ಜಿನೀವಾ (ಸ್ವಿಟ್ಜರ್ಲೆಂಡ್) ನಲ್ಲಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಪರಿಷತ್ತಿನ ಕಚೇರಿಯ ಹೊರಗೆ ಭಾರತ ವಿರೋಧಿ ಫಲಕ !

ಜಿನೀವಾ (ಸ್ವಿಟ್ಜರ್ಲೆಂಡ್) – ಇಲ್ಲಿನ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಪರಿಷತ್ತಿನ ಕೇಂದ್ರ ಕಚೇರಿ ಬಳಿ ಭಾರತ ವಿರೋಧಿ ಅಪಪ್ರಚಾರ ಮಾಡುತ್ತಿರುವ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋವನ್ನು ಭಾರತೀಯ ವಿದ್ಯಾರ್ಥಿಯೊಬ್ಬರು ಮಾಡಿದ್ದಾರೆ. ಇದರಲ್ಲಿ ಅನೇಕ ಭಿತ್ತಿಚಿತ್ರಗಳನ್ನು ಮತ್ತು ಫಲಕಗಳನ್ನು ರಸ್ತೆಬದಿಯಲ್ಲಿ ಅಳವಡಿಸಲಾಗಿದೆ. ಅದರಲ್ಲಿ ಭಾರತ ವಿರೋಧಿ ವಿಷಯಗಳನ್ನು ಬರೆಯಲಾಗಿದೆ. ಇದರಿಂದ ಭಾರತವನ್ನು ಅವಮಾನಿಸಲಾಗುತ್ತಿದೆ. ಈ ವಿಡಿಯೋದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಯಾಗುತ್ತಿದೆ.

ಈ ಭಿತ್ತಿಪತ್ರಗಳಲ್ಲಿ, ಭಾರತದಲ್ಲಿ ಮಹಿಳೆಯರೊಂದಿಗೆ ಗುಲಾಮರಂತೆ ವರ್ತಿಸಲಾಗುತ್ತಿದೆ. ಭಾರತದಲ್ಲಿ ಬಾಲ್ಯವಿವಾಹಗಳು ನಡೆಯುತ್ತಿದ್ದು, ಆ ಮೂಲಕ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಕ್ರೈಸ್ತರು ಸರಕಾರ ಪ್ರಾಯೋಜಿತ ಭಯೋತ್ಪಾದನೆಯನ್ನು ಎದುರಿಸಬೇಕಾಗುತ್ತಿದೆ. ಭಾರತದಲ್ಲಿ ಗುಂಪುಗಳ ದಾಳಿಯಲ್ಲಿ ಅಲ್ಪಸಂಖ್ಯಾತರು ಕೊಲ್ಲಲ್ಪಡುತ್ತಿದ್ದಾರೆ ಎಂದು ಬರೆಯಲಾಗಿದೆ.

(ಸೌಜನ್ಯ : ANI News)

ಸಂಪಾದಕೀಯ ನಿಲುವು

ಇದು ಉದ್ದೇಶಪೂರ್ವಕವಾಗಿ ಭಾರತವನ್ನು ಅವಮಾನಿಸಲು ರೂಪಿಸಿರುವ ಸಂಚಿನ ಒಂದು ಭಾಗವಾಗಿದೆ ಎಂಬುದು ಗಮನಕ್ಕೆ ಬರುತ್ತದೆ ! ಭಾರತವು ಇದರ ಹಿಂದಿರುವ ವ್ಯಕ್ತಿಗಳನ್ನು ಕಂಡುಹಿಡಿದು ಜಗತ್ತಿನೆದುರು ಬಹಿರಂಗಪಡಿಸುವುದು ಅವಶ್ಯಕವಾಗಿದೆ !