ನಾಗಪುರ – ಒಂದು ಕಾಲದಲ್ಲಿ ಸ್ಪೇನನಿಂದ ಮಂಗೋಲಿಯಾದವರೆಗೆ ಸಂಪೂರ್ಣ ಜಗತ್ತಿಗೆ ಇಸ್ಲಾಂ ಆಡಳಿತದ ದಾಳಿಯ ಭಯವಿತ್ತು; ಆದರೆ ನಿಧಾನವಾಗಿ ಜನರು ಜಾಗೃತವಾದರು. ಅವರು ಯುದ್ಧ ನಡೆಸಿ ಆಕ್ರಮಣಕಾರರನ್ನು ಸೋಲಿಸಿದರು ಇದರಿಂದ ಇಸ್ಲಾಂ ಅವರ ಮೂಲಸ್ಥಾನದವರೆಗೆ ಸೀಮಿತವಾಗಿ ಉಳಿಯಿತು. ಆಕ್ರಮಣಕಾರರು ಹೊರಟು ಹೋದರು. ಈಗ ಭಾರತದಲ್ಲಿ ಇಸ್ಲಾಂ ಎಲ್ಲಕ್ಕಿಂತ ಸುರಕ್ಷಿತವಾಗಿದೆ, ಎಂದು ಪ.ಪೂ. ಸರಸಂಘಚಾಲಕರಾದ ಡಾ. ಮೋಹನ ಭಾಗವತ ಇವರು ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಅಲ್ಲಿಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
संघ शिक्षा वर्ग, तृतीय वर्ष (सामान्य) 2023 समापन समारोह ,नागपुर महानगर https://t.co/FUKUH8hT86
— RSS (@RSSorg) June 1, 2023
ಪ.ಪೂ. ಸರಸಂಘಚಾಲಕರು ಮಾತು ಮುಂದುವರಿಸುತ್ತಾ,
೧. ಹೊರಗಿನ ಜನರ (ಮುಸಲ್ಮಾನರ) ಸಂಬಂಧ ಮರೆತು ಈ ದೇಶದಲ್ಲಿ ವಾಸಿಸಿ. ಈಗಲು ಯಾವ ಜನರು ಹೊರಗಿನ ಜನರ ಪ್ರಭಾವಕ್ಕೆ ಒಳಗಾಗುತ್ತಾರೆ, ಅವರು ಕೂಡ ಹೊರಗಿನವರಾಗದೆ ನಮ್ಮವರೇ ಆಗಿದ್ದಾರೆ, ಎಂದು ತಿಳಿದು ಅವರ ಜೊತೆ ನಾವು ಒಳ್ಳೆಯ ರೀತಿಯಲ್ಲಿ ವರ್ತಿಸಬೇಕು. ಯಾರ ಯೋಚನೆಯಲ್ಲಿ ಕೊರತೆ ಇದೆ ಅವರಿಗೆ ಪ್ರಬೋಧನೆ ನೀಡುವುದು ನಮ್ಮ ಜವಾಬ್ದಾರಿಯಾಗಿದೆ.
೨. ನಮ್ಮ ಅಹಂಕಾರ ಮತ್ತು ಭೂತಕಾಲದ ಭಾರ ನಾವು ಹೊರುತ್ತಿರುವುದರಿಂದ ನಾವು ಒಟ್ಟಾಗಿ ಸೇರಲು ಭಯವಾಗುತ್ತದೆ.
೩. ‘ನಮ್ಮ ಪ್ರಾರ್ಥನೆಯ ಪದ್ಧತಿಗಳು ಬೇರೆಯಾಗಿದ್ದರೂ, ನಾವು ಇದೇ ದೇಶದವರಾಗಿದ್ದೇವೆ ಮತ್ತು ನಮ್ಮ ಪೂರ್ವಜರು ಕೂಡ ಭಾರತೀಯರೇ ಆಗಿದ್ದರು’. ಈ ಸತ್ಯವನ್ನು ನಾವು ಸ್ವೀಕರಿಸುವುದು ಅವಶ್ಯಕವಾಗಿದೆ.
೪. ಭಾರತದಲ್ಲಿ ಪ್ರಜಾಪ್ರಭುತ್ವ ಇರುವುದರಿಂದ ರಾಜಕೀಯ ಮತ ಭೇದ ಇದ್ದೇ ಇರುತ್ತದೆ. ಅಧಿಕಾರಕ್ಕಾಗಿ ಸ್ಪರ್ಧೆ ಮತ್ತು ಪರಸ್ಪರರನ್ನು ಟೀಕಿಸುವುದು ನಡೆಯುತ್ತಲೇ ಇರುತ್ತದೆ. ಆದರೆ ಅಧಿಕಾರ ಪ್ರಾಪ್ತಿಗಾಗಿ ಟೀಕಿಸುವಾಗ ಜನರಲ್ಲಿ ವಿವಾದ ನಿರ್ಮಾಣ ಆಗಬಾರದು, ರಾಜಕೀಯ ಪಕ್ಷಗಳಿಗೆ ಇದರ ವಿವೇಕ ಇರಬೇಕು.
ಸಂಪಾದಕರ ನಿಲುವು‘ಇಸ್ಲಾಂ ಖತರೆ ಮೆ ಹೆ’, ಎಂದು ಕೂಗಾಡುವ ಮತಾಂಧ ಮುಸಲ್ಮಾನ ಮುಖಂಡರು ಹಾಗೂ ‘ಭಾರತದಲ್ಲಿ ಮುಸಲ್ಮಾನರು ಅಸುರಕ್ಷಿತ ಜೀವನ ನಡೆಸುತ್ತಿದ್ದಾರೆ’, ಎಂದು ಹುರುಳಿಲ್ಲದ ಹೇಳಿಕೆ ನೀಡುವವರಿಗೆ ಇದರ ಬಗ್ಗೆ ಕೇಳಲೇಬೇಕು ! |