`ಖಲಿಸ್ತಾನದ ನಮ್ಮ ಉದ್ದೇಶವನ್ನು ನಿಷೇಧಿತವೆಂದು ನೋಡಬಾರದು !’(ಅಂತೆ) – ಖಲಿಸ್ತಾನ ಬೆಂಬಲಿಗೆ ಅಮೃತಪಾಲ ಸಿಂಹ

ಖಲಿಸ್ತಾನ ಬೆಂಬಲಿಗೆ ಅಮೃತಪಾಲ ಸಿಂಹ

ಅಮೃತಸರ – ಖಲಿಸ್ತಾನದ ನಮ್ಮ ಉದ್ದೇಶ ಕೆಟ್ಟದ್ದು ಮತ್ತು ನಿಷೇಧಿತ ದೃಷ್ಟಿಯಿಂದ ನೋಡಬಾರು ಎಂದು `ವಾರೀಸ ಪಂಜಾಬ ದೆ’ ಈ ಖಲಿಸ್ತಾನ ಬೆಂಬಲಿತ ಸಂಘಟನೆಯ ಮುಖ್ಯಸ್ಥ ಅಮೃತಪಾಲ ಸಿಂಹ ಇವರು ವಿಷಕಾರಿದ್ದಾರೆ. “ಬೌದ್ಧಿಕ ದೃಷ್ಟಿಕೋನದಿಂದ ಅವರ ರಾಜಕೀಯದ ಲಾಭವನ್ನು ನೋಡಬೇಕು. ಇದು ಒಂದು ವಿಚಾರಧಾರೆಯಾಗಿದೆ ಮತ್ತು ವಿಚಾರಧಾರೆ ಯಾವತ್ತೂ ಸಾಯುವುದಿಲ್ಲ. ನಾವು ಈ ಖಲಿಸ್ತಾನವನ್ನು ದೆಹಲಿಯಿಂದ ಕೇಳುತ್ತಿಲ್ಲ’ ಎಂದು ಅವರು ಹೇಳಿದ್ದಾರೆ.

ಸಂಪಾದಕರ ನಿಲುವು

* ಖಲಿಸ್ತಾನವಾದಿಗಳು ಈಗ ಬಹಿರಂಗವಾಗಿ ತಮ್ಮ ವಿಭಜನೆಯ ಉದ್ದೇಶವನ್ನು ಸಾರ್ವಜನಿಕರ ಒಪ್ಪಿಗೆ ಸಿಗಬೇಕೆಂದು ನೋಡುತ್ತಿದ್ದಾರೆ ಎನ್ನುವುದೇ ಇದರಿಂದ ಸ್ಪಷ್ಟವಾಗುತ್ತದೆ ! ಸರಕಾರ ಈಗಲಾದರೂ ಖಲಿಸ್ತಾನಿಗಳ ಚಟುವಟಿಕೆಗಳನ್ನು ನಷ್ಟಗೊಳಿಸುವರೇ ?