ಕಮ್ಯುನಿಸ್ಟರು ನನ್ನ ಜೀವನದ 20 ವರ್ಷಗಳನ್ನು ನಷ್ಟಗೊಳಿಸಿದರು ! – ನಟ ಪೀಯೂಷ ಮಿಶ್ರಾ

ತಂದೆ-ತಾಯಿಗಳು ಕೆಟ್ಟವರು, ಹಣ ಗಳಿಸುವುದು ಪಾಪವಾಗಿದೆ ಎಂದು ಕಮ್ಯುನಿಸ್ಟರು ಹೇಳುತ್ತಿದ್ದರು ! – ಮಿಶ್ರಾ ಇವರ ದಾವೆ

ನಟ ಪೀಯೂಷ ಮಿಶ್ರಾ

ನವದೆಹಲಿ – ಚಲನಚಿತ್ರ ನಟ ಪೀಯೂಷ ಮಿಶ್ರಾ ಇವರು ಒಂದು ಜಾಲತಾಣದಲ್ಲಿ ನೀಡಿದ ಸಂದರ್ಶನದಲ್ಲಿ, ಕಮ್ಯುನಿಸ್ಟರಿಂದಾಗಿ ಅವರ ಜೀವನದ 20 ವರ್ಷಗಳು ನಷ್ಟವಾಗಿದೆಯೆಂದು ಒಪ್ಪಿಕೊಂಡಿದ್ದು, ‘`ಕಾಮ್ರೆಡ (ಕಮ್ಯುನಿಸ್ಟ ಕಾರ್ಯಕರ್ತ) ಆಗಿ ನನ್ನ ಜೀವನ ನಾಶವಾಯಿತು. ಬಹಳ ಪ್ರಯತ್ನದ ಬಳಿಕ ನಾನು ಕಮ್ಯುನಿಸ್ಟಗಳ ಕಪಿಮುಷ್ಟಿಯಿಂದ ಹೊರಬಿದ್ದೆನು’’ಎಂದು ಹೇಳಿದರು.

ನಟ ಪೀಯೂಷ ಮಿಶ್ರಾ ಮಾತನ್ನು ಮುಂದುವರಿಸುತ್ತಾ,

1. ಕಮ್ಯನಿಸ್ಟರು, ಕುಟುಂಬವೆನ್ನುವುದು ಅಸಹ್ಯಕರ ವಿಷಯವಾಗಿದೆ, ತಂದೆ-ತಾಯಿಗಳು ಕೆಟ್ಟವರು, ನಿಮಗೆ ಸಮಾಜಕ್ಕಾಗಿ ಕೆಲಸ ಮಾಡಬೇಕಾಗಿದೆ. ನಾನು `ಇವೆಲ್ಲವೂ ಸಮಾಜದ ಒಂದು ಭಾಗವಾಗಿದೆಯಲ್ಲವೇ?’ ಎಂದು ಕೇಳುತ್ತಿದ್ದೆನು. ಅದಕ್ಕೆ ಅವರು `ಇಲ್ಲ ಸಮಾಜದ ಭಾಗ ಬೇರೆ ಇರುತ್ತದೆ’ ಎಂದು ಹೇಳುತ್ತಿದ್ದರು.

2. ಕಮ್ಯುನಿಸ್ಟರು ನನ್ನಿಂದ 20 ವರ್ಷಗಳ ವರೆಗೆ ಕೆಲಸವನ್ನು ಮಾಡಿಸಿಕೊಂಡರು. `ಹಣ ಗಳಿಸುವುದು ಪಾಪವಾಗಿದೆ. ಯಾರು ಹಣವನ್ನು ಗಳಿಸುತ್ತಾರೆಯೋ ಅವರು ಶ್ರೀಮಂತರು ಮತ್ತು ಬಂಡವಾಳದಾರರು ಆಗುತ್ತಾರೆ. ಆದ್ದರಿಂದ ಎಂದಿಗೂ ಹಣವನ್ನು ಗಳಿಸಬೇಡ’, ಎಂದು ಅವರು ನನಗೆ ಹೇಳುತ್ತಿದ್ದರು. ಅದಕ್ಕೆ ನಾನು `ಆಯಿತು’ ಎಂದು ಹೇಳಿದೆನು. ಅವರಿಂದಾಗಿ ನಾನು ಎಲ್ಲವನ್ನೂ ಬಿಟ್ಟೆನು. ನನ್ನ ತಂದೆ-ತಾಯಿ, ಹೆಂಡತಿ ಎಲ್ಲರನ್ನೂ ಬಿಟ್ಟೆನು.

3. ಯಾವಾಗ `ನಾನು ಒಬ್ಬ ಕೆಟ್ಟ ತಂದೆಯಾಗಿದ್ದೇನೆ, ಕೆಟ್ಟ ಪುತ್ರನಾಗಿದ್ದೇನೆ. ಎಂದು ನನ್ನ ಗಮನಕ್ಕೆ ಬಂದಿತೋ, ಆಗ ನಾನು ಕೆಟ್ಟ ತಂದೆಯಾಗುವುದಿಲ್ಲ ಎಂದು ನಿರ್ಧರಿಸಿದೆನು, ನಾನು ತಪ್ಪು ಮಾಡುತ್ತಿದ್ದೇನೆ ಎಂದು ನನಗೆ ಅರಿವಾಯಿತು. ಕಮ್ಯುನಿಸ್ಟರು ನನ್ನಿಂದ ಎಲ್ಲವನ್ನೂ ಕಸಿದುಕೊಂಡರು.

4. ಕಮ್ಯುನಿಸ್ಟರಲ್ಲಿ ಒಬ್ಬ ಮುಖಂಡನಿರುತ್ತಾರೆ ಮತ್ತು ಇತರೆ ಕೆಳಮಟ್ಟದ ಕಾರ್ಯಕರ್ತರು ಇರುತ್ತಾರೆ. ಈ ಮುಖಂಡನು ಕೆಳಮಟ್ಟದ ಕಾರ್ಯಕರ್ತರಿಂದ ಅತ್ಯಂತ ಕೆಟ್ಟ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿರುತ್ತಾನೆ. ಕೆಳಮಟ್ಟದ ಕಾರ್ಯಕರ್ತರು ಈಗ ಏನು ತಿನ್ನಬೇಕು? ಏನು ಕುಡಿಯಬೇಕು? ಎಂದು ಮುಖಂಡನನ್ನು ಕೇಳಿ ಕೇಳಿ ಮಾಡುತ್ತಿರುತ್ತಾರೆ.

5. ಕಮ್ಯುನಿಸ್ಟರೊಂದಿಗೆ ಕಾರ್ಯ ಮಾಡಿ ನನ್ನ ಶಾರೀರಿಕ ಸ್ಥಿತಿ ಹಾಳಾಯಿತು. ನನ್ನ ಮಾನಸಿಕ ಸ್ಥಿತಿಯೂ ಕೆಟ್ಟಿತು. ಭಾವನೆಯ ಸ್ಥರದಲ್ಲಿ ನಾನು ವಿಕಲಾಂಗನಾಗಿದ್ದೆನು. ತದನಂತರ ನಾನು ಅವರನ್ನು ಬಿಟ್ಟೆನು ಮತ್ತು ಒಳ್ಳೆಯ ತಂದೆಯಾಗಲು ಚಲನಚಿತ್ರಗಳಲ್ಲಿ ಕೆಲಸ ಮಾಡಲು ನಿರ್ಧರಿಸಿದೆನು. ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಕಮ್ಯುನಿಸ್ಟ ವಿಚಾರಸರಣಿ ಜಗತ್ತಿಗೆ ಬಂದು 100 ವರ್ಷಗಳಾಗಿವೆ ಮತ್ತು ಜಗತ್ತಿನಿಂದ ಈಗ ಅದರ ಅಸ್ತಿತ್ವ ನಿಧಾನವಾಗಿ ನಷ್ಟಗೊಳ್ಳುತ್ತಿದೆ. `ಹೀಗೇಕೆ ಆಗಿದೆ?’ ಎನ್ನುವುದು ಮಿಶ್ರಾರ ಹೇಳಿಕೆಯಿಂದ ಗಮನಕ್ಕೆ ಬರುತ್ತದೆ ! ದೇವರನ್ನು ನಂಬದವರ ಗತಿ ಹೀಗೆಯೇ ಆಗುತ್ತದೆ ಎನ್ನುವುದು ಮತ್ತೊಮ್ಮೆ ಸಿದ್ಧವಾಯಿತು.