ರಾಷ್ಟ್ರವು ಒಂದು ಸಾಂಸ್ಕೃತಿಕ ಕಲ್ಪನೆವಾಗಿದ್ದು ಭಾರತವು ಹಿಂದೂ ರಾಷ್ಟ್ರವಾಗಿದೆ! – ರಾ.ಸ್ವ. ಸಂಘ

ಸಮಲಖಾ (ಹರಿಯಾಣ) – ನಾವು ಹಿಂದೂ ರಾಷ್ಟ್ರದ ಬಗ್ಗೆ ೧೦೦ ವರ್ಷಗಳಿಂದ ನಿಲುವನ್ನು ಮಂಡಿಸುತ್ತಿದ್ದೇವೆ. ರಾಷ್ಟ್ರವು ಒಂದು ಸಾಂಸ್ಕೃತಿಕ ಕಲ್ಪನೆಯಾಗಿದ್ದು ಭಾರತವು ಹಿಂದೂ ರಾಷ್ಟ್ರವೆ ಆಗಿದೆ. ಹಾಗಾಗಿ ಸಂವಿಧಾನದ ಮೂಲಕ ಸ್ವತಂತ್ರ ಹಿಂದೂ ರಾಷ್ಟ್ರ ಎಂದು ಗುರುತಿಸುವ ಅಗತ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಇವರು ಅಭಿಪ್ರಾಯಪಟ್ಟಿದ್ದಾರೆ. ಅವರು ಇಲ್ಲಿ ನಡೆದ ಸಂಘದ ಪ್ರತಿನಿಧಿ ಸಭೆಯ ಸಮಾರೋಪದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

(ಸೌಜನ್ಯ – VSK Haryana)