೭೨ ಹೂರೇ’ ಚಲನಚಿತ್ರದ ಟ್ರೇಲರ್ ಅನುಮತಿ ಇಲ್ಲದೆ ಪ್ರದರ್ಶನ !

ಚಲನಚಿತ್ರಕ್ಕೆ ಪ್ರಮಾಣಪತ್ರ ನೀಡಲು ಕೇಂದ್ರ ಚಲನಚಿತ್ರ ಪ್ರಮಾಣಪತ್ರ ಮಂಡಳದಿಂದ ಟ್ರೆಲರ್ ಗೆ ಮಾತ್ರ ಅನುಮತಿ ನೀಡಲು ನಕಾರ !

( ೧. ೭೨ ಹೂರೇ ಇದು ಇಸ್ಲಾಮಿ ಪರಿಕಲ್ಪನೆ ಆಗಿದ್ದು ಅದಕ್ಕನುಸಾರ ಇಸ್ಲಾಂ ಅನ್ನು ಕಟ್ಟುನಿಟ್ಟಾಗಿ ಪಾಲಿಸುವವರು ಸ್ವರ್ಗಕ್ಕೆ ಹೋದ ನಂತರ ಅವರಿಗೆ ೭೨ ಸುಂದರ ಯುವತಿಯರ ಸಹವಾಸ ಲಭಿಸುತ್ತದೆ )

ಮುಂಬಯಿ – ಮತಾಂತರ, ಭಯೋತ್ಪಾದನೆ ಮತ್ತು ಮುಗ್ಧ ಜನರ ಬುದ್ಧಿ ಭ್ರಮಣೆ ಇವುಗಳ ಆಧಾರದಲ್ಲಿ ನಿರ್ಮಿಸಿರುವ ೭೨ ಹೂರೇ ಈ ಚಲನಚಿತ್ರದ ಜಾಹೀರಾತಿನ ವಿಡಿಯೋಗೆ (ಟ್ರೆಲರ್ ಗೆ) ಅನುಮತಿ ನೀಡಲು ಕೇಂದ್ರ ಚಲನಚಿತ್ರ ಪ್ರಮಾಣಪತ್ರ ಮಂಡಳಿ ನಿರಾಕರಿಸಿತು. ಚಲನಚಿತ್ರದ ನಿರ್ಮಾಪಕರು ಮಂಡಳಿಯ ಈ ನಿರ್ಣಯದ ವಿರುದ್ಧ ಮಾಹಿತಿ ಮತ್ತು ಪ್ರಸಾರಣ ಸಚಿವಾಲಯದ ಬಳಿ ಹೋಗುವ ಸಿದ್ಧತೆಯಲ್ಲಿದ್ದಾರೆ. ಈ ಚಲನಚಿತ್ರವನ್ನು ಜುಲೈ ೭ ರಂದು ಬಿಡುಗಡೆ ಮಾಡಲಾಗುವುದು. ಅನುಮತಿ ನಿರಾಕರಿಸಿದ ನಂತರ ಕೂಡ ಈ ಟ್ರೆಲರ್ ಅನ್ನು ಪ್ರಸಾರ ಮಾಡಲಾಗಿದೆ.

ರಾಷ್ಟ್ರೀಯ ಪುರಸ್ಕಾರ ವಿಜೇತ ಚಲನಚಿತ್ರ ಇರುವಾಗ ಟ್ರೆಲರಗೆ ವಿರೋಧ ಏಕೆ ? – ಸಹನಿರ್ಮಾಪಕ ಅಶೋಕ ಪಂಡಿತ

ಅಶೋಕ ಪಂಡಿತ್

ಚಲನಚಿತ್ರದ ಸಹನಿರ್ಮಾಪಕ ಅಶೋಕ ಪಂಡಿತ್ ಇವರು, ನಾವು ಚಲನಚಿತ್ರದಲ್ಲಿ ಒಂದು ಮೃತ ದೇಹದ ಕಾಲು ತೋರಿಸಿದ್ದೇವೆ. ಇದನ್ನು ಚಲನಚಿತ್ರ ಮಂಡಳಿ ತೆಗೆದು ಹಾಕಲು ಹೇಳಿದೆ. ಕುರಾನಿನ ಕುರಿತಾದ ಭಾಗ ತೆಗೆದುಹಾಕಲು ಹೇಳಿದೆ. ಇದು ರಾಷ್ಟ್ರೀಯ ಪುರಸ್ಕಾರ ಪಡೆದ ಚಲನಚಿತ್ರ ಆಗಿದೆ. ಚಲನಚಿತ್ರಕ್ಕೆ ಕೇಂದ್ರ ಚಲನ ಚಿತ್ರ ಪರೀಕ್ಷಣಾ ಮಂಡಳಿಯಿಂದ ಪ್ರಮಾಣ ಪತ್ರ ದೊರೆತಿದೆ. ಅದರಲ್ಲಿನ ದೃಶ್ಯಗಳೇ ಟ್ರೆಲರ್ ನಲ್ಲಿಯೂ ಇವೆ, ಆದ್ದರಿಂದ ಅದಕ್ಕೆ ಅನುಮತಿ ಹೇಗೆ ನಿರಾಕರಿಸಲು ಸಾಧ್ಯ ?ಎಂದು ಪ್ರಶ್ನಿಸಿದ್ದಾರೆ.
ಟ್ರೇಲರಗೆ ಸೆನ್ಸಾರ್ ಬೋರ್ಡ್ ಅನುಮತಿ ನಿರಾಕರಣೆಯ ನಿರ್ಣಯದ ಬಗ್ಗೆ ಮಾತನಾಡುವಾಗ ಅಶೋಕ ಪಂಡಿತರು, ಇದು ಬಹಳ ಗಂಭೀರ ವಿಷಯವಾಗಿದೆ. ರಾಷ್ಟ್ರೀಯ ಪುರಸ್ಕಾರ ದೊರೆತಿರುವ ಈ ಚಲನಚಿತ್ರಕ್ಕೆ ಅಂತರಾಷ್ಟ್ರೀಯ ಚಲನಚಿತ್ರ ಮಹೋತ್ಸವದಲ್ಲಿ ( ಇಪ್ಪಿಯಲ್ಲಿ ) ಇಂಡಿಯನ್ ಪನೋರಮ ವಿಭಾಗದ ಪುರಸ್ಕಾರ ಕೂಡ ದೊರೆತಿದೆ , ಹೀಗೆ ಇರುವಾಗ ಚಲನಚಿತ್ರದ ಟ್ರೇಲರ್ ಗೆ ಅನುಮತಿ ಏಕೆ ನಿರಾಕರಿಸಲಾಗಿದೆ ? ಕೇಂದ್ರ ಚಲನಚಿತ್ರ ಪರೀಕ್ಷಣಾ ಮಂಡಳಿಯಲ್ಲಿ ಅವ್ಯವಸ್ಥೆ ಇದೆ ಮತ್ತು ಅದಕ್ಕೆ ಪ್ರಸುನ ಸೋಶಿ ಜವಾಬ್ದಾರರಾಗಿದ್ದಾರೆ ಎಂದು ಹೇಳಿದ್ದಾರೆ.

ಟ್ರೆಲರ್ ನಲ್ಲಿ ಏನಿದೆ ?

೨ ನಿಮಿಷ ೩೧ ಸೆಕೆಂಡ್ ದ ಈ ಟ್ರೆಲರ್ ನಲ್ಲಿ ಮುಸಲ್ಮಾನರ ಬುದ್ಧಿ ಬ್ರಮಣೆ ಮಾಡಿ ಅವರನ್ನು ಹೇಗೆ ಉಗ್ರ ಭಯೋತ್ಪಾದಕರನ್ನಾಗಿ ಮಾಡಲಾಗುತ್ತದೆ ? ಎಂಬುದನ್ನು ತೋರಿಸಲಾಗಿದೆ. ಈ ಭಯೋತ್ಪಾದಕರು ನಿರಪರಾಧಿ ಜನರ ಹತ್ಯೆ ಮಾಡುತ್ತಿರುವುದು ತೋರಿಸಲಾಗಿದೆ. ಈ ಭಯೋತ್ಪಾದಕರಲ್ಲಿ ‘ಯಾರಾದರೊಬ್ಬ ವ್ಯಕ್ತಿ ಪ್ರಾಣ ತ್ಯಾಗ ಮಾಡಿದರೆ, ಆಗ ಅಲ್ಲಾಹನು ಅವನಿಗೆ ಜನ್ನತದಲ್ಲಿ (ಸ್ವರ್ಗದಲ್ಲಿ) ಆಶ್ರಯ ನೀಡುತ್ತಾನೆ ಎಂಬ ವಿಶ್ವಾಸ ಇರುತ್ತದೆ

ಈ ಟ್ರೇಲರ್ ನಲ್ಲಿ ಮುಂಬಯಿಯ ಗೇಟವೇ ಆಫ್ ಇಂಡಿಯಾದಲ್ಲಿ ನಡೆದಿರುವ ಬಾಂಬ್ ಸ್ಪೋಟ ತೋರಿಸಲಾಗಿದೆ, ಹಾಗೂ ಜಿಹಾದಿ ಭಯೋತ್ಪಾದಕರು ಜನರ ಬುದ್ಧಿ ಬ್ರಮಣೆಗೊಳಿಸಲು ಜಿಹಾದ್ ಪದ ಹೇಗೆ ಬಳಸುತ್ತಾರೆ ? ಇದನ್ನು ತೋರಿಸಲಾಗಿದೆ .

ಭಯೋತ್ಪಾದಕರಿಗೆ ಮೃತ್ಯುವಿನ ನಂತರ ಪ್ರತ್ಯಕ್ಷದಲ್ಲಿ ೭೨ ಹೂರೇ ದೊರೆಯುವುದಿಲ್ಲ ಎಂಬ ಚಿತ್ರಣ !

ಭಯೋತ್ಪಾದಕರು ಮಾರಣಾಂತಿಕ ಹಲ್ಲೆ ನಡೆಸಿ ಸ್ವತಃ ಕೂಡ ಸಾವನ್ನಪ್ಪುತ್ತಾರೆ. ಮೃತ್ಯುವಿನ ನಂತರ ಅವರಲ್ಲಿನ ಸಂಭಾಷಣೆ ಈ ಚಲನಚಿತ್ರದಲ್ಲಿ ತೋರಿಸಲಾಗಿದೆ. ಇದರಲ್ಲಿ ಯಾವ ಲಾಭದ ಆಮಿಷ ತೋರಿಸಿ ಅವನನ್ನು ಭಯೋತ್ಪಾದಕರನ್ನಾಗಿ ಮಾಡಿ ಮಾರಣಾಂತಿಕ ಹಲ್ಲೆ ಮಾಡಲು ಹೇಗೆ ಸಿದ್ಧಗೊಳಿಸಲಾಗುತ್ತದೆಯೋ ಆ ಲಾಭವು ಮೃತ್ಯುವಿನ ನಂತರ ಅವರಿಗೆ ದೊರೆಯುತ್ತಿಲ್ಲ ಎಂದು ತೋರಿಸಲಾಗಿದೆ. ಇದರಿಂದ ಅವರಿಗೆ ಮಿತಿಮೀರಿದ ಸಿಟ್ಟು ಬರುವುದು ಕಾಣುತ್ತದೆ , ಹಾಗೂ ತಾವು ಮೋಸ ಹೋದೆವು ಎಂದು ಅವರಿಗೆ ಅನಿಸುತ್ತಿದೆ ಎಂದು ಕೂಡ ತೋರಿಸಲಾಗಿದೆ.

ಸಂಪಾದಕೀಯ ನಿಲುವು

ಟ್ರೆಲರ್ ಎಂದರೆ ಚಲನಚಿತ್ರದ ಜಾಹೀರಾತು ಮಾಡುವ ವಿಡಿಯೋ ಇಸ್ಲಾಮಿನ ಪರಿಕಲ್ಪನೆಯ ಮೇಲಾಧಾರಿತ ಚಲನಚಿತ್ರದ ಜಾಹಿರಾತು ಮಾಡುವ ವಿಡಿಯೋಗೆ (ಟ್ರೆಲರ್ ಗೆ) ಅನುಮತಿ ನಿರಾಕರಿಸುವ ಕೇಂದ್ರ ಚಲನಚಿತ್ರ ಪರಿಶೀಲನಾ ಮಂಡಳಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಆದಿಪುರುಷ ಚಲನಚಿತ್ರಕ್ಕೆ ಸುಲಭವಾಗಿ ಅನುಮತಿ ನೀಡುತ್ತದೆ ಇದನ್ನು ತಿಳಿದುಕೊಳ್ಳಿ.