|
ಕರ್ನಾಲ್ (ಹರಿಯಾಣ) – ಇಲ್ಲಿಯ ನ್ಯಾಷನಲ್ ಡೈರಿ ರಿಸರ್ಚ್ ಇನ್ಸ್ಟಿಟ್ಯೂಟ್ ಹವಾಮಾನ ಪ್ರತಿರೋಧಕ ಪಶುಗಳ ಸಂಶೋಧನಾ ಕೇಂದ್ರದಲ್ಲಿ ಹಾಲು ನೀಡುವ ಪ್ರಾಣಿಗಳನ್ನು ಒತ್ತಡ ಮುಕ್ತ ಇಡುವುದಕ್ಕಾಗಿ ಒಂದು ಅದ್ಭುತ ಸಂಶೋಧನೆ ನಡೆದಿದೆ. ಕಳೆದ ೪ ವರ್ಷಗಳಿಂದ ಈ ಸಂಶೋಧನೆ ನಡೆಯುತ್ತಿದೆ. ಇದರ ಪ್ರಕಾರ ಈ ಪ್ರಾಣಿಗಳಿಗೆ ಸಂಗೀತ ಕೇಳಿಸಲಾಗುತ್ತದೆ. ‘ಯಾವ ರೀತಿ ಮನುಷ್ಯನಿಗೆ ಸಂಗೀತ ಇಷ್ಟ ಆಗುತ್ತದೆ ಮತ್ತು ಸಂಗೀತ ಕೇಳಿ ಒಳ್ಳೆಯದು ಅನಿಸುತ್ತದೆ, ಅದೇ ರೀತಿ ಮಧುರನಾದ ಅಥವಾ ಸಂಗೀತ ಪ್ರಾಣಿಗಳನ್ನು ಒತ್ತಡ ರಹಿತವಾಗಿ ಇಡುತ್ತದೆ’ ಎಂದು ಈ ಸಂಶೋಧನೆಯಿಂದ ಬೆಳಕಿಗೆ ಬಂದಿದೆ. ಸಂಗೀತದಿಂದ ಪ್ರಾಣಿಗಳ ಆರೋಗ್ಯ ಕೂಡ ಸುಧಾರಿಸುತ್ತದೆ, ಅದಲ್ಲದೆ ಅವುಗಳಲ್ಲಿ ಹಾಲು ನೀಡುವ ಕ್ಷಮತೆ ಕೂಡ ಹೆಚ್ಚುತ್ತದೆ, ಹೀಗೇ ಕೂಡ ಈ ಸಂಶೋಧನೆಯಿಂದ ಬೆಳಕಿಗೆ ಬಂದಿದೆ.
೧. ಹವಾಮಾನ ಪ್ರತಿರೋಧಕ ಪಶುಗಳ ಸಂಶೋಧನಾ ಕೇಂದ್ರದ ಹಿರಿಯ ಪ್ರಾಣಿಶಾಸ್ತ್ರಜ್ಞ ಡಾ. ಆಶುತೋಷ ಇವರು, ಹಸುಗಳಿಗೆ ಸ್ತೋತ್ರ ಮತ್ತು ಸಂಗೀತ ಹಿಡಿಸುತ್ತದೆ, ಎಂದು ಬಹಳ ವರ್ಷಗಳ ಹಿಂದೆ ಕೇಳಿದ್ದೆ. ಯಾವಾಗ ನಾವು ಈ ಪ್ರಯೋಗ ಮಾಡಿದೆವು, ಆಗ ಅದರ ಪರಿಣಾಮ ಬಹಳ ಒಳ್ಳೆಯದಾಗಿ ಬಂದಿದೆ. ಸಂಗೀತದಲ್ಲಿ ಹಸುವಿನ ಮೆದುಳಿನಲ್ಲಿ ಆಕ್ಸಿಟೋಸಿನ್ ಹಾರ್ಮೋನ್ ಸಕ್ರಿಯಗೊಳಿಸುತ್ತದೆ ಮತ್ತು ಹಸುವಿಗೆ ಹಾಲು ನೀಡಲು ಪ್ರಚೋದಿಸುತ್ತದೆ ಎಂದು ಹೇಳಿದರು.
೨. ಡಾ. ಆಶುತೋಷ ಇವರು, ಪ್ರಾಣಿಗಳನ್ನು ಒಂದೇ ಸ್ಥಳದಲ್ಲಿ ಕಟ್ಟಿ ಹಾಕುವುದರಿಂದ ಅವುಗಳಲ್ಲಿ ಒತ್ತಡ ನಿರ್ಮಾಣವಾಗುತ್ತದೆ ಮತ್ತು ಸರಿಯಾಗಿ ವರ್ತಿಸುವುದಿಲ್ಲ; ಆದರೆ ಅಲ್ಲಿ ನಾವು ಪ್ರಾಣಿಗಳಿಗೆ ಇಂತಹ ವಾತಾವರಣ ನೀಡುತ್ತೇವೆ ಎಂದರೆ ಅಲ್ಲಿ ಪ್ರಾಣಿಗಳ ಮೇಲೆ ಯಾವುದೇ ಒತ್ತಡ ಇರುವುದಿಲ್ಲ ಮತ್ತು ಅವುಗಳಿಗೆ ಒತ್ತಡರಹಿತ ಇರಿಸಲಾಗುತ್ತದೆ. ಸಂಶೋಧನೆಯಲ್ಲಿ ಸಂಗೀತ ಮತ್ತು ಭಜನೆ ಇದರ ಉಪಯೋಗ ಮಾಡಲಾಗಿತ್ತು ಅದರ ಒಳ್ಳೆಯ ಪರಿಣಾಮ ಬೆಳಕಿಗೆ ಬಂದಿದೆ. ಸಂಗೀತ ಕೇಳಿರುವ ಪ್ರಾಣಿಗಳ ಪರೀಕ್ಷೆ ಮಾಡಲಾಗಿತ್ತು ಮತ್ತು ಅದರಲ್ಲಿ, ಪ್ರಾಣಿಗಳು ಉರಿಬಿಸಿಲೀನಲ್ಲಿ ಕೂಡ ಶಾಂತವಾಗಿ ಇರುತ್ತವೆ. ಇದರಿಂದ ಅವುಗಳ ಹಾಲು ಉತ್ಪಾದನೆಯ ಮೇಲೆ ಕೂಡ ಪರಿಣಾಮವಾಗಿ ಅವುಗಳು ಮೊದಲಿಗಿಂತಲೂ ಹೆಚ್ಚು ಹಾಲು ನೀಡುತ್ತಿವೆ ಎಂಬುದು ಗಮನಕ್ಕೆ ಬಂದಿದೆ ಎಂದು ಹೇಳಿದರು.