‘ಹಿಂದೂ ರಾಷ್ಟ್ರದ ವಾತಾವರಣದಿಂದಲೇ ಖಲಿಸ್ತಾನಿ ಅಮೃತಪಾಲ ಖಲಿಸ್ತಾನದ ಬೇಡಿಕೆಯನ್ನಿಡುವ ಧೈರ್ಯ ಮಾಡುತ್ತಿದ್ದಾನೆ’ ! (ಅಂತೆ) – ಅಶೋಕ ಗೆಹಲೋಟ, ರಾಜಸ್ಥಾನ ಮುಖ್ಯಮಂತ್ರಿ

ರಾಜಸ್ಥಾನದ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಅಶೋಕ ಗೆಹಲೋಟ ಇವರ ಹಿಂದೂ ದ್ವೇಷಿ ಹೇಳಿಕೆ !

ಜಯಪುರ (ರಾಜಸ್ಥಾನ) – ದೇಶದ ವಾತಾವರಣವನ್ನು ಹಿಂದೂ ರಾಷ್ಟ್ರದ ಪರವಾಗಿ ನಿರ್ಮಾಣ ಮಾಡಿರುವುದರಿಂದಲೇ ಖಲಿಸ್ತಾನಿ ಅಮೃತಪಾಲನಿಗೆ ಖಲಿಸ್ತಾನದ ಬೇಡಿಕೆ ಮಾಡುವ ಧೈರ್ಯವಾಗಿದೆಯೆಂದು ರಾಜಸ್ಥಾನದ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಅಶೋಕ ಗೆಹಲೋಟರು ಪತ್ರಕರ್ತರೊಂದಿಗೆ ಮಾತನಾಡುವಾಗ ಹೇಳಿದರು.

(ಸೌಜನ್ಯ : Amar Ujala)

ಅವರು ತಮ್ಮ ಮಾತನ್ನು ಮುಂದುವರಿಸುತ್ತಾ, ‘ಪ್ರಧಾನಮಂತ್ರಿ ಮೋದಿ ಮತ್ತು ಸರಸಂಘ ಸಂಚಾಲಕರಾದ ಮೋಹನ ಭಾಗವತರು ಹಿಂದೂ ರಾಷ್ಟ್ರದ ಬೇಡಿಕೆಯನ್ನು ಹೇಗೆ ಮಾಡಬಲ್ಲರು?’ ಎಂದು ಅಮೃತಪಾಲ ಕೇಳುತ್ತಿದ್ದಾನೆ ಎಂದು ಹೇಳಿದರು. ಇಂದಿರಾ ಗಾಂಧಿಯವರು ಖಲಿಸ್ತಾನದ ಬೇಡಿಕೆಯನ್ನು ಒಪ್ಪಿಕೊಳ್ಳದೇ ಇರುವುದರಿಂದಲೇ ಅವರ ಹತ್ಯೆಯಾಯಿತು. ಈಗ ದೇಶದಲ್ಲಿ ಧರ್ಮದ ರಾಜಕಾರಣವನ್ನು ಮಾಡಲಾಗುತ್ತಿದೆ. ಪ್ರಧಾನಮಂತ್ರಿ ಮೋದಿಯವರು ಮಹಾತ್ಮಾ ಗಾಂಧಿಯವರ ದೇಶದಲ್ಲಿರುತ್ತಾರೆ ಎನ್ನುವ ಕಾರಣದಿಂದಲೇ ವಿದೇಶದಲ್ಲಿ ಅವರನ್ನು ಸ್ವಾಗತಿಸಲಾಗುತ್ತಿದೆ ಎಂದೂ ಮುಖ್ಯಮಂತ್ರಿ ಗೆಹಲೋಟರು ಹೇಳಿದರು. (ಇದು ಗೆಹಲೋಟರ ನವೀನ ಸಂಶೋಧನೆ- ಸಂಪಾದಕರು)

ಸಂಪಾದಕೀಯ ನಿಲುವು

  • ಹಿಂದೂ ರಾಷ್ಟ್ರದ ವಾತಾವರಣದ ಕಾರಣದಿಂದ ಯಾರೋ ಒಬ್ಬ ಅಮೃತಪಾಲನು ಖಲಿಸ್ತಾನದ ಬೇಡಿಕೆಯನ್ನು ಮಾಡುತ್ತಿದ್ದಲ್ಲಿ, ದೇಶದ ಕೋಟ್ಯಾವಧಿ ಹಿಂದೂಗಳ ಹಿಂದೂ ರಾಷ್ಟ್ರದ ಬೇಡಿಕೆಯನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ, ಎನ್ನುವುದನ್ನು ಗೆಹಲೋಟರು ಗಮನದಲ್ಲಿಡಬೇಕು.
  • ಖಲಿಸ್ತಾನಿ ಭಯೋತ್ಪಾದಕ ಭಿಂದ್ರನವಾಲೆಯನ್ನು ಬೆಳೆಸುವ ರಾಷ್ಟ್ರಘಾತುಕ ಕೃತ್ಯವನ್ನು ಕಾಂಗ್ರೆಸ್ ಮಾಡಿತ್ತು, ಈ ವಿಷಯದಲ್ಲಿ ಗೆಹಲೋಟರು ಏಕೆ ಮಾತನಾಡುವುದಿಲ್ಲ? ಒಂದು ರೀತಿಯಲ್ಲಿ ಗೆಹಲೋಟರು ಈ ಮಾಧ್ಯಮದಿಂದ ಅಮೃತಪಾಲನ ಕೃತ್ಯವನ್ನು ಸಮರ್ಥಿಸುತ್ತಿದ್ದಾರೆ ಎಂಬುದನ್ನು ಗಮನದಲ್ಲಿಡಿ!