ಭಾರತ ಒಂದು ಉದಯೋನ್ಮುಖ ಶಕ್ತಿ ! – ಇರಾನ್ ರಾಯಭಾರಿ

ಇರಾಜ್ ಇಲಾಹಿ, ಇರಾನ್ ರಾಯಭಾರಿ

ನವ ದೆಹಲಿ – ಭಾರತ ಒಂದು ಉದಯೋನ್ಮುಖ ಶಕ್ತಿಯಾಗಿದ್ದು ಅದರ ಬಳಿ ಶಕ್ತಿಶಾಲಿ ಅರ್ಥ ವ್ಯವಸ್ಥೆ ಇದೆ. ಆದ್ದರಿಂದ ಭಾರತ ಸುಲಭವಾಗಿ ಪಾಶ್ಚಿಮಾತ್ಯ ದೇಶದ ಒತ್ತಡವನ್ನು ತಿರಸ್ಕರಿಸಬಹುದು, ಎಂದು ಭಾರತದಲ್ಲಿನ ಇರಾನ್ ರಾಯಭಾರಿ ಇರಾಜ್ ಇಲಾಹಿ ಇವರು ಪ್ರತಿಪಾದಿಸಿದರು. ಅವರು ಮಾತು ಮುಂದುವರಿಸಿ, ಜಗತ್ತಿನ ಒತ್ತಡ ತಿರಸ್ಕರಿಸಿ ಭಾರತವು ರಷ್ಯಾದಿಂದ ತೈಲ ಆಮದು ಮುಂದುವರೆಸಿದೆ. ಭಾರತದ ಹೀಗೆ ದೃಢವಾದ ನಿಲುವಿನಲ್ಲಿ ಯಾವಾಗಲೂ ತೆಗೆದುಕೊಳ್ಳಲಿದೆ, ಎಂಬ ನಂಬಿಕೆ ಇದೆ ಎಂದು ಹೇಳಿದರು.