ಮುಖದ ಮೇಲೆ ಭಾರತದ ರಾಷ್ಟ್ರಧ್ವಜವನ್ನು ಚಿತ್ರಿಸಿದ್ದಕ್ಕಾಗಿ ಹುಡುಗಿಗೆ ಪಂಜಾಬ್‌ನ ಸ್ವರ್ಣ ಮಂದಿರದಲ್ಲಿ ಪ್ರವೇಶ ನಿರಾಕರಣೆ

ಚಂಡೀಗಢ (ಪಂಜಾಬ್) – ಅಮೃತಸರದ ಪ್ರಸಿದ್ಧ ಸ್ವರ್ಣ ಮಂದಿರದ ಕುರಿತ ವೀಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದರಲ್ಲಿ ಓರ್ನ ಹುಡುಗಿಯು ಮುಖದ ಮೇಲೆ ಭಾರತದ ರಾಷ್ಟ್ರಧ್ವಜವನ್ನು ಚಿತ್ರಿಸಿದ್ದರಿಂದ ಅವಳನ್ನು ದೇವಸ್ಥಾನದ ಹೊರಗೆ ಇರುವ ಅಧಿಕಾರಿಗಳು ದೇವಸ್ಥಾನವನ್ನು ಪ್ರವೇಶಿಸದಂತೆ ತಡೆಯುತ್ತಿರುವುದು ಕಂಡುಬರುತ್ತದೆ. ‘ಇದು ಪಂಜಾಬ್ ಆಗಿರುವಾಗ ನೀವು ಭಾರತದ ರಾಷ್ಟ್ರಧ್ವಜವನ್ನು ಹೇಗೆ ಚಿತ್ರಿಸುತ್ತೀರಿ ?’, ಎಂದು ಅಧಿಕಾರಿಯು ಹುಡುಗಿ ಮತ್ತು ಅವಳೊಂದಿಗೆ ಬಂದ ವ್ಯಕ್ತಿಯನ್ನು ಗದರಿಸಿದನು. ಈ ಬಗ್ಗೆ ವ್ಯಕ್ತಿಯು, ಪಂಜಾಬ್ ಭಾರತದಲ್ಲಿಲ್ಲವೇ ? ಎಂದು ಕೇಳಿದಾಗ ಅಧಿಕಾರಿಯು ಸಿಟ್ಟಿಗೆದ್ದು ಹುಡುಗಿಯ ಕೈಯಿಂದ ಮೊಬೈಲ್ ಕಿತ್ತುಕೊಳ್ಳುತ್ತಿರುವುದು ಕೂಡ ಈ ವಿಡಿಯೋದಲ್ಲಿ ಕಂಡು ಬಂದಿದೆ.

ಈ ಘಟನೆಗೆ ‘ಶಿರೋಮಣಿ ಗುರುದ್ವಾರ ಪ್ರಬಂಧಕ್ ಕಮಿಟಿ’ಯ ಪ್ರಧಾನ ಕಾರ್ಯದರ್ಶಿ ಗುರುಚರಣ್ ಸಿಂಗ್ ಗ್ರೆವಾಲ್ ಇವರು ಕ್ಷಮೆಯಾಚಿಸಿದರೂ, ಅವರು ಸಂಬಂಧಪಟ್ಟ ಅಧಿಕಾರಿಯ ಪರ ವಹಿಸಿದರು. ಅವರು, ಯುವತಿಯ ಮುಖದ ಮೇಲೆ ಚಿತ್ರಿಸಿದ ಧ್ವಜದಲ್ಲಿ ‘ಅಶೋಕ ಚಕ್ರ’ ಇಲ್ಲದಿರುವುದರಿಂದ ಅದು ರಾಷ್ಟ್ರಧ್ವಜವಾಗಿರಲು ಸಾಧ್ಯವಿಲ್ಲ. ಇದು ಕಾಂಗ್ರೆಸ್ ಅಥವಾ ಇತರ ಯಾವುದೇ ರಾಜಕೀಯ ಪಕ್ಷದ ಧ್ವಜವೂ ಆಗಿರಬಹುದು ಎಂದು ಹೇಳಿದರು.

(ಸೌಜನ್ಯ : Times Of India)

ಈ ಘಟನೆ ಕುರಿತು ಟ್ವಿಟ್ಟರ್ ನಲ್ಲಿ ವಿವಾದ ಆರಂಭವಾಗಿದೆ. ಇದಕ್ಕೆ ಸಂಬಂಧಿಸಿದಂತೆ ‘ಇಸ್ಕಾನ್’ ವಕ್ತಾರ ರಾಧಾರಮಣ ದಾಸ್ ಇವರು ಟ್ವೀಟ್ ಮಾಡಿ, ಈ ಪ್ರಕರಣದಲ್ಲಿ ಸಂಬಂಧಪಟ್ಟ ಖಲಿಸ್ತಾನಿಯನ್ನು ಕೂಡಲೇ ಬಂಧಿಸಬೇಕು. ಈ ಘಟನೆಯ ಬಗ್ಗೆ ಯಾವುದೇ ಕೃತಿ ಮಾಡದೇ ಇದ್ದರೆ ಯೋಗ್ಯ ಆಗುವುದಿಲ್ಲ, ಬದಲಿಗೆ ಇದು ಈ ಜನರ ಅಹಂಕಾರವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು. ಆದರೆ ಕೆಲವರು ಮಾತ್ರ ಈ ಸಂಬಂಧ ಯುವತಿಗೆ ವಿರೋಧಿಸುತ್ತಾ ಮುಖಕ್ಕೆ ರಾಷ್ಟ್ರಧ್ವಜ ಚಿತ್ರಿಸುವ ಅಂಶವಾಗಿದೆಯೇ ?, ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ.

ಸಂಪಾದಕೀಯ ನಿಲುವು

  • ಇದು ಪಂಜಾಬ್‌ನಲ್ಲಿ ಪ್ರತ್ಯೇಕವಾದ ಯಾವ ಮಟ್ಟಕ್ಕೆ ತಲುಪಿದೆ ಎಂಬುದನ್ನು ತೋರಿಸುತ್ತದೆ. ಇಂತಹ ಎಲ್ಲಾ ಪ್ರತ್ಯೇಕತಾವಾದಿ ತತ್ವಗಳ ಮೇಲೆ ಕೇಂದ್ರ ಸರಕಾರ ಸಕಾಲದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದರೆ ಪರಿಸ್ಥಿತಿ ಕೈ ಮೀರುವ ಸಾಧ್ಯತೆಯೇ ಹೆಚ್ಚು !
  • ಪ್ರತಿಯೊಬ್ಬರೂ ರಾಷ್ಟ್ರಭಿಮಾನ ಹೊಂದಿರಬೇಕು; ಆದರೆ ಮುಖಕ್ಕೆ ರಾಷ್ಟ್ರಧ್ವಜವನ್ನು ಚಿತ್ರಿಸುವುದು ರಾಷ್ಟ್ರಧ್ವಜಕ್ಕೆ ಮಾಡಿದ ಅವಮಾನ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು !