ದೆಹಲಿಯಲ್ಲಿ ಅಂಗವಿಕಲ ಯುವತಿಯ ಮೇಲೆ ಅತ್ಯಾಚಾರಗೈದ ಸದ್ದಾಂ ಹುಸೇನ್ !

ಸರಕಾರವು ಇಂತಹ ಕಾಮುಕರಿಗೆ ನಡುರಸ್ತೆಯಲ್ಲಿ ಗಲ್ಲಿಗೇರಿಸಬೇಕೆಂದು ಜನರ ಆಗ್ರಹ !

ದೆಹಲಿ – ಇಲ್ಲಿನ ಮೌಜ‌ಪುರ ಪ್ರದೇಶದಲ್ಲಿ 22 ವರ್ಷದ ಅಂಗವಿಕಲ ಯುವತಿಯ ಮೇಲೆ 30 ವರ್ಷದ ಸದ್ದಾಂ ಹುಸೇನ್ ಅತ್ಯಾಚಾರ ಎಸಗಿದ್ದಾನೆ. ಈ ಪ್ರಕರಣದಲ್ಲಿ ಸದ್ದಾಂ ಹುಸೇನ್ ನನ್ನು ಉತ್ತರ ಪ್ರದೇಶದ ಲಕ್ಷ್ಮಣಪುರಿಯಿಂದ ಬಂಧಿಸಲಾಗಿದೆ. ಹುಸೇನನು ಬಿಹಾರದ ಗೋಪಾಲಗಂಜ್ ಜಿಲ್ಲೆಯ ನಿವಾಸಿಯಾಗಿದ್ದಾನೆ. ಈ ಪ್ರಕರಣದಲ್ಲಿ ಯುವತಿಯ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಬಳಿಕ ಆಕೆಯ ಮೇಲೆ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ. ಈ ಯುವತಿಯು ತನ್ನ ಪೋಷಕರೊಂದಿಗೆ ಮೌಜ‌ಪುರದಲ್ಲಿ ವಾಸಿಸುತ್ತಿದ್ದಾಳೆ. ಮಾರ್ಚ್ 9 ರಂದು ಈ ಯುವತಿ ಮನೆಯಲ್ಲಿ ಒಬ್ಬಳೇ ಇದ್ದಳು. ಆಗ ಸದ್ದಾಂ ಆಕೆಯನ್ನು ತನ್ನ ಮನೆಗೆ ಕರೆಸಿ ಅತ್ಯಾಚಾರ ಎಸಗಿದನು.