ಕಳ್ಳತನದ ಆರೋಪ ಹೊರಿಸಿ ಸುಮ್ಮನಿರುವಂತೆ ಬೆದರಿಕೆ !
ಚಂಡಿಗಡ (ಹರಿಯಾಣಾ) – ಇಲ್ಲಿಯ `ಮಾಡರ್ನ ಸ್ಕೂಲ’ ಹೆಸರಿನ ಒಂದು ಸರಕಾರಿ ಶಾಲೆಯ ಏಳನೇಯ ತರಗತಿಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಅವಳದೇ ಶಾಲೆಯ ಕೆಲವು ವಿದ್ಯಾರ್ಥಿಗಳು ಅನೇಕ ಬಾರಿ ಬಲಾತ್ಕಾರ ಮಾಡಿರುವ ಆಘಾತಕಾರಿ ಘಟನೆ ಬಹಿರಂಗವಾಗಿದೆ. ಶಾಲೆಯಲ್ಲಿ ಹಾಗೆಯೇ ಶಾಲೆಯ ಹೊರಗೆ ಈ ಹೀನಕೃತ್ಯ ನಡೆದಿದೆಯೆಂದು ಪೊಲೀಸರು ಮಾಹಿತಿಯನ್ನು ನೀಡಿದ್ದಾರೆ. ಈ ಘಟನೆ ಮೇ 18 ರಂದು ಬಹಿರಂಗವಾಯಿತು. ಪೊಲೀಸರು ಈ ಪ್ರಕರಣದಲ್ಲಿ ದೂರನ್ನು ದಾಖಲಿಸಿದ್ದು, ಆರೋಪಿಗಳಿಗೆ ಬಾಲಸುಧಾರಣಾ ಕೇಂದ್ರಕ್ಕೆ ಕಳುಹಿಸಿದ್ದಾರೆ.
All five accused, comprising her classmate and four students of Class 9 of government model school, sent to juvenile home
(@nikhilsharmaht reports)https://t.co/oo8sbZUnoa
— Hindustan Times (@htTweets) May 23, 2023
13 ವರ್ಷದ ಸಂತ್ರಸ್ತ ವಿದ್ಯಾರ್ಥಿನಿಯ ಮೇಲೆ ಮೊದಲು ಅವಳದೇ ವರ್ಗದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಯು ಬಲಾತ್ಕಾರ ಮಾಡಿದನು. ಆ ಸಮಯದಲ್ಲಿ ವಿದ್ಯಾರ್ಥಿಯು ಸಂತ್ರಸ್ತ ವಿದ್ಯಾರ್ಥಿನಿಯ ಮೇಲೆ ಕಳ್ಳತನದ ಆರೋಪವನ್ನು ಹೊರಿಸಿ ಅವಳನ್ನು ಸುಮ್ಮನಿರುವಂತೆ ಹೇಳಿದನು. ತದನಂತರ ಈಯತ್ತೆ 9ನೇ ತರಗತಿಯಲ್ಲಿ ಕಲಿಯುತ್ತಿರುವ 4 ವಿದ್ಯಾರ್ಥಿಗಳು ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಅವಳ ಮೇಲೆ ಬಲಾತ್ಕಾರ ಮಾಡಿದರು. ಈ ಘಟನೆಯ ವಿಷಯದಲ್ಲಿ ಮೊದಲು ಶಾಲೆಯ ಒಬ್ಬ ಶಿಕ್ಷಕಿಗೆ ಮಾಹಿತಿ ಸಿಕ್ಕಿತು. ಅವಳು ಪ್ರಾಚಾರ್ಯರಿಗೆ ಈ ವಿಷಯವನ್ನು ಹೇಳಿದ ಬಳಿಕ ಪೊಲೀಸರಿಗೆ, ಹಾಗೆಯೇ ಸಂತ್ರಸ್ತ ಕುಟುಂಬದವರಿಗೆ ಸೂಚನೆ ನೀಡಲಾಯಿತು ಐವರೂ ಆರೋಪಿಗಳನ್ನು ಬಾಲಸುಧಾರಣಾ ಕೇಂದ್ರಕ್ಕೆ ಕಳುಹಿಸಲಾಗಿದ್ದು, ಸಂತ್ರಸ್ತಳಿಗೆ ಸಮಾಲೋಚನೆಯನ್ನು(ಕೌನ್ಸಿಲಿಂಗ) ನಡೆಸಲಾಗುತ್ತಿದೆ.
ಸಂಪಾದಕರ ನಿಲುವು
|