ಬಜರಂಗ ದಳವನ್ನು ನಿರ್ಬಂಧಿಸುವಂತೆ ಕೋರುವ ಕಾಂಗ್ರೆಸ್ಸಿನ ವಿರುದ್ಧ 100 ಕೋಟಿಯ ಮಾನಹಾನಿ ಮೊಕದ್ದಮೆ ! – ಶ್ರೀ. ವಿನೋದ ಬಂಸಲ, ರಾಷ್ಟ್ರೀಯ ವಕ್ತಾರರು, ವಿಶ್ವ ಹಿಂದೂ ಪರಿಷತ್ತು

ವಿಶೇಷ ಸಂವಾದ : `ಬಜರಂಗ ದಳವನ್ನು ನಿರ್ಬಂಧಿಸುವುದರ ಹಿಂದೆ `ಪಿ.ಎಫ್.ಐ’ ಸಂಘಟನೆಯನ್ನು ರಕ್ಷಿಸುವ ಕಾಂಗ್ರೆಸ್ಸಿನ ಷಡ್ಯಂತ್ರ ?

ಶ್ರೀ ವಿನೋದ ಬಂಸಲ

`ಬಜರಂಗ ದಳ’ವನ್ನು `ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ (ಪಿ.ಎಫ್.ಆಯ್)ನೊಂದಿಗೆ ತುಲನೆ ಮಾಡಿ ನಿರ್ಬಂಧಿಸಲು ಕರ್ನಾಟಕ ಕಾಂಗ್ರೆಸ್ ತನ್ನ ಚುನಾವಣೆ ಪ್ರಣಾಳಿಕೆಯಲ್ಲಿ ಪ್ರಕಟಿಸಿದೆ. ಇದರಿಂದ ಬಜರಂಗ ದಳದ ಮಾನಹಾನಿಯಾಗಿದೆ; ಹಾಗಾಗಿ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ತಿನ ಚಂಡೀಗಡ ವಿಭಾಗವು ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಕಾನೂನುರೀತ್ಯಾ ನೊಟೀಸು ಕಳುಹಿಸಿ ಕಾಂಗ್ರೆಸ್ ಪಕ್ಷದ ವಿರುದ್ಧ 100 ಕೋಟಿ 10 ಲಕ್ಷ ರೂಪಾಯಿಗಳ ಮಾನಹಾನಿ ಮೊಕದ್ದಮೆಯನ್ನು ದಾಖಲಿಸಲಾಗಿದೆಯೆಂದು `ವಿಶ್ವ ಹಿಂದೂ ಪರಿಷತ್ತು’ ರಾಷ್ಟ್ರೀಯ ವಕ್ತಾರರಾದ ಶ್ರೀ ವಿನೋದ ಬಂಸಲ ಇವರು ಮಾಹಿತಿ ನೀಡಿದ್ದಾರೆ. ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ `ಬಜರಂಗ ದಳದ ಮೇಲಿನ ನಿರ್ಬಂಧದ ಹಿಂದೆ `ಐ’ ಸಂಘಟನೆಯನ್ನು ರಕ್ಷಿಸುವ ಕಾಂಗ್ರೆಸ್ಸಿನ ಷಡ್ಯಂತ್ರ ?’ ಈ ವಿಷಯದ ಮೇಲೆ ನಡೆದ ಆನ್ ಲೈನ್ ವಿಶೇಷ ಸಂವಾದದಲ್ಲಿ ಅವರು ಮಾತನಾಡುತ್ತಿದ್ದರು.

ಶ್ರೀ. ಬಂಸಲ ತಮ್ಮ ಮಾತನ್ನು ಮುಂದುವರಿಸಿ, ಭಯೋತ್ಪಾದಕರನ್ನು ರಕ್ಷಿಸಲು ಹಿಂದೂಗಳನ್ನು ಕಳಂಕಿತಗೊಳಿಸುವ ಪ್ರಯತ್ನವನ್ನು ಕಾಂಗ್ರೆಸ್ ನಿರಂತರವಾಗಿ ಮಾಡುತ್ತ ಬಂದಿದೆ. ಬಜರಂಗ ದಳ ತನ್ನ ರಾಷ್ಟ್ರಕಾರ್ಯವನ್ನು ನಿರಂತರವಾಗಿ ಮುಂದುವರಿಸಿದೆ. ಕೊರೊನಾ ಕಾಲದಲ್ಲಿ, ವಿವಿಧ ನೈಸರ್ಗಿಕ ವಿಪತ್ತಿನ ಸಮಯದಲ್ಲಿ ಬಜರಂಗ ದಳವು ಸೇವಾ ಕಾರ್ಯವನ್ನು ಮಾಡಿದೆ. ಬಜರಂಗ ದಳದ ಮೇಲೆ ದೋಷಾರೋಪ ಮಾಡಿ ಜಿಹಾದಿ ಸಂಘಟನೆಯಾಗಿರುವ ಪಿ.ಎಫ್. ಆಯ್. ಅನ್ನು ರಕ್ಷಿಸಲು ಒಂದು ವೇಳೆ ಕಾಂಗ್ರೆಸ್ ಪ್ರಯತ್ನಿಸುತ್ತಿದ್ದರೆ, ಅದು ಎಂದಿಗೂ ಸಫಲವಾಗುವುದಿಲ್ಲ. ಭಾರತದ ಜನತೆ ಮತ್ತು ಬಜರಂಗಬಲಿಯ ಭಕ್ತರು ಕಾಂಗ್ರೆಸ್ಸಿಗೆ ತಕ್ಕ ಪಾಠವನ್ನು ಕಲಿಸದೇ ಬಿಡುವುದಿಲ್ಲ ಎಂದು ಹೇಳಿದರು.

ಕರ್ನಾಟಕದ ಉಚ್ಚ ನ್ಯಾಯಾಲಯದ ನ್ಯಾಯವಾದಿ ಶುಭಾ ನಾಯಿಕ ಮಾತನಾಡುತ್ತಾ, ಬಜರಂಗ ದಳವನ್ನು ನಿರ್ಬಂಧಿಸುವ ಕೋರಿಕೆ ಕರ್ನಾಟಕ ಕಾಂಗ್ರೆಸ್ ಮಾಡಿದ್ದರೂ, ಯಾವುದೇ ರಾಜ್ಯ ಸರಕಾರಕ್ಕೆ ನಿರ್ದಿಷ್ಟ ಸಂಘಟನೆಯನ್ನು ನಿರ್ಬಂಧಿಸಲು ಕಾನೂನಿನಲ್ಲಿ ಅಧಿಕಾರವಿರುವುದಿಲ್ಲ. ಪಿ.ಎಫ್. ಐ ಅನ್ನೂ ನಾವು ನಿರ್ಬಂಧಿಸುವೆವು ಎಂದು ಕರ್ನಾಟಕ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿದೆ. ಪಿ.ಎಫ್. ಐ ಸಂಘಟನೆಯನ್ನು ಈ ಮೊದಲೇ ಕೇಂದ್ರ ಸರಕಾರವು ನಿಷೇಧಿಸಿರುವಾಗ ಕರ್ನಾಟಕ ಕಾಂಗ್ರೆಸ್ ಅದರ ಮೇಲೆ ಮತ್ತಿನ್ಯಾವ ಬೇರೆ ನಿರ್ಬಂಧವನ್ನು ಹೇರಲಿದೆ ?’ ಕಾಂಗ್ರೆಸ್ ಮುಸಲ್ಮಾನ ಮತಪೆಟ್ಟಿಗೆಯ ರಾಜಕಾರಣಕ್ಕಾಗಿ ಇದೆಲ್ಲವನ್ನು ಮಾಡುತ್ತಿದೆ. ಎಂದು ಹೇಳಿದರು.

ಶ್ರೀ. ನರೇಂದ್ರ ಸುರ್ವೆ

`ಹಿಂದೂ ಜನಜಾಗೃತಿ ಸಮಿತಿ’ಯ ವಕ್ತಾರ ಶ್ರೀ. ನರೇಂದ್ರ ಸುರ್ವೆ ಮಾತನಾಡಿ ಬಜರಂಗ ದಳ ಮತ್ತು ಪಿ.ಎಫ್.ಐ ಸಂಘಟನೆಗಳ ತುಲನೆ ಮಾಡಲು ಸಾಧ್ಯವೇ ಇಲ್ಲ; ಕಾರಣ ಬಜರಂಗ ದಳ ರಾಷ್ಟ್ರಭಕ್ತ ಸಂಘಟನೆಯಾಗಿದೆ, ಆದರೆ ಪಿ.ಎಫ್.ಐ ಒಂದು ರಾಷ್ಟ್ರವಿರೋಧಿ ಮತ್ತು ಭಯೋತ್ಪಾದಕ ಸಂಘಟನೆಯಾಗಿದೆ. ಹಿಂದೂ ಸಂಘಟನೆಗಳನ್ನು ಅಪಕೀರ್ತಿಗೊಳಿಸುವುದು ಕಾಂಗ್ರೆಸ್ಸಿನ ಇತಿಹಾಸವಾಗಿದೆ. ಕೇವಲ ಬಜರಂಗ ದಳವಷ್ಟೇ ಅಲ್ಲ, ಈ ಹಿಂದೆಯೂ ರಾಷ್ಟ್ರೀಯ ಸ್ವಯಂಸೇವಕ ಸಂಘ, ಸನಾತನ ಸಂಸ್ಥೆ, ಹಿಂದೂ ಜನಜಾಗೃತಿ ಸಮಿತಿ ಮುಂತಾದ ಅನೇಕ ಹಿಂದೂ ಸಂಘಟನೆಗಳ ಮೇಲೆ ಕಾಂಗ್ರೆಸ ನಿರ್ಬಂಧಿಸಲು ಪ್ರಯತ್ನಿಸಿದೆ; ಆದರೆ ಜಿಹಾದಿ ಸಂಘಟನೆಗಳ ಮೇಲೆ ನಿರ್ಬಂಧ ಹೇರಬೇಕು ಎಂದು ಏನೂ ಮಾಡಿಲ್ಲ. ಹಿಂದೂ ಸಮಾಜ ಈಗ ಜಾಗೃತಗೊಂಡಿದ್ದು, ಎಲ್ಲ ಹಿಂದೂ ಸಂಘಟನೆಗಳೊಂದಿಗೆ ಜೊತೆಗೂಡಿ ನಿಲ್ಲಲಿದೆ.