ಆಷ್ಟೀ (ಬೀಡ್ ಜಿಲ್ಲೆ)ಯಲ್ಲಿ ಔರಂಗಜೇಬ್ ನ ‘ಸ್ಟೇಟಸ್’ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದ ಮತಾಂಧರ ವಿರುದ್ಧ ದೂರು ದಾಖಲು !

ಹಿಂದುತ್ವನಿಷ್ಟ ಸಂಘಟನೆಗಳಿಂದ ಬಂದ್ ಪಾಲನೆ

ಆಷ್ಟಿ (ಬೀಡ ಜಿಲ್ಲೆ) – ಜೈದ ಅಯ್ಯುದ ಸಯ್ಯದನು ಔರಂಗಜೇಬನ ಸ್ಟೇಟಸ್ ಇಟ್ಟಿದ್ದರಿಂದ ನಗರದ ಆಝಾದನಗರದಲ್ಲಿ ಜೂನ 8 ರಂದು ರಾತ್ರಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ರಾತ್ರಿ ವಿಳಂಬವಾಗಿ ಅವನ ಮೇಲೆ ದೂರನ್ನು ದಾಖಲಿಸಲಾಯಿತು. ಈ ಘಟನೆಯಿಂದ ಹಿಂದುತ್ವನಿಷ್ಠ ಸಂಘಟನೆಗಳು ಜೂನ 9ರಂದು ಬಂದ್ ಆಚರಿಸಿದೆ. ‘ಔರಂಗಜೇಬನನ್ನು ಉದ್ದೇಶಿಸಿ `ಬಾಪ ತೊ ಬಾಪ ರಹೇಗಾ’ ಎಂದು ಅರ್ಥಬರುವ ವಾಕ್ಯವನ್ನು ಬರೆದು ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸಿ 2 ಸಮಾಜದ ನಡುವೆ ದ್ವೇಷ ನಿರ್ಮಾಣವಾಗುವಂತಹ ಕೃತ್ಯವನ್ನು ಮಾಡಿದ’ ಎಂದು ಶುಭಂ ಲೋಖಂಡೆಯವರು ನೀಡಿದ ದೂರನ್ನು ಆಷ್ಟಿ ಪೊಲೀಸ ಠಾಣೆಯಲ್ಲಿ ದಾಖಲಿಸಲಾಗಿತ್ತು. ತದನಂತರ ಜೈದ ಅಯ್ಯುದ ಸಯ್ಯದನ ವಿರುದ್ಧ ಆಷ್ಟಿ ಪೊಲೀಸರಲ್ಲಿ ದೂರು ದಾಖಲಿಸಲಾಗಿದೆ. ನಡೆದಿರುವ ಪ್ರಕರಣದ ಬಳಿಕ ಪೊಲೀಸರು ಶಾಂತಿ ಕಾಪಾಡುವಂತೆ ಕರೆ ನೀಡಿದ್ದಾರೆ. ಹಾಗೆಯೇ ಯಾವುದೇ ಗಾಳಿಸುದ್ದಿಯ ಮೇಲೆ ವಿಶ್ವಾಸವನ್ನು ಇಡಬಾರದೆಂದು ಸಹ ಸರಕಾರ ಕರೆ ನೀಡಿದೆ.