ಸೋನಿಯಾ ಗಾಂಧಿ ಅವರಿಗೆ ಆಪ್ತರಾಗಿರುವ ಹರ್ಷ ಮಂದರ್ ಅವರ ಸಂಸ್ಥೆಯನ್ನು ಸಿಬಿಐ ತನಿಖೆಗೆ ಒಳಪಡಿಸಲಿದೆ

ವಿದೇಶಿ ದೇಣಿಗೆ ಕಾಯ್ದೆಯ ಉಲ್ಲಂಘನೆ ಮಾಡಿದ ಪ್ರಕರಣ

ನವ ದೆಹಲಿ – ತಥಾಕಥಿತ ಸಾಮಾಜಿಕ ಕಾರ್ಯಕರ್ತರು ಮತ್ತು ಸಚ್ಚರ ಆಯೋಗದ ಮಾಜಿ ಸದಸ್ಯ ಹರ್ಷ ಮಂದೆರ ಅವರ ’ಅಮನ್ ಬಿರಾದಾರಿ’ ಈ ಸಂಸ್ಥೆಯ ವಿರುದ್ಧ ಸಿಬಿಐ ವಿಚಾರಣೆ ನಡೆಸುವಂತೆ ಕೇಂದ್ರ ಗೃಹ ಸಚಿವಾಲಯ ಆದೇಶಿಸಿದೆ. ಮಂದೆರ ಅವರು ವಿದೇಶಿ ದೇಣಿಗೆ ಕಾಯ್ದೆಯನ್ನು ಉಲ್ಲಂಘಿಸಿ ದೇಣಿಗೆ ಪಡೆದ ಆರೋಪವಿದೆ. ಹರ್ಷ ಮಂದೆರ ಅವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ಆಪ್ತರಾಗಿದ್ದಾರೆ ಎಂದು ಹೇಳಲಾಗುತ್ತದೆ.