‘೭೨ ಹೂರೇ’ ಚಲನಚಿತ್ರದ ಟ್ರೇಲರ್ (ಜಾಹೀರಾತು) ಅನುಮತಿ ಸಿಗದಿರುವುದು ವದಂತಿ ! – ಕೇಂದ್ರ ಚಲನಚಿತ್ರ ಪ್ರಮಾಣ ಪತ್ರ ಮಂಡಳಿ !

(72 ಹೂರೇ ಇದು ಇಸ್ಲಾಂನ ಪರಿಕಲ್ಪನೆಯಾಗಿದ್ದು ಅದಕ್ಕನುಸಾರ ಇಸ್ಲಾಂ ಅನ್ನು ಕಟ್ಟುನಿಟ್ಟಾಗಿ ಪಾಲಿಸುವವರು ಸ್ವರ್ಗಕ್ಕೆ ಹೋದ ನಂತರ ಅವರಿಗೆ 72 ಸುಂದರ ಯುವತಿಯರ ಸಹವಾಸ ಸಿಗುತ್ತದೆ)

ಮುಂಬಯಿ – ’72 ಹೂರೇ’ ಚಿತ್ರಕ್ಕೆ ಕೇಂದ್ರೀಯ ಚಲನಚಿತ್ರ ಪ್ರಮಾಣ ಪತ್ರ ಮಂಡಳಿಯು “ಕೇವಲ ವಯಸ್ಕರರಿಗೆ ಮಾತ್ರ” ಎಂದು ಪ್ರಮಾಣ ಪತ್ರ ನೀಡಿದೆ. ಆದರೆ ಅವರ ಟ್ರೇಲರ್ ಗೆ ಪ್ರಮಾಣ ಪತ್ರ ನೀಡಿಲ್ಲ, ಹೀಗೆ ವದಂತಿ ಪ್ರಸಾರವಾಗಿತ್ತು. ಆನಂತರ ಈಗ ಮಂಡಳಿಯು ಸ್ಪಷ್ಟೀಕರಣ ನೀಡುತ್ತಾ, “ಇದು ವದಂತಿ ಇದೆ. ಟ್ರೇಲರ್ ಗೆ ಪ್ರಮಾಣ ಪತ್ರನೀಡುವ ಪ್ರಕ್ರಿಯೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ನಿರ್ಮಾಪಕರಿಗೆ ದಾಖಲೆ ಪತ್ರಗಳನ್ನು ಸಲ್ಲಿಸುವಂತೆ ತಿಳಿಸಲಾಗಿತ್ತು. ಅದು ಬಂದ ನಂತರ ಅದರ ಪರಿಶೀಲನೆಯ ನಂತರ ಪ್ರಮಾಣ ಪತ್ರ ಕೊಡಲು ಬರುವುದು”. ವಿಶೇಷತೆ ಏನೆಂದರೆ ಪ್ರಮಾಣ ಪತ್ರ ಪಡೆಯದೆಯೇ ಈ ಚಿತ್ರದ ಟ್ರೈಲರ್ ಅನ್ನು ಪ್ರಸಾರಮಾಡಲಾಗಿದೆ.