ಗೌಹಾಟಿ – ಆಸ್ಸಾಂ ರಾಜ್ಯದ ಕೊಕರಾಝಾರ ಜಿಲ್ಲೆಯ ಡೋಟಮಾ ಪ್ರದೇಶದಲ್ಲಿ ಚಲಿಸುತ್ತಿರುವ ವಾಹನದಲ್ಲಿ ಓರ್ವ 13 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿರುವ ಘಟನೆ ಬಹಿರಂಗವಾಗಿದೆ. ರೂಬೆಲ್ ರೆಹಮಾನ, ಇಮ್ರಾನ್ ಹುಸೇನ, ಅನ್ವರ ಹುಸೇನ ಮತ್ತು ಮೊಮಿನೂರ ರಹಮಾನ ಹೀಗೆ ಬಲಾತ್ಕಾರ ಮಾಡಿರುವವರ ಹೆಸರಾಗಿದೆ. ಪೊಲೀಸರು ಗಸ್ತು ಮಾಡುತ್ತಿರುವಾಗ ಅವರಿಗೆ ವಾಹನದ ಬಗ್ಗೆ ಸಂದೇಹ ಬಂದಿತು. ಅವರು ವಾಹನವನ್ನು ನಿಲ್ಲಿಸಿದಾಗ ಈ ಪ್ರಕರಣ ಬೆಳಕಿಗೆ ಬಂತು.
ಅ. 13 ರಂದು ಮಧ್ಯಾಹ್ನ ಡೊಟಮಾ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರ ವಾಹನ ಗಸ್ತು ಹಾಕುತ್ತಿರುವ ಸಮಯದಲ್ಲಿ ಒಂದು ಸಂದೇಹಾಸ್ಪದ ವಾಹನದ ಮೇಲೆ ಪೊಲೀಸರ ದೃಷ್ಟಿ ಬಿದ್ದಿತು. ಪೊಲೀಸರು ಈ ವಾಹನವನ್ನು ನಿಲ್ಲಿಸಿ ವಾಹನದಲ್ಲಿರುವ ಜನರ ವಿಚಾರಣೆ ಮಾಡಿದರು.
2. ಆಸಮಯದಲ್ಲಿ ವಾಹನದಲ್ಲಿ ಅಪ್ರಾಪ್ತ ಬಾಲಕಿ ಮತ್ತು 4 ಯುವಕರು ಕಂಡು ಬಂದರು. ಆ ಸಮಯದಲ್ಲಿ ಪೊಲೀಸರು ಇವರೆಲ್ಲರನ್ನು ಹತ್ತಿರದ ಪೊಲೀಸ ಠಾಣೆಗೆ ಕರೆದೊಯ್ದರು. ಬಾಲಕಿಯ ವಿಚಾರಣೆ ನಡೆಸಿದಾಗ ಅವಳು ವಾಹನದಲ್ಲಿ ಅವಳ ಮೇಲೆ ಬಲಾತ್ಕಾರ ಮಾಡಿದ್ದಾರೆಂದು ಹೇಳಿದಳು..
3. ಬಲಾತ್ಕಾರಿಗಳು 19 ರಿಂದ 24 ವರ್ಷದ ವಯಸ್ಸಿನವರಾಗಿದ್ದು, ಧುಬರಿಯ ನಿವಾಸಿಗಳಾಗಿದ್ದಾರೆ. ಇವರಲ್ಲಿ ರುಬೇಲನಿಗೆ ಸಂತ್ರಸ್ತ ಬಾಲಕಿಯೊಂದಿಗೆ ಸಾಮಾಜಿಕ ಮಾಧ್ಯಮದ ಮೂಲಕ ಪರಿಚಯವಾಗಿದ್ದು, ಬಳಿಕ ಅವರು ಸ್ನೇಹಿತರಾಗಿದ್ದರು. ರೂಬೆಲ ಪೀಡಿತ ಬಾಲಕಿಯನ್ನು ಭೇಟಿಯಾಗಲು ತನ್ನ 3 ಮಿತ್ರರೊಂದಿಗೆ ಕೊಕರಾಝಾರನ ಡೊಟಮಾಕ್ಕೆ ಬಂದಿದ್ದನು. ಬಾಲಕಿ ಒಬ್ಬಳೇ ಇರುವುದನ್ನು ನೋಡಿ ಅವರು ಬಾಲಕಿಯ ಮೇಲೆ ವಾಹನದಲ್ಲಿಯೇ ಬಲಾತ್ಕಾರ ಮಾಡಿದರು.
A 13-year-old girl was gang-raped in a moving car in #Assam’s Kokrajhar district, police said, adding that they have arrested four accused in connection with the incident
(@tilak2010 reportss)https://t.co/HZz3DByWWt
— Hindustan Times (@htTweets) May 18, 2023
ಸಂಪಾದಕರ ನಿಲುವುಇಂತಹ ಕಾಮುಕರನ್ನು ನಡುರಸ್ತೆಯಲ್ಲಿ ಗಲ್ಲು ಶಿಕ್ಷೆ ವಿಧಿಸುವಂತೆ ಕೋರಿದರೆ ಆಶ್ಚರ್ಯ ಪಡಬಾರದು ! |