ರೈಲು ನಿಲ್ದಾಣದಲ್ಲಿ ನಿಂತಿದ್ದ ಸರಕು ಸಾಗಣೆಯ ರೈಲಿಗೆ ಹಿಂದಿನಿಂದ ಬಂದ ಮತ್ತೊಂದು ಸರಕು ಸಾಗಣೆ ರೈಲು ಡಿಕ್ಕಿ !

ಬಾಂಕುರಾ (ಬಂಗಾಳ) – ಇಲ್ಲಿನ ಓಂಡಾ ರೈಲು ನಿಲ್ದಾಣದಲ್ಲಿ 2 ಸರಕು ಸಾಗಣೆ ರೈಲುಗಳು ಡಿಕ್ಕಿ ಹೊಡೆದು ರೈಲಿನ ಇಂಜಿನ್ ಸಹಿತ 12 ಬೋಗಿಗಳು ಹಳಿತಪ್ಪಿದವು. ಈ ಘಟನೆಯಲ್ಲಿ ಸರಕು ರೈಲಿನ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ಅಪಘಾತದಿಂದಾಗಿ ಈ ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತಗೊಂಡಿದೆ. ಮುಂಜಾನೆ 4 ಗಂಟೆಗೆ ಈ ಘಟನೆ ನಡೆದಿದೆ.
ಈ ರೈಲು ಹಳಿಯಲ್ಲಿ ಮೊದಲೇ ಸರಕು ಸಾಗಣೆ ರೈಲು ನಿಂತಿತ್ತು. ಈ ವೇಳೆ ಹಿಂದಿನಿಂದ ಬಂದ ಸರಕು ರೈಲು ನಿಂತಿದ್ದ ಸರಕು ರೈಲಿಗೆ ಹಿಂದಿನಿಂದ ಜೋರಾಗಿ ಡಿಕ್ಕಿ ಹೊಡೆದಿದೆ. ಕೋರಮಂಡಲ್ ಎಕ್ಸ್ ಪ್ರೆಸ್ ನ ಅಪಘಾತವೂ ಇದೇ ರೀತಿಯಲ್ಲಿ ನಡೆದಿತ್ತು. ಈ ಅಪಘಾತದಿಂದಾಗಿ ‘ಒಂದೇ ಹಳಿಯಲ್ಲಿ 2 ರೈಲುಗಳು ಬಂದಿದ್ದು ಹೇಗೆ?’ ಎಂಬ ಪ್ರಶ್ನೆ ಮತ್ತೆ ಎದ್ದಿದೆ. (ಸರಕಾರವು ಇದರ ಉತ್ತರ ಸಾರ್ವಜನಿಕರಿಗೆ ತಿಳಿಸುವುದು ಅಪೇಕ್ಷಿತವಿದೆ ! – ಸಂಪಾದಕರು)
Two goods trains collide near Onda station in #Bankura West Bengal#trainaccident pic.twitter.com/CmmjEOsAwl
— Kreately.in (@KreatelyMedia) June 25, 2023
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!