ಮುಂಬಯಿ – ಒಳ್ಳೆಯ ಸಿನಿಮಾ ಮಾಡಿದಾಗ ಇಡೀ ಕುಟುಂಬ ಸಮೇತ ಸಿನಿಮಾ ನೋಡುತ್ತದೆ. ಮಹಿಳೆಯ ದೇಹವು ತುಂಬಾ ಅಮೂಲ್ಯವಾಗಿದೆ. ಆದ್ದರಿಂದ ಅವರ ದೇಹವನ್ನು ಹೆಚ್ಚು ಮುಚ್ಚಿದ್ದರೇ ಅಷ್ಟು ಉತ್ತಮವಾಗಿರುತ್ತದೆ. ಈಗಿನ ಹುಡುಗರು ಹುಡುಗಿಯರನ್ನು ನೋಡುವ ರೀತಿ ಅವರ ತಂಗಿ, ಹೆಂಡತಿ, ತಾಯಂದಿರಿಗೆ ಸರಿಯಿಲ್ಲ ಎಂದು ನಟ ಸಲ್ಮಾನ್ ಖಾನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
https://t.co/QhCU8qN1SP
ಮಹಿಳೆಯರ ದೇಹ ಅಮೂಲ್ಯವಾದದ್ದು, ಅವರು ಅವಮಾನಿಸಲ್ಪಡಬಾರದು ಎಂದ ಸಲ್ಮಾನ್ ಖಾನ್! #SalmanKhan #actor #bollywood #actors #kannada— News18 Kannada (@News18Kannada) April 30, 2023
‘ಕಿಸಿ ಕಾ ಭಾಯಿ ಕಿಸಿ ಕೀ ಜಾನ’ ಈ ಸಿನೆಮಾದ ಚಿತ್ರೀಕರಣದ ಸಮಯದಲ್ಲಿ ‘ಮಹಿಳೆಯರು ಸೇಟ್ ನಲ್ಲಿ ‘ನೆಕ್ ಲೈನ್’ (ಅಗಲ ಕತ್ತಿರುವ) ಡ್ರೆಸಗಳನ್ನು ತೊಡಬಾರದು ಎಂದು ಸಲ್ಮಾನ ಖಾನರವರು ನಿಯಮ ಹಾಕಿದ್ದರು’, ಎಂದು ನಟಿ ಪಲಕ ತಿವಾರಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸಲ್ಮಾನ ಖಾನರವರು ಮಾತನಾಡುತ್ತಿದ್ದರು.
ಓಟಿಟಿಯಲ್ಲಿರುವ ಅಶ್ಲೀಲತೆ, ನಗ್ನತೆ ಹಾಗೂ ಅವಾಚ್ಯಪದಗಳೆಲ್ಲವು ನಿಲ್ಲಬೇಕು ! – ಸಲ್ಮಾನ ಖಾನ
‘ಓಟಿಟಿ’ ಯಲ್ಲಿ ತೋರಿಸಲಾಗುವ ದೃಶ್ಯಗಳ ಬಗ್ಗೆ ಅವರು ಮಾತನಾಡುತ್ತಾ, ‘ಓಟಿಟಿಯಲ್ಲಿ (ಓವರ್ ದಿ ಟಾಪ್’) ಸೆನ್ಸಾರ್ಶಿಪ್ (ನಿರ್ಬಂಧ) ಇರಬೇಕು. ಅಶ್ಲೀಲತೆ, ನಗ್ನತೆ ಹಾಗೂ ಅವಾಚ್ಯಪದಗಳೆಲ್ಲವೂ ನಿಲ್ಲಬೇಕು. ಈಗ ಎಲ್ಲವೂ ಮೊಬೈಲ್ ನಲ್ಲಿ ಲಬ್ಯವಿದೆ. ೧೫ ಅಥವಾ ೧೬ ವರ್ಷದ ಹುಡುಗರು ಅದನ್ನು ನೋಡಿದರೆ ನಾವು ಅರ್ಥಮಾಡಿಕೊಳ್ಳಬಹುದು; ಆದರೆ ನಿಮ್ಮ ಕಲಿಯುತ್ತಿರುವ ಮಗಳು ಅದನ್ನು ನೋಡಿದರೆ ಹೇಗೆ ಅನಿಸುತ್ತದೆ ? ಆದ್ದರಿಂದ ‘ಓಟಿಟಿ’ಯಲ್ಲಿ ಕಂಟೆಂಟ್ (ವಿಷಯ) ಸ್ವಚ್ಛವಾಗಿರುವಷ್ಟು ಒಳ್ಳೆಯದು.’ ಎಂದು ಹೇಳಿದರು.
ಸಂಪಾದಕೀಯ ನಿಲುವುಹೆಚ್ಚಿನ ಸಿನೆಮಾಗಳಲ್ಲಿ ನಟಿಯರನ್ನು ತುಂಡು ಬಟ್ಟೆಯಲ್ಲಿ ಹಾಗೂ ಅಶ್ಲೀಲ ನೃತ್ಯ ಮಾಡುವುದನ್ನು ತೋರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸಲ್ಮಾನ ಖಾನರು ನೀಡಿರುವ ಹೇಳಿಕೆಯು ಯೋಗ್ಯವೇ ಆಗಿದೆ ! ಚಿತ್ರರಂಗದಲ್ಲಿನ ಈ ಅಶ್ಲೀಲತೆಯನ್ನು ಸಲ್ಮಾನ ಖಾನರಂತಹ ಕಲಾವಿದರು ತಡೆಯಬೇಕೆಂದು ಜನರು ಅಪೇಕ್ಷಿಸುತ್ತಾರೆ ! ಸಲ್ಮಾನ ಖಾನರವರು ಸಾಮಾನ್ಯ ಜನರ ಮನಸ್ಸಿನಲ್ಲಿರುವ ಮಾತನ್ನು ಹೇಳಿದರು. ಈ ಅಶ್ಲೀಲತೆಯನ್ನು ತಡೆಯಲು ಸಲ್ಮಾನ್ ಖಾನರಂತಹ ಹೆಸರಾಂತ ಕಲಾವಿದರು ನೇತೃತ್ವ ವಹಿಸಬೇಕು ! |