ಗೋರಖಪೂರದಲ್ಲಿರುವ ಸುಪ್ರಸಿದ್ಧ `ಗೀತಾ ಪ್ರೆಸ್’ಗೆ ಮ. ಗಾಂಧಿ ಶಾಂತಿ ಪ್ರಶಸ್ತಿ ಘೋಷಣೆ !

  • ಇಲ್ಲಿಯವರೆಗೆ ಗೀತಾಪ್ರೆಸ್ ನಿಂದ ಶ್ರೀಮದ್ ಭಗವದ್ಗೀತೆಯ 16 ಕೋಟಿ 21 ಲಕ್ಷ ಪ್ರತಿಗಳು ಪ್ರಕಾಶನ !

  • ಇಲ್ಲಿಯವರೆಗೆ ಗೀತಾಪ್ರೆಸ್ ನಿಂದ 14 ಭಾಷೆಗಳಲ್ಲಿ ಒಟ್ಟು 41 ಕೋಟಿ 70 ಲಕ್ಷ ಪುಸ್ತಕಗಳ ಪ್ರಕಾಶನ !

ಗೋರಖಪುರ (ಉತ್ತರಪ್ರದೇಶ) – ಕೇಂದ್ರ ಸಾಂಸ್ಕೃತಿಕ ಸಚಿವಾಲಯದಿಂದ `ಗೀತಾ ಪ್ರೆಸ್’ ಗೆ 2021 ರ ಮಹಾತ್ಮಾ ಗಾಂಧಿ ಶಾಂತಿ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ. ಇದನ್ನು ಜಗತ್ತಿನ ಮಹತ್ವದ ಪ್ರಶಸ್ತಿ ಎಂದು ತಿಳಿಯಲಾಗುತ್ತದೆ. ಮ. ಗಾಂಧಿಯವರ 125 ನೇ ಜಯಂತಿಯ ನಿಮಿತ್ತ ಭಾರತ ಸರಕಾರವು 1995 ರಿಂದ ಈ ಪ್ರಶಸ್ತಿಯನ್ನು ನೀಡಲು ಪ್ರಾರಂಭಿಸಲಾಗಿದೆ. 1 ಕೋಟಿ ರೂಪಾಯಿಗಳು, ಸನ್ಮಾನ ಪತ್ರ ಮತ್ತು ಉತ್ಕೃಷ್ಟ ಪಾರಂಪರಿಕ ಹಸ್ತಕಲೆಯ ಸ್ಮರಣಿಕೆ ಇದು ಪುರಸ್ಕಾರದ ಸ್ವರೂಪವಾಗಿವೆ. ಈ ಹಿಂದೆ ಇಸ್ರೋ, ರಾಮಕೃಷ್ಣ ಮಿಶನ, ಗ್ರಾಮೀನ ಬ್ಯಾಂಕ ಆಫ್ ಬಾಂಗ್ಲಾದೇಶ, ವಿವೇಕಾನಂದ ಕೇಂದ್ರ ಕನ್ಯಾಕುಮಾರಿ, ಅಕ್ಷಯ ಪತ್ರ, ಬೆಂಗಳೂರು; ಏಕಲ ಅಭಿಯಾನ ಟ್ರಸ್ಟ ಭಾರತ ಮತ್ತು ಸುಲಭ ಇಂಟರನ್ಯಾಶನಲ್. ನವದೆಹಲಿ ಈ ಸಂಸ್ಥೆಗಳಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಕೇಂದ್ರ ಸಾಂಸ್ಕೃತಿಕ ಸಚಿವಾಲಯ ಗೀತಾ ಪ್ರೆಸ್ ಗೆ ಪುರಸ್ಕಾರ ಘೋಷಿಸುವಾಗ, ಗೀತಾ ಪ್ರೆಸ್ ಸ್ಥಾಪನೆಗೆ 100 ವರ್ಷಗಳು ಪೂರ್ಣವಾಗಿರುವ ನಿಮಿತ್ತದಿಂದ ಪ್ರೆಸ್ ಗೆ ಮಹಾತ್ಮಾ ಗಾಂಧಿ ಶಾಂತಿ ಪ್ರಶಸ್ತಿ ನೀಡಿ ಗೌರವಿಸುವುದೆಂದರೆ ಪ್ರೆಸ್ ನ ಮಾಧ್ಯಮದಿಂದ ಅದರ ಮಾಲೀಕರು ಸಮಾಜಸೇವೆಯಲ್ಲಿ ಮಾಡಿರುವ ಕಾರ್ಯದ ಮನ್ನಣೆಯಾಗಿದೆ. ಗೀತಾ ಪ್ರೆಸ್ ನ ಅಮೂಲ್ಯ ಕೊಡುಗೆ ಅಂದರೆ ಮಾನವತೆಯ ಸಾಮೂಹಿಕ ಉತ್ಥಾನಕ್ಕಾಗಿ ಮಹತ್ವಪೂರ್ಣವಾಗಿದ್ದು, ಅದನ್ನು ನಿಜವಾದ ಅರ್ಥದಿಂದ ಗಾಂಧಿವಾದಿ ಜೀವನದ ಪ್ರತೀಕವಾಗಿದೆ.

ಗೀತಾಪ್ರೆಸ್ ನ ಧರ್ಮಗ್ರಂಥದ ವಿಷಯದ ಅಭೂತಪೂರ್ವ ಕೊಡುಗೆ !

ಗೀತಾ ಪ್ರೆಸ್ 1923 ರಲ್ಲಿ ಸ್ಥಾಪಿಸಲಾಯಿತು. ಗೀತಾ ಪ್ರೆಸ್ ಇದು ಜಗತ್ತಿನ ಅತ್ಯಂತ ದೊಡ್ಡ ಪ್ರಕಾಶನಗಳಲ್ಲಿ ಒಂದಾಗಿದೆ. ಗೀತಾಪ್ರೆಸ್ ಇಲ್ಲಿಯವರೆಗೆ ಶ್ರೀಮದ್ ಭಗವದ್ಗೀತೆಯ 16 ಕೋಟಿ 21 ಲಕ್ಷ ಪ್ರತಿಗಳನ್ನು ಪ್ರಕಾಶೀಸಲಾಗಿದೆ. ಗೀತಾ ಪ್ರೆಸ್ 14 ಭಾಷೆಗಳಲ್ಲಿ 41 ಕೋಟಿ 70 ಲಕ್ಷ ಪುಸ್ತಕಗಳನ್ನು ಪ್ರಕಾಶಿಸಿದೆ. ಹಣ ಗಳಿಸಲು ಸಂಸ್ಥೆ ಎಂದಿಗೂ ಜಾಹೀರಾತನ್ನು ಅವಲಂಬಿಸಿರಲಿಲ್ಲ. ಗೀತಾ ಪ್ರೆಸ್ ತನ್ನ ಇನ್ನಿತರ ಸಂಸ್ಥೆಗಳೊಂದಿಗೆ ಜೀವನದ ಉನ್ನತಿಗಾಗಿ ಮತ್ತು ಎಲ್ಲ ಕಲ್ಯಾಣಕ್ಕಾಗಿ ಕಾರ್ಯ ಮಾಡುತ್ತಿದೆ. ಭಾರತಾದ್ಯಂತ ಹಿಂದೂಗಳ ವರೆಗೆ ವೇದ, ಪುರಾಣ ಮತ್ತು ಉಪನಿಷತ್ ಗಳ ಜ್ಞಾನವನ್ನು ತಲುಪಿಸುತವಲ್ಲಿ ಗೀತಾ ಪ್ರೆಸ್ ಯೋಗದಾನ ಅಭೂತಪೂರ್ವವಾಗಿದೆ.

ಪ್ರಧಾನಮಂತ್ರಿಗಳಿಂದ ಶ್ಲಾಘನೆ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗೀತಾ ಪ್ರೆಸ್ ಗೆ ಪ್ರಶಸ್ತಿ ಸಿಕ್ಕಿರುವ ಬಗ್ಗೆ ಹೊಗಳಿದ್ದಾರೆ. ಅವರು ಮಾತನಾಡಿ, ಜನರಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿವರ್ತನೆಗೆ ಪ್ರೋತ್ಸಾಹ ನೀಡುವ ಮಾರ್ಗದಲ್ಲಿ ಗೀತಾ ಪ್ರೆಸ್ 100 ವರ್ಷಗಳ ಗಮನಾರ್ಹ ಕಾರ್ಯವನ್ನು ಮಾಡಿದೆ. ನಾನು ಗೋರಖಪೂರ ಗೀತಾ ಪ್ರೆಸ್ ಗೆ ಮ. ಗಾಂಧಿ ಶಾಂತಿ ಪ್ರಶಸ್ತಿ ಲಭಿಸಿದಕ್ಕಾಗಿ ಅಭಿನಂದಿಸುತ್ತೇನೆ ಎಂದು ಹೇಳಿದರು.

ಸಾವರಕರ ಮತ್ತು ಗೋಡ್ಸೆ ಇವರಿಗೆ ಪ್ರಶಸ್ತಿ ನೀಡಿದಂತಹ ನಿರ್ಣಯವಂತೆ ! – ಕಾಂಗ್ರೆಸ್ ನ ಟೀಕೆ

ಇತರೆ ಧರ್ಮದವರ ಧರ್ಮಗ್ರಂಥವನ್ನು ಪ್ರಕಾಶಿಸುವ ಸಂಸ್ಥೆಗಳಿಗೆ ಮ. ಗಾಂಧಿ ಪ್ರಶಸ್ತಿ ನೀಡುತ್ತಿದ್ದರೆ, ಕಾಂಗ್ರೆಸ್ ದೀಪಾವಳಿಯನ್ನೇ ಆಚರಿಸುತ್ತಿತ್ತು; ಆದರೆ ಹಿಂದೂಗಳ ಧರ್ಮಗ್ರಂಥಗಳ ಪ್ರಸಾರ ಮಾಡುವ ಮುದ್ರಣಾಲಯಕ್ಕೆ ಪ್ರಶಸ್ತಿ ಸಿಕ್ಕಿರುವುದರಿಂದ ಅದನ್ನು ವಿರೋಧಿಸಲಾಗುತ್ತಿದೆಯೆಂದು ತಿಳಿದುಕೊಳ್ಳಬೇಕಾಗಿದೆ !

ಗೀತಾ ಪ್ರೆಸ್ ಗೆ ಘೋಷಿಸಿರುವ ಪ್ರಶಸ್ತಿಯ ಕುರಿತು ಕಾಂಗ್ರೆಸ್ ನ ಮುಖಂಡ ಜಯರಾಮ ರಮೇಶ ಇವರು ಟೀಕಿಸಿದ್ದಾರೆ. ಅವರು ಟ್ವೀಟ್ ಮಾಡಿ ಅಕ್ಷಯ ಮುಕುಲ ಇವರು 2015 ರಲ್ಲಿ ಪ್ರೆಸ್ ವಿಷಯದಲ್ಲಿ ಒಂದು ಜೀವನ ಚರಿತ್ಯ್ರೆಯನ್ನು ಬರೆದಿದ್ದಾರೆ. ಅದರಲ್ಲಿ ಅವರು ಈ ಪ್ರೆಸ್ ಮತ್ತು ಮ. ಗಾಂಧಿಯವರ ನಡುವೆ ಇದ್ದ ಏರಿಳಿತದ ಸಂಬಂಧ, ರಾಜಕೀಯ, ಧಾರ್ಮಿಕ ಮತ್ತು ಸಾಮಾಜಿಕ ನಡುವಳಿಕೆಗಳಿಂದ ನಡೆದಿರುವ ಹೋರಾಟದ ಮಾಹಿತಿಯನ್ನು ನೀಡಿದ್ದಾರೆ. ಕೇಂದ್ರ ಸರಕಾರದ ಪ್ರಶಸ್ತಿಯ ನಿರ್ಣಯ ಒಂದು ಅಪಹಾಸ್ಯವಾಗಿದ್ದು, ಇದು ಸಾವರಕರ ಮತ್ತು ಗೋಡ್ಸೆ ಇವರಿಗೆ ಪ್ರಶಸ್ತಿ ನೀಡಿದಂತಿದೆ ಎಂದು ಹೇಳಿದ್ದಾರೆ.