ತೃಣಮೂಲ ಕಾಂಗ್ರೆಸ್ಸಿನ ಇನ್ನೋರ್ವ ಶಾಸಕನ ಬಂಧನ !

ಬಂಗಾಲದಲ್ಲಿನ ೫೦೦ ಕೋಟಿ ರೂಪಾಯಿಗಳ ಶಿಕ್ಷಕರ ನೇಮಕಾತಿ ಹಗರಣ

ತೃಣಮೂಲ ಕಾಂಗ್ರೆಸ್ಸಿನ ಶಾಸಕ ಜೀವನ ಕೃಷ್ಣ ಸಾಹಾ

ಕೋಲಕಾತಾ (ಬಂಗಾಲ) – ಬಂಗಾಲದಲ್ಲಿನ ೫೦೦ ಕೋಟಿ ರೂಪಾಯಿ ಶಿಕ್ಷಕ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳವು ತೃಣಮೂಲ ಕಾಂಗ್ರೆಸ್ಸಿನ ಶಾಸಕ ಜೀವನ ಕೃಷ್ಣ ಸಾಹಾ ಇವರನ್ನು ಬಂಧಿಸಿದ್ದಾರೆ. ಈ ಹಿಂದೆ ಈ ಹಗರಣದ ಪ್ರಕರಣದಲ್ಲಿ ತೃಣಮೂಲದ ಶಾಸಕ ಹಾಗೂ ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಮತ್ತು ಶಾಸಕ ಮಾಣಿಕ ಭಟ್ಟಾಚಾರ್ಯ ಇವರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಭಾಜಪದ ಶಾಸಕ ಮತ್ತು ವಿರೋಧಿ ಪಕ್ಷದ ನಾಯಕ ಶುಭೆಂದು ಅಧಿಕಾರಿ ಇವರು, ಅಧಿಕಾರದಲ್ಲಿರುವ ತೃಣಮೂಲ ಕಾಂಗ್ರೆಸ್ ‘ಸುಲಿಗೆ ಆಯೋಗ’ ಆರಂಭಿಸಿದೆ. ಇದರಲ್ಲಿ ಅವರ ಜನಪ್ರತಿನಿಧಿಗಳು ದಲ್ಲಾಳಿಯ ಕೆಲಸ ಮಾಡುತ್ತಿದ್ದರು, ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಭ್ರಷ್ಟಾಚಾರದ ಪಕ್ಷವಾಗಿರುವ ತೃಣಮೂಲ ಕಾಂಗ್ರೆಸ್ !
  • ಇಂತಹ ಪಕ್ಷವನ್ನು ನಿಷೇಧಿಸಬೇಕು !