ಕಾನ್ಪುರ (ಉತ್ತರಪ್ರದೇಶ) – ಇಲ್ಲಿ ಈದ್ ನ ದಿನದಂದು ರಸ್ತೆಯ ಮೇಲೆ ನಮಾಜು ಪಠಣ ಮಾಡಿದ್ದರಿಂದ ಪೊಲೀಸರು ೧೭೦೦ ಜನರ ಮೇಲೆ ೩ ಪೊಲೀಸ್ ಠಾಣೆಗಳಲ್ಲಿ ಅಪರಾಧವನ್ನು ದಾಖಲಿಸಿದ್ದಾರೆ. ಪೊಲೀಸರು ತಡೆದ ನಂತರವೂ ಏಪ್ರಿಲ್ ೨೨ರಂದು ಜಾಜಮವು, ಬಬೂಪುರವ ಮತ್ತು ಬೆನಾಜಾಬರ ಈದಗಾಹನ ಎದುರಿಗೆ (ನಮಾಜು ಪಠಣ ಮಾಡಲು ಇರುವ ಜಾಗ) ರಸ್ತೆಯ ಮೇಲೆ ನಮಾಜು ಪಠಣ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಸಿಸಿಟಿವಿ ಚಿತ್ರಣದ ಆಧಾರದಲ್ಲಿ ರಸ್ತೆಯ ಮೇಲೆ ನಮಾಜು ಪಠಣ ಮಾಡಿದವರನ್ನು ಗುರುತಿಸಲಾಗುತ್ತಿದೆ. ಬೇಗಂಪುರವಾ ಪೊಲೀಸ್ ಚೌಕಿಯ ಪ್ರಭಾರಿಯಾದ (ಸ್ವಲ್ಪ ಸಮಯಕ್ಕಾಗಿ ಪ್ರಮುಖ ಪದವಿಯನ್ನು ಭೂಷಿಸುವವರು) ಬ್ರಿಜೇಷ ಕುಮಾರರವರು `ಈದ್ ನ ಮೊದಲು ಶಾಂತತಾ ಕಮಿಟಿಯ ಸಭೆ ನಡೆದಿತ್ತು. ಆ ಪರಿಸರದಲ್ಲಿನ ಜನರು ರಸ್ತೆಯ ಮೇಲೆ ನಮಾಜು ಪಠಣ ಮಾಡಲಾಗುವುದಿಲ್ಲ ಎಂದು ಹೇಳಿದ್ದರು. ಈದ್ ನ ನಮಾಜನ್ನು ಕೇವಲ ಈದಗಾಹ ಮತ್ತು ಮಸೀದಿಯಲ್ಲಿ ಮಾತ್ರ ಮಾಡಬೇಕು. ಜಂಗುಳಿಯಿಂದಾಗಿ ಯಾರದ್ದಾದರೂ ನಮಾಜು ಮಾಡುವುದು ಉಳಿದಿದ್ದಲ್ಲಿ ಅವರಿಗೆ ಪುನಃ ನಮಾಜು ಪಠಣ ಮಾಡಲು ಪೊಲೀಸರಿಂದ ವ್ಯವಸ್ಥೆ ಮಾಡಲಾಗುವುದು. ಪ್ರತ್ಯಕ್ಷದಲ್ಲಿ ಏಪ್ರಿಲ್ ೨೨ರ ಬೆಳಿಗ್ಗೆ ೮ ಗಂಟೆಗೆ ೮ ಗಂಟೆಗೆ ನಮಾಜು ಪಠಣ ಮಾಡುವ ಮೊದಲು ಒಮ್ಮೆಲೇ ಸಾವಿರಾರು ಜನ ಈದಗಾಹನ ಎದುರು ಸೇರಿದರು. ತಡೆದ ನಂತರವೂ ಅವರು ರಸ್ತೆಯ ಮೇಲೆ ಚಾಪೆ ಹಸಿ ನಮಾಜು ಮಾಡತೊಡಗಿದರು. ಪೊಲೀಸರು ಅವರನ್ನು ತಡೆಯಲು ಪ್ರಯತ್ನಿಸಿದರೂ ಯಾರೂ ಕೇಳಲಿಲ್ಲ, ಎಂದು ಹೇಳಿದರು. (ಪೊಲೀಸರು ಹೇಳಿದರೂ ಕೇಳದಿರುವ ಮುಸಲ್ಮಾನರು ಕಾನೂನುದ್ರೋಹಿಗಳಾಗಿದ್ದಾರೆ ! ಇಂತಹವರ ವಿರುದ್ಧ ತಥಾಕಥಿತ ಕಾನೂನುಪ್ರೇಮಿ ರಾಜಕೀಯ ಪಕ್ಷಗಳು ಬಾಯಿ ತೆರೆಯುವುದಿಲ್ಲ, ಎಂಬುದನ್ನು ಗಮನದಲ್ಲಿಡಿ ! – ಸಂಪಾದಕರು )
उत्तरप्रदेश: यूपी में ईद पर सड़कों पर नमाज अदा करने पर केस दर्ज
.
.#UttarPradesh #EidAlFitr2023 #Namaz #PonniyinSelvan2 #FilmfareAwards #AliaBhatt #KejriwalKaMahal #Jawan #Amazon https://t.co/sIB4gNUZ25— Dainik Bhaskar Hindi (@DBhaskarHindi) April 28, 2023