ಖಲಿಸ್ತಾನ್ ಭಾವನೆ ಶಾಶ್ವತವಾಗಿ ಉಳಿಯಲಿದ್ದೂ ನೀವು ಅದನ್ನು ಹತ್ತಿಕ್ಕಲು ಸಾಧ್ಯವಿಲ್ಲ !

ಖಲಿಸ್ತಾನಿ ಸಂಘಟನೆಯ ಮುಖ್ಯಸ್ಥ ಅಮೃತಪಾಲ್ ಸಿಂಗ್ ಹೇಳಿಕೆ

ಹಿಂಸಾಚಾರದ ಹಾದಿಯನ್ನು ಎಂದಿಗೂ ಅನುಸರಿಸುವುದಿಲ್ಲ ಎಂದು ಸ್ಪಷ್ಟನೆ !

ಅಮೃತಸರ (ಪಂಜಾಬ) – ಖಲಿಸ್ತಾನದ ಆಗ್ರಹವು ಈ ದುಃಖವನ್ನು ದೂರಗೊಳಿಸಲು ಮಾಡಲಾಗುತ್ತಿದೆ. ಅದು ನಮ್ಮ ಅಸ್ತಿತ್ವಕ್ಕಾಗಿ ಇದೆ. ಖಲಿಸ್ತಾನಿಗಳ ಭಾವನೆ ಶಾಶ್ವತವಾಗಿರಲಿದೆ. ನೀವು ಅದನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ‘ವಾರಿಸ್ ಪಂಜಾಬ್ ದೇ’ (ಪಂಜಾಬ್‌ನ ವಾರಸುದಾರರು) ಸಂಘಟನೆಯ ಮುಖ್ಯಸ್ಥ ಅಮೃತಪಾಲ್ ಸಿಂಗ್ ಇವರು ‘ಇಂಡಿಯಾ ಟುಡೇ’ ನಿಯತಕಾಲಿಕಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. “ನಾವು ಎಂದಿಗೂ ಹಿಂಸಾಚಾರವನ್ನು ಅವಲಂಬಿಸುವುದಿಲ್ಲ. ಹಿಂಸೆಯು ನಮ್ಮನ್ನು ಹೆಚ್ಚು ನೋಯಿಸುತ್ತದೆ ಎಂದು ನಮಗೆ ತಿಳಿದಿದೆ. ನಾನು ಯಾವುದೇ ಭ್ರಮೆಯಲ್ಲಿಲ್ಲ; ಆದರೆ ನಮ್ಮನ್ನು ಕೊಲ್ಲಲು ಯಾರಿಗೂ ಬಿಡುವುದಿಲ್ಲ’ ಎಂದೂ ಅವರು ಈ ವೇಳೆ ಸ್ಪಷ್ಟ ಪಡಿಸಿದರು.

ಸಂದರ್ಶನದಲ್ಲಿ ಅಮೃತಪಾಲ್ ಮಂಡಿಸಿದ ಅಂಶಗಳು

1. ನಾನು ನನ್ನನ್ನು ಖಾಲಿಸ್ತಾನದ ಪ್ರಚಾರಕ ಎಂದು ತಿಳಿಯುವುದಿಲ್ಲ. ರಾಷ್ಟ್ರವಾದ ಪವಿತ್ರವಾದ ವಿಷಯವಲ್ಲ. ಪ್ರಜಾಪ್ರಭುತ್ವದಲ್ಲಿ ವಿಭಿನ್ನ ವಿಚಾರಗಳಿರಬೇಕು. ಇದು ಅಮೃತಪಾಲ್ ವಿಷಯವಲ್ಲ

2. ನಾನು ಹಿಂಸಾತ್ಮಕ ಅಲ್ಲ. ನಾನು ನನ್ನ ಅಸ್ಮಿತೆಯನ್ನು ತ್ಯಜಿಸುವುದಿಲ್ಲ. ನನ್ನ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಕೆಲವರು ನಾನು ಭಾಜಪ ಬೆಂಬಲಿಗ ಎಂದು ಹೇಳುತ್ತಾರೆ, ಕೆಲವರು ನಾನು ಪಾಕಿಸ್ತಾನದ ಬೆಂಬಲಿಗ ಎಂದು ಹೇಳುತ್ತಾರೆ. ನಾನು ಕೇವಲ ನನ್ನ ಗುರು ಗ್ರಂಥ ಸಾಹಿಬ್ ನ ಬೆಂಬಲಿಗನಾಗಿದ್ದೇನೆ.

3. ನನ್ನ ಸಂಘಟನೆಯನ್ನು ಹೊರತುಪಡಿಸಿ ಯಾರೂ ನನ್ನನ್ನು ಬೆಂಬಲಿಸುವುದಿಲ್ಲ. ನಾನು ಯಾವುದೇ ‘ಮೀಡಿಯಾ ಟ್ರಾಯಲ್’ನ (ಮಾಧ್ಯಮಗಳು ನ್ಯಾಯಾಧೀಶರ ಪಾತ್ರದಲ್ಲಿದ್ದು ವಾರ್ತೆ ಮಾಡಿದ) ಭಾಗ ಆಗಿಲ್ಲ.

4. 1980 ರ ದಶಕದ ಖಲಿಸ್ತಾನಿ ಜಜೇಲ್ ಭಿಂದ್ರನವಾಲೆ ಅವರೊಂದಿಗಿನ ಹೋಲಿಕೆಯನ್ನು ಉಲ್ಲೇಖಿಸಿ ಅಮೃತಪಾಲ ಇವರು, ನಾನು ಸಾಮಾನ್ಯ ಬಟ್ಟೆಗಳನ್ನು ಧರಿಸುತ್ತೇನೆ. ಅದು ಭಿಂದ್ರನವಾಲೆಯ ಉಡುಪನ್ನು ಆಧರಿಸಿಲ್ಲ ಎಂದು ಹೇಳಿದರು.

ಸಂಪಾದಕರ ನಿಲುವು

* ‘ಖಲಿಸ್ತಾನಿಗಳು ಹಿಂಸಾಚಾರದ ಹಾದಿಯನ್ನು ಅನುಸರಿಸುವುದಿಲ್ಲ’, ಎಂಬುದನ್ನು ಯಾರು ನಂಬುವರು ? ಪಂಜಾಬ್‌ನ ಅಜಾನಾಲ್ ಪೊಲೀಸ್ ಠಾಣೆಯಲ್ಲಿ ಸಾವಿರಾರು ಖಲಿಸ್ತಾನ್ ಪರ ಬೆಂಬಲಿಗರ ಕೈಯಲ್ಲಿ ಬಂದೂಕು, ಕತ್ತಿಗಳು ಮತ್ತು ಕೋಲುಗಳು ಸತ್ಯಾಗ್ರಹಕ್ಕಾಗಿ ಇರಲಿಲ್ಲ. ಈ ಆಯುಧಗಳ ಬೆದರಿಕೆಯಿಂದ ತಮ್ಮ ಸಹಚರನನ್ನು ಬಿಡಿಸಲು ಅವರು ಪೊಲೀಸರನ್ನು ಅನಿವಾರ್ಯಗೊಳಿಸಿದರು !

* ಸ್ವತಂತ್ರ ಪಾಕಿಸ್ತಾನದ ರಚನೆಯಾದ ನಂತರ ಅದರ ಸ್ಥಿತಿ ಏನಾಯಿತು ಎಂಬುದನ್ನು ಅವರ ಸಹಾಯ ಪಡೆಯುತ್ತಿರುವ ಖಲಿಸ್ತಾನಿಗಳು ಗಮನಿಸಬೇಕು !