕೆ ಪ್ರವೇಶ ಮಾಡಿದ್ದರು ಅವರು ಇಲ್ಲಿಯವರೆಗೆ ಉಪ ಪ್ರಧಾನಮಂತ್ರಿ ಹಾಗೂ ಶಿಕ್ಷಣ ಮತ್ತು ಹಣಕಾಸು ಸಚಿವ ಇದರ ಜೊತೆಗೆ ಅನೇಕ ಕ್ಯಾಬಿನೆಟ್ ಸಚಿವ ಸ್ಥಾನ ಅಲಂಕರಿಸಿದ್ದಾರೆ. ಸಿಂಗಾಪುರದ ಚಲನ ಪ್ರಾಧೀಕರಣದ ಅಧ್ಯಕ್ಷರೆಂದು ಕೂಡ ಅವರು ಕಾರ್ಯ ಮಾಡಿದ್ದಾರೆ. ಥರಮನ ಇವರು ಸಿಂಗಾಪುರದಲ್ಲಿ ಹುಟ್ಟಿದ್ದರು. ಅವರು ಒಂದು ಆಂಗ್ಲೋ ಚೀನಿ ಶಾಲೆಯಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ. ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್, ಕೇಂಬ್ರಿಜ್ ವಿದ್ಯಾಪೀಠ ಮತ್ತು ಹಾರ್ವರ್ಡ್ ವಿದ್ಯಾಪೀಠ ಇಂತಹ ವಿಶ್ವವಿಖ್ಯಾತ ಶೈಕ್ಷಣಿಕ ಸಂಸ್ಥೆಯಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ.
अब सिंगापुर पर भी होगा भारतीय का राज! भारतीय मूल के थरमन शनमुगरत्नम कर रहे हैं राष्ट्रपति चुनाव लड़ने की तैयारी
.
.#Singapore #singaporepresidentelection #tharmanshanmugaratnam @DBhaskarHindi #Adipurush #JawanTrailer #BabyTrailer #SalaarCeaseFire https://t.co/UXGsfVTH9x— Dainik Bhaskar Hindi (@DBhaskarHindi) July 8, 2023